ಬಾಲಿವುಡ್ ನಟಿ ತಮನ್ನಾ ಕನ್ನಡದವ್ರು, ಪೂರ್ವಜರ ಮೂಲ ಕನ್ನಡದ ನೆಲ : ಇದು ನಿಜಾನಾ?

ಮೈಸೂರು ಸ್ಯಾಂಡಲ್ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಕಂಪನಿಯ ಹೊಸ ರಾಯಭಾರಿಯಾಗಿ ಬಾಲಿವುಡ್‍ನ ಜನಪ್ರಿಯ ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ವ್ಯಕ್ತಿಯೊಬ್ಬರು ಈ ನಟಿ ಮೂಲತಃ ಕನ್ನಡದವರು ಎನ್ನುವ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಂಡಿದ್ದು ಚರ್ಚೆಗೆ ವೇದಿಕೆಯಾಗಿದೆ. ಹಾಗಾದ್ರೆ ಮಿಲ್ಕಿ ಬ್ಯೂಟಿ ತಮನ್ನಾ ಕನ್ನಡದವರು ಅನ್ನೋದು ನಿಜನಾ? ಏನಿದರ ಅಸಲಿಯತ್ತು ಎನ್ನುವ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಾಲಿವುಡ್ ನಟಿ ತಮನ್ನಾ ಕನ್ನಡದವ್ರು, ಪೂರ್ವಜರ ಮೂಲ ಕನ್ನಡದ ನೆಲ : ಇದು ನಿಜಾನಾ?
ವೈರಲ್ ಪೋಸ್ಟ್
Image Credit source: Facebook

Updated on: May 23, 2025 | 1:03 PM

ಕರ್ನಾಟಕದ ಸರ್ಕಾರದ ಒಡೆತನದಲ್ಲಿರುವ ಮೈಸೂರು ಸ್ಯಾಂಡಲ್ ಸೋಪ್​ (Mysore sandal soap) ಗೆ ಹೊಸ ರಾಯಭಾರಿಯನ್ನು ನೇಮಕ ಮಾಡಲಾಗಿದೆ. ಮೈಸೂರು ಸ್ಯಾಂಡಲ್ ಸೋಪ್ ಗೆ ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾ (Tamanna bhatiya) ನೇಮಕಗೊಂಡಿದ್ದಾರೆ. ಇದಕ್ಕಾಗಿ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇತ್ತ ಕೆಲವರು ತಮನ್ನಾ ಬದಲು ಕನ್ನಡದಲ್ಲಿ ಸಾಕಷ್ಟು ನಟಿಯರು ಇದ್ದರು ಅವರನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಆದರೆ ಕೃಷ್ಣ ಭಟ್ ಹೆಸರಿನ ವ್ಯಕ್ತಿ, ಬಾಲಿವುಡ್ ನಟಿ ತಮನ್ನಾ ಮೂಲತಃ ಕನ್ನಡದವರು, ಹೆಸರನ್ನು ಆಧುನಿಕರಿಸಿ ಇಟ್ಟುಕೊಂಡಿದ್ದಾರೆ ಎಂದು ಪೋಸ್ಟ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾ ದಲ್ಲಿ ಕಾಲೆಳೆದಿದ್ದಾರೆ.

Krishna bhat ಹೆಸರಿನ ಫೇಸ್ಬುಕ್ ಖಾತೆಯಲ್ಲಿ ತಮನ್ನಾ ಕುರಿತಾದ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ಪೋಸ್ಟ್ ನಲ್ಲಿ ಮೈಸೂರು ಸ್ಯಾಂಡಲ್ ಸಂಸ್ಥೆಗೆ ರಾಯಭಾರಿಯಾಗಿ ಆಯ್ಕೆಯಾಗಿರುವ ತಮನ್ನಾ ಮೂಲತಃ ಕನ್ನಡದವರು. ಅವರ ಪೂರ್ವಜರ ಮೂಲ ಕನ್ನಡದ ನೆಲ. ಮೂಲ ಪೂರ್ವಜರ ಪೈಕಿ ಒಬ್ಬರ ಹೆಸರು ತಮ್ಮಣ್ಣ ಆಗಿತ್ತು. ಅವರ ತಂದೆ ತಾಯಿಯವರು ಇವರ ನೆನಪಿಗೆ ಅದೇ ಹೆಸರನ್ನು ಸ್ವಲ್ಪ ಆಧುನೀಕರಿಸಿ ತಮನ್ನಾ ಎಂದು ಹೆಸರಿಟ್ಟಿದ್ದಾರೆ. ಕನ್ನಡದ ಹೆಸರನ್ನು ಇಟ್ಟುಕೊಂಡಿರುವ ಅವರಿಗೆ ಕನ್ನಡ ಒಂದಕ್ಷರ ಮಾತನಾಡಲು ಬರದಿದ್ದರೂ ಪರವಾಗಿಲ್ಲ. ಅವರು ತಮ್ಮಣ್ಣ ಎಂಬ ನೆಲಮೂಲದ ಹೆಸರನ್ನು ಇಟ್ಟುಕೊಂಡಿದ್ದಕ್ಕೆ ಅವರಿಗೆ ಎಷ್ಟು ಕೋಟಿ ಕೊಟ್ಟರೂ ಸಾಲದು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಗುರಿ ಸೇರಲು ಅಂಕ ಮುಖ್ಯವಲ್ಲ, ಛಲ ಮುಖ್ಯ : ತನ್ನ ಸಾಧನೆ ಹಾದಿಯನ್ನು ವಿವರಿಸಿದ ಬೆಂಗಳೂರು ಮೂಲದ ಸಿಎ

ಇದನ್ನೂ ಓದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಸೆಕೆ ಎಂದು ಎಟಿಎಂ ಎಸಿಗೆ ಬಂದು ಕುಳಿತ ಕುಟುಂಬ
ಬೈಕ್ ಓಡಿಸುತ್ತಿರುವಾಗಲೇ ಹಿಂಬದಿ ಕುಳಿತ ಪತ್ನಿಯಿಂದ ಪತಿಗ ಬಿತ್ತು ಒದೆ
ರಾಂಗ್ ರೂಟ್​​​ನಲ್ಲಿ ಬಂದು ಬೈಕ್​​​ಗೆ ಡಿಕ್ಕಿ ಹೊಡೆದ ಕಾರು

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಈ ಪೋಸ್ಟ್ ವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ಅದು ತಪ್ಪಾಗಿದೆ, ಅದು ತಮ್ಮಣ್ಣ ಅಲ್ಲ, ತಮನ್ನಾ ಭಟ್, ಉತ್ತರದವರಿಗೆ ರೀಚ್ ಆಗೋಕೆ ಭಾಟಿಯಾ ಅಂತಾ ಇಟ್ಕೊಂಡಿದ್ರು ಎಂದಿದ್ದಾರೆ. ಇನ್ನೊಬ್ಬರು, ಜಾಹೀರಾತಿನಲ್ಲಿ ಅವಳು ಅದೇ ಸೋಪು ಹಚ್ಚಿಕೊಳ್ತಾಳೆ ಅನ್ನೋದಕ್ಕೆ ಏನು ಗ್ಯಾರಂಟಿ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು, ತಮನ್ನಾ ಶೆಟ್ರ ಸಂಬಂಧದವರಾ? ಎಂದು ಕೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ