ಬೆಂಗಳೂರು: ಬಿಜೆಪಿಯವರು ಏನು ಸಾಧನೆ ಮಾಡಿದ್ದಾರೆ ಹೇಳೋದಕ್ಕೆ. ಜನಸ್ಪಂದನ ಅಂದ್ರೇನು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು ಅವರು ಭ್ರಷ್ಟಾಚಾರ ಬಿಟ್ಟರೆ ಬೇರೇನು ಸಾಧನೆ ಇದೆ ಹೇಳೋಕೆ. ಸರ್ಕಾರದ 40% ಕಮಿಷನ್ ಕುರಿತು ಹೇಳಿಕೊಳ್ಳಬೇಕಷ್ಟೇ ಎಂದು ‘ಜನಸ್ಪಂದನ’ ಸಮಾವೇಶದ ವಿರುದ್ಧ ಸಿದ್ದರಾಮಯ್ಯ ಕಿಡಿ ಕಾರಿದರು. ಸರ್ಕಾರ ಕಷ್ಟಕ್ಕೊಳಗಾಗಿರುವವರಿಗೆ ಸ್ಪಂದಿಸಬೇಕಲ್ವಾ ಎಂದು ಪ್ರಶ್ನಿಸಿದರು. ಜನರ ಕಷ್ಟಸುಖ ಕೇಳದೇ ‘ಜನಸ್ಪಂದನ’ ಮಾಡ್ತಿದ್ದಾರೆ. ಯಾವ ಸಚಿವರೂ ಜಿಲ್ಲೆಗಳಿಗೆ ಹೋಗಿ ಸಮಸ್ಯೆ ಕೇಳುತ್ತಿಲ್ಲ. ಜನರ ಕಷ್ಟ ಕೇಳದೇ ಜನಸ್ಪಂದನ ಮಾಡಿದ್ರೇ ಪ್ರಯೋಜನವಿಲ್ಲ. ಮಳೆ, ಪ್ರವಾಹದಿಂದ ರಾಜ್ಯದ ಜನ ಸಂಕಷ್ಟದಲ್ಲಿ ಇದ್ದಾರೆ. ಸಂಕಷ್ಟಕ್ಕೊಳಗಾದವರಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರಾ ಎಂದರು. ದುಡ್ಡು ಖರ್ಚು ಮಾಡಿಕೊಂಡು ರಾಜಕೀಯ ಮಾಡ್ತಿದ್ದಾರೆ. ‘ಜನಸ್ಪಂದನ’ ಇದು ರಾಜಕೀಯ ಪ್ರೇರಿತ ಕಾರ್ಯಕ್ರಮ. ಬರೀ ಹೆಸರು ಮಾತ್ರ ಜನಸ್ಪಂದನ ಅಂದ್ರೆ ಆಯ್ತಾ. ಬೆಂಗಳೂರಲ್ಲಿ ಜನ ಬೋಟ್ನಲ್ಲಿ ಓಡಾಡುವ ಸ್ಥಿತಿ ಇದೆ ಎಂದು ಹೇಳಿದರು.
‘ಕಮಿಷನ್ ಸಮಾವೇಶ’ ಎಂದ ಕಾಂಗ್ರೆಸ್
ಜನಸ್ಪಂದನ ‘ಕಮಿಷನ್ ಸಮಾವೇಶ’ ಎಂದು ಬಿಜೆಪಿಯ ಜನಸ್ಪಂದನ ಸಮಾವೇಶಕ್ಕೆ ಟ್ವೀಟ್ ಮೂಲಕ ರಾಜ್ಯ ಕಾಂಗ್ರೆಸ್ ಘಟಕದಿಂದ ಟೀಕೆ ಮಾಡಲಾಗಿದೆ. ಜನಸ್ಪಂದನ ಸಮಾವೇಶವಲ್ಲ ‘ಕಮಿಷನ್ ಸಮಾವೇಶ’. 40% ಕಮಿಷನ್ ಲೂಟಿಯ ಪಾಪದ ಹಣದಲ್ಲಿ ಸಮಾವೇಶ ಇದು. ಯಾವ ಸಾಧನೆ ಹೇಳಿಕೊಳ್ಳುವಿರಿ ಬೊಮ್ಮಾಯಿಯವರೇ ಎಂದು ಪ್ರಶ್ನಿಸಲಾಗಿದೆ. ನಿಮ್ಮದೇ ಕಾರ್ಯಕರ್ತನನ್ನ ಕೊಂದಿದ್ದನ್ನ ಹೇಳಿಕೊಳ್ಳುವಿರಾ. ಗುತ್ತಿಗೆದಾರ ಸಂತೋಷ್ನನ್ನ ಕೊಂದಿದ್ದನ್ನ ಹೇಳಿಕೊಳ್ಳುವಿರಾ. ಕಮಿಷನ್ ಕಿರುಕುಳದಲ್ಲಿ ಕೊಂದಿದ್ದನ್ನು ಹೇಳಿಕೊಳ್ಳುವಿರಾ ಎಂದು ‘ಬಿಜೆಪಿ ಭ್ರಷ್ಟೋತ್ಸವ’ ಎಂದು ಟೀಕಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಬಿಜೆಪಿ ನಡೆಸುತ್ತಿರುವುದು ಜನಸ್ಪಂದನ ಸಮವೇಶವಲ್ಲ “ಕಮಿಷನ್ ಸಮಾವೇಶ”
40% ಕಮಿಷನ್ ಲೂಟಿಯ ಪಾಪದ ಹಣದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಯಾವ ಸಾಧನೆ ಹೇಳಿಕೊಳ್ಳುವಿರಿ @BSBommai ಅವರೇ?
ನಿಮ್ಮದೇ ಪಕ್ಷದ ಕಾರ್ಯಕರ್ತ & ಗುತ್ತಿಗೆದಾರ ಸಂತೋಷ್ ಪಾಟೀಲ್ರನ್ನು ಕಮಿಷನ್ ಕಿರುಕುಳದಲ್ಲಿ ಕೊಂದಿದ್ದನ್ನು ಹೇಳಿಕೊಳ್ಳುವಿರಾ?#BJPBrashtotsava
— Karnataka Congress (@INCKarnataka) September 10, 2022
ಸಿದ್ದರಾಮಯ್ಯ ಎಸ್.ಆರ್.ವಿಶ್ವನಾಥ್ ತಿರುಗೇಟು
ಸಿದ್ದರಾಮಯ್ಯ ಟೀಕೆ ವಿಚಾರ ದೊಡ್ಡಬಳ್ಳಾಪುರದಲ್ಲಿ ಟಿವಿ9ಗೆ ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿಕೆ ನೀಡಿದ್ದು, ಸಿದ್ದರಾಮಯ್ಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಸರ್ಕಾರದ ಸಾಧನೆಗಳ ಬಗ್ಗೆ ಹೇಳಲು ಜನಸ್ಪಂದನ ಕಾರ್ಯಕ್ರಮ. ಸಿದ್ದರಾಮಯ್ಯರ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದೆ. ಸಿದ್ದರಾಮೋತ್ಸವದಲ್ಲಿ 50 ಕೋಟಿ ಏಕೆ ಖರ್ಚು ಮಾಡಿದ್ರು? ಈ ಹಣವನ್ನು ಪ್ರವಾಹದ ಸಂತ್ರಸ್ತರಿಗೆ ಕೊಡಬಹುದಿತ್ತು ಯಾಕೆ ಕೊಟ್ಟಿಲ್ಲ ಎಂದು ಎಸ್.ಆರ್.ವಿಶ್ವನಾಥ್ ತಿರುಗೇಟು ನೀಡಿದರು.
– ಕರ್ನಾಟಕ ಕಾಂಗ್ರೆಸ್ (@inckarnataka) 10 Sep 2022
ಹೊಸ ಯೋಜನೆ ಘೋಷಣೆ ನಿರೀಕ್ಷೆ: ಎಂಟಿಬಿ ನಾಗರಾಜ್
ಇನ್ನೂ ಸಚಿವ ಎಂಟಿಬಿ ನಾಗರಾಜ್ ಹೇಳಿಕೆ ನೀಡಿದ್ದು, ರಾಜ್ಯ ಸರ್ಕಾರದ 3 ವರ್ಷದ ಸಾಧನೆಯನ್ನ ಹೇಳುತ್ತೇವೆ. ಈ ಭಾಗದಲ್ಲಿ ಪಕ್ಷಕ್ಕೂ ಸಮಾವೇಶ ಸಹಾಯವಾಗಲಿದೆ. ಸಿಎಂ ಹೊಸ ಯೋಜನೆ ಘೋಷಣೆ ಮಾಡುವ ನಿರೀಕ್ಷೆ ಇದೆ. ಸಿದ್ದರಾಮಯ್ಯರು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಸಿದ್ದರಾಮಯ್ಯ ಆ ಹಣ ನೆರೆ ಸಂತ್ರಸ್ತರಿಗೆ ಕೊಡಬಹುದಿತ್ತಲ್ವಾ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯರು ಹುಟ್ಟುಹಬ್ಬಕ್ಕೆ ಹಣ ಖರ್ಚು ಮಾಡಿಲ್ವಾ? ಮುನಿರತ್ನ
ದೊಡ್ಡಬಳ್ಳಾಪುರದಲ್ಲಿ ಟಿವಿ9ಗೆ ಸಚಿವ ಮುನಿರತ್ನ ಹೇಳಿಕೆ ನೀಡಿದ್ದು, ಕೋಲಾರ-ಚಿಕ್ಕಬಳ್ಳಾಪುರ ಭಾಗದಲ್ಲಿ ಪಕ್ಷಕ್ಕೆ ಮತ್ತಷ್ಟು ಶಕ್ತಿ. ಸಿದ್ದರಾಮಯ್ಯರು ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡ್ರು. 75 ವರ್ಷ ತುಂಬದೇ ಹುಟ್ಟುಹಬ್ಬವನ್ನ ಆಚರಿಸಿಕೊಂಡರು. ಸಿದ್ದರಾಮಯ್ಯರು ಹುಟ್ಟುಹಬ್ಬಕ್ಕೆ ಹಣ ಖರ್ಚು ಮಾಡಿಲ್ವಾ ಎಂದು ಪ್ರಶ್ನಿಸಿದರು. ಬೆಂಗಳೂರಿನಲ್ಲಿ ಒಂದು ಕ್ಷೇತ್ರದಲ್ಲಿ ಮಾತ್ರ ನೆರೆ ಸಮಸ್ಯೆ. ಪ್ರವಾಹ ಸಮಸ್ಯೆ ಸರ್ಕಾರ ಸೂಕ್ತವಾಗಿ ಬಗೆಹರಿಸಲಿದೆ ಎಂದು ಹೇಳಿದರು.
ಕೆಲವರಿಗೆ ಜಾಣ ಕುರುಡು ಜಾಣ ಕಿವುಡು ಇದೆ: ಸಿಟಿ ರವಿ
ಸಿಟಿ ರವಿ ಹೇಳಿಕೆ ನೀಡಿದ್ದು, ಜನ ಸ್ಪಂದನದಲ್ಲಿ ಜನರಿಗೆ ನಮ್ಮ ರಿಪೋರ್ಟ್ ಕೊಡ್ತೇವೆ. ನಾವು ಏನ್ ಮಾಡಿದ್ದಿವಿ ಅನ್ನೋದನ್ನ ಜನರಿಗೆ ಹೇಳ್ತಿವಿ. ಕಾಂಗ್ರೆಸ್ ಆದರೆ ರಾಹುಲ್ ಗಾಂಧಿ ಹೈಕಮಾಂಡ್ಗೆ ಹೇಳಬೇಕು. ಸಿದ್ದರಾಮಯ್ಯ ಅವರಿಗೆ ಅರ್ಥವಾಗುವ ರೀತಿಯಲ್ಲೇ ನಮ್ಮ ಸಾಧನೆ ಹೇಳ್ತಿವಿ. ಕೆಲವರಿಗೆ ಜಾಣ ಕುರುಡು ಜಾಣ ಕಿವುಡು ಇದೆ. ಸಿದ್ದರಾಮಯ್ಯ ಅವರ ಕಣ್ಣು ಕಿವಿ ಸರಿಯಾಗಿದೆ ಅಂತಾ ನಾನು ಅಂದುಕೊಂಡಿದ್ದಿನಿ. ನಮ್ಮ ಅವರ ಸಾಧನೆ ತುಲನೆ ಮಾಡಿದ್ರೆ ಗೊತ್ತಾಗುತ್ತೆ ಎಂದು ಹೇಳಿದರು.
Published On - 12:48 pm, Sat, 10 September 22