ಬೆಂಗಳೂರು: ಮಾರ್ಚ್ 31ಕ್ಕೆ ಮೀಸಲಾತಿ ಕುರಿತು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕೊಟ್ಟಿರುವ ಭರವಸೆಯ ಗಡುವು ಮುಗಿಯುತ್ತದೆ. ಬೆಳಗಾವಿಯಲ್ಲಿ ಕಳೆದ ಡಿಸೆಂಬರ್ನಲ್ಲಿ ಸಿಎಂ ಬೊಮ್ಮಾಯಿ ಅವರು ಪಂಚಮಸಾಲಿ ಜನಾಂಗಕ್ಕೆ ಮೀಸಲಾತಿ ಘೋಷಣೆ ಮಾಡುವುದಾಗಿ ಹೇಳಿದ್ದರು. ಬಸವರಾಜ ಬೊಮ್ಮಾಯಿ ಅವರು ಹಿಂದಿನ ಸಿಎಂ ಯಡಿಯೂರಪ್ಪ ಅವರಂತೆ ಜನಾಂಗಕ್ಕೆ ಕೈ ಕೊಡುವುದಿಲ್ಲ ಎಂದು ಕೊಂಡಿದ್ದೆವು. 10 ವರ್ಷಗಳ ಕಾಲ ಪಂಚಮಸಾಲಿ ಸಮಾಜ ಯಡಿಯೂರಪ್ಪ ಅವರನ್ನು ನಂಬಿತ್ತು. ಈಗ ಸಮಾಜ ಬೊಮ್ಮಾಯಿಯವರ ಮೇಲೆಯೂ ಸಮಾಜ ನಂಬಿಕೆ ಕಳೆದುಕೊಳ್ಳಬಹುದು ಅಂತ ಬೆಂಗಳೂರಿನ ಖಾಸಗಿ ಹೋಟೆಟ್ನಲ್ಲಿ ಸುದ್ದಿಗೋಷ್ಠಿ ನಡೆಸಿಸ ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ (Jayamruthyunjaya Swamiji) ಹೇಳಿದ್ದಾರೆ.
ಕಳೆದ 3, 4 ತಿಂಗಳುಗಳಿಂದ ಹಿಂದುಳಿದ ವರ್ಗಗಳ ಆಯೋಗ ಯಾವುದೇ ಸರ್ವೆ ಮಾಡುತ್ತಿಲ್ಲ. ನಮ್ಮ ಜನಾಂಗ ನಂಬಿದರೆ ಪ್ರಾಣ ಕೊಡಲು ಸಿದ್ಧವಿದೆ. ನಂಬಿಕೆ ಕಳೆದುಕೊಂಡರೆ ಪಂಚಮಸಾಲಿ ಸಮುದಾಯ ಅಸಮಾಧಾನಗೊಳ್ಳಲಿದೆ. ಮೀಸಲಾತಿ ಘೋಷಣೆ ಮಾಡುವ ಅವಧಿ ಮುಗಿಯುವ ಹಂತಕ್ಕೆ ಬರುತ್ತಿದೆ. ಈ ಅಧಿವೇಶನ ಮುಗಿಯುವುದರೊಳಗೆ ಘೋಷಣೆ ಮಾಡುತ್ತೇವೆ ಅಂತ ಸಿಎಂ ಹೇಳಿದ್ದರು. ಅಧಿವೇಶನ ಮುಗಿಯಲು ಇನ್ನು 4 ದಿವಸ ಮಾತ್ರ ಇದೆ. ಯಡಿಯೂರಪ್ಪನವರ ರೀತಿ ಬೊಮ್ಮಾಯಿ ಕೈ ಕೊಡುವುದಿಲ್ಲ ಅಂದುಕೊಂಡಿದ್ದೆವು. ಆದರೆ ಬೊಮ್ಮಾಯಿ ಈಗ ಯಾವುದೇ ಪೂರಕ ಪ್ರತಿಕ್ರಿಯೆ ನೀಡುತ್ತಿಲ್ಲ. ಬೊಮ್ಮಾಯಿಯವರು ಯಾಕೆ ಮೌನವಾಗಿದ್ದಾರೆ? ಎಂದು ಸ್ವಾಮೀಜಿ ಸುದ್ದಿಗೋಷ್ಟಿಯಲ್ಲಿ ಪ್ರಶ್ನಿಸಿದ್ದಾರೆ.
ನಾನು ನಿಮ್ಮ ಮನೆಗೆ ಬಂದು 24 ಗಂಟೆ ಕಾಯುವ ಸ್ವಾಮೀಜಿ ಅಲ್ಲ. ನಾನು ನೀವು ಕರೆದ ಕಡೆ ಬರುವ ಸ್ವಾಮೀಜಿ ಅಲ್ಲ. ಮಾರ್ಚ್ 31 ರೊಳಗೆ ಆಯೋಗದಿಂದ ವರದಿ ಪಡೆದುಕೊಳ್ಳಬೇಕು. ಇಲ್ಲ ಅಂದ್ರೆ ನಾವು ಮತ್ತೊಂದು ಸುತ್ತಿನ ಸಭೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಮೀಸಲಾತಿ ಕೊಡೋಕೆ ಆಗುತ್ತದೋ, ಇಲ್ವೋ ಎಂಬುದು ಸ್ಪಷ್ಟನೆ ಕೊಡಬೇಕು. ಅಧಿವೇಶನದಲ್ಲಿ ಮೀಸಲಾತಿ ಬಗ್ಗೆ ಸ್ಪಷ್ಟನೆ ಕೊಡಬೇಕು. ನಮ್ಮ ಸಮಾಜಕ್ಕೆ ಮೀಸಲಾತಿ ಕೊಡುವ ಬಗ್ಗೆ ಸ್ಪಷ್ಟನೆ ನೀಡಿ. ಅವರು ಬಂದಾಗ ಅವರಿಗೆ ಹೂ ಅಂತೀರಿ. ನಾವು ಬಂದಾಗ ನಮಗೂ ಹೂ ಅಂತೀರಿ. ಸ್ಪಷ್ಟವಾಗಿ ನಿಮ್ಮ ನಿಲುವು ತಿಳಿಸಿ. ಕೂಡಲೇ ನಿಮ್ಮ ಅಭಿಪ್ರಾಯ ತಿಳಿಸಿ ಅಂತ ಜಯಮೃತ್ಯುಂಜಯ ಒತ್ತಾಯಿಸಿದ್ದಾರೆ.
ಈಗಾಗಲೇ ಗಡುವು ನೀಡಿದ್ದೇವೆ. ಇಲ್ಲದಿದ್ದರೆ ಯತ್ನಾಳ್ ನೇತೃತ್ವದಲ್ಲಿ ಸಭೆ ಕರೆದು ಎಲ್ಲಿಂದ ಹೋರಾಟ ಆರಂಭಿಸಬೇಕು ಅಂತ ನಿರ್ಧಾರ ಮಾಡುತ್ತೇವೆ. ಏಪ್ರಿಲ್ 14 ಕೊನೆಯ ಗಡುವು ನೀಡುತ್ತೇವೆ. ನಂಬಿಕೆ ಇಟ್ಟು ನಾವು ಪದೇ ಪದೇ ಗಡುವು ನೀಡಿದ್ದೇವೆ. ಸಭೆಗೆ ಬಂದಾಗ ಪಂಚಮಸಾಲಿ ಸಮಾಜದ ಮೀಸಲಾತಿ ಬಗ್ಗೆ ಮಾತನಾಡಿಲ್ಲ, ಉಳಿದ ಸಮಾಜದ ಬಗ್ಗೆ ಮಾತ್ರ ಚರ್ಚೆ ಮಾಡಲಾಗಿದೆ. ಬೇರೆ ಸ್ವಾಮೀಜಿ ತರ ಅನುದಾನ ಕೊಡಿ, ಅದು ಇದು ಕೊಡಿ ಅಂತ ನಿಮ್ಮ ಮನೆ ಬಾಗಿಲಿಗೆ ಬಂದಿಲ್ಲ. ಪಂಚಮಸಾಲಿಗೆ ಮೀಸಲಾತಿ ಕೊಡಬೇಡಿ ಅಂತ ಯಾರಾದರೂ ಹೇಳಿದ್ದಾರಾ? ಎಂದು ಈ ವೇಳೆ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ
ದಿ ಮೋದಿ ಸ್ಟೋರಿ ವೆಬ್ಸೈಟ್ ಉದ್ಘಾಟನೆ; ಏನಿದು ಹೊಸ ಪೋರ್ಟಲ್? ಇದರಲ್ಲಿರಲಿವೆ ಇಂಟರೆಸ್ಟಿಂಗ್ ವಿಷಯಗಳು !
ಹಿಜಾಬ್ ಧರಿಸಿಕೊಂಡು ಬಂದ್ರೆ ಎಸ್ಎಸ್ಎಲ್ಸಿ ಪರೀಕ್ಷೆಗೆ ಇಲ್ಲ ಎಂಟ್ರಿ; ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆದೇಶ