ನ.1ರಿಂದ ಜೆಡಿಎಸ್​ ಪಕ್ಷದ ಪಂಚರತ್ನ ರಥಯಾತ್ರೆ ಆರಂಭ, ಅಂದೇ ಅಭ್ಯರ್ಥಿಗಳ ಘೋಷಣೆ: ಮಾಜಿ ಸಿಎಂ ಹೆಚ್. ​ಡಿ ಕುಮಾರಸ್ವಾಮಿ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 03, 2022 | 5:21 PM

ನವೆಂಬರ್ 1 ರಂದು ಪಂಚರತ್ನ ರಥಯಾತ್ರೆ ಆರಂಭವಾಗಲಿದ್ದು, ಈ ವೇಳೆಯೇ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ ಮಾಡಲಾಗುತ್ತಿದೆ. ಈ ಕುರಿತಾಗಿ ಮಾಜಿ ಸಿಎಂ ಹೆಚ್. ​ಡಿ ಕುಮಾರಸ್ವಾಮಿ ಸಭೆ ನಡೆಸಿದರು.

ನ.1ರಿಂದ ಜೆಡಿಎಸ್​ ಪಕ್ಷದ ಪಂಚರತ್ನ ರಥಯಾತ್ರೆ ಆರಂಭ, ಅಂದೇ ಅಭ್ಯರ್ಥಿಗಳ ಘೋಷಣೆ: ಮಾಜಿ ಸಿಎಂ ಹೆಚ್. ​ಡಿ ಕುಮಾರಸ್ವಾಮಿ
ಮಾಜಿ ಸಿಎಂ ಎಚ್​​ಡಿ ಕುಮಾರಸ್ವಾಮಿ
Follow us on

ಬೆಂಗಳೂರು: ನವೆಂಬರ್ 1 ರಂದು ಪಂಚರತ್ನ ರಥಯಾತ್ರೆ ಆರಂಭವಾಗಲಿದ್ದು, ಈ ವೇಳೆಯೇ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ ಮಾಡಲಾಗುತ್ತಿದೆ. ಬೆಂಗಳೂರಿನ ಜೆ.ಪಿ.ಭವನದಲ್ಲಿ ಮಾಜಿ ಸಿಎಂ ಹೆಚ್. ​ಡಿ ಕುಮಾರಸ್ವಾಮಿ ಗೊಂದಲವಿರುವ ಕ್ಷೇತ್ರಗಳ ಮುಖಂಡರನ್ನು ಕರೆದು ಸಭೆ ಮಾಡಿದ್ದಾರೆ. ಹೆಚ್.ಡಿ.ಕೋಟೆ, ಮಧುಗಿರಿ, ಶಿರಾ ಕ್ಷೇತ್ರಗಳ ಮುಖಂಡರೊಂದಿಗೆ ಸಭೆ ಮಾಡಲಾಗಿದೆ. ಆಕಾಂಕ್ಷಿಗಳ ಪರ ಲಾಬಿಗೆ ನೂರಾರು ಬೆಂಬಲಿಗರು ಬಂದಿದ್ದಾರೆ. ಮೊದಲ ಹಂತದಲ್ಲಿ 120 ವಿಧಾನಸಭಾ ಕ್ಷೇತ್ರಗಳ‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಕುಮಾರಸ್ವಾಮಿ ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಮೈಸೂರು ಭಾಗದಲ್ಲಿ ಸೋನಿಯಾ, ರಾಹುಲ್, ಪ್ರಿಯಾಂಕಾ ರ‍್ಯಾಲಿ ಮಾಡಿದ್ದಾರೆ. ಅವರ ಕುಟುಂಬದ ಎಲ್ಲ ಸದಸ್ಯರು ಬಂದರೂ ಹಿನ್ನಡೆ ಆಗಲ್ಲ. ಕರ್ನಾಟಕದಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ. ಪಾದಯಾತ್ರೆಯಿಂದ ಜನರಿಗೆ ಏನು ಸಂದೇಶ ಕೊಡುತ್ತಿದ್ದಾರೆ. ಮೊದಲು ಕಾಂಗ್ರೆಸ್​ ಭಾರತ್​ ಜೋಡೋ ಯಾತ್ರೆ ಮುಗಿಯಲಿ. ನಮ್ಮ ಪಂಚರತ್ನ ಯಾತ್ರೆ ಏನು ಎಂದು ತೋರಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್​​.ಡಿ.ಕುಮಾರಸ್ವಾಮಿ ಕಾರವಾಗಿ ನುಡಿದರು.

ಬೆಂಗಳೂರಿನ ಜನರ ಸಮಸ್ಯೆ ಆಲಿಸಲು ಜನತಾ ಮಿತ್ರ: ಟಿ.ಎ ಶರವಣ

ಜೆಡಿಎಸ್‌ನ ಜಲಾಧಾರೆ ಕಾರ್ಯಕ್ರಮ ಯಶ್ವಸಿಯಾಗಿದೆ. ಬೆಂಗಳೂರಿನ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನ ಹಾಕಿದ್ದೇವೆ. ಬೆಂಗಳೂರಿನ ಜನರ ಸಮಸ್ಯೆ ಆಲಿಸಲು ಜನತಾ ಮಿತ್ರ ಮಾಡಿದ್ದೇವೆ ಬೆಂಗಳೂರಿನಲ್ಲಿ ಜೆಡಿಎಸ್‌ ಉಪಾಧ್ಯಕ್ಷ ಟಿ.ಎ ಶರವಣ ಹೇಳಿಕೆ ನೀಡಿದರು. ಬೆಂಗಳೂರಿನ ನ್ಯಾಷನಲ್ ಕಾಲೇಜ್ ಗ್ರೌಂಡ್​ನಲ್ಲಿ ಸಮಾರಂಭ ನಡೆಯಲಿದ್ದು, ಲಕ್ಷಾಂತರ ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬೆಂಗಳೂರಿನ ಜನರಿಗೋಸ್ಕರ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಇದರ ಸಮಾರೋಪ ಕಾರ್ಯಕ್ರಮ ಅ.8ರಂದು ನಡೆಯುತ್ತದೆ ಎಂದು ಟಿ.ಎ ಶರವಣ ತಿಳಿಸಿದರು.

ಜೆಡಿಎಸ್​​ನ ಇಬ್ಬರು ಶಾಸಕರಿಗೆ ನೋಟಿಸ್​ ಜಾರಿ

ರಾಜ್ಯಸಭೆ ಚುನಾವಣೆ ವೇಳೆ ಅಡ್ಡ ಮತದಾನದ ಆರೋಪಿಸಿದ್ದು, ಜೆಡಿಎಸ್​​ನ ಇಬ್ಬರು ಶಾಸಕರಿಗೆ ನೋಟಿಸ್​ ಜಾರಿ ಮಾಡಲಾಗಿದೆ. ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿರಿಂದ ನೋಟಿಸ್​ ನೀಡಲಾಗಿದ್ದು, ಕಾರಣ ಕೇಳಿ ಕೋಲಾರ ಶಾಸಕ ಶ್ರೀನಿವಾಸ್‌ಗೌಡ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್‌ಗೆ ನೋಟಿಸ್ ಜಾರಿ ಮಾಡಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಸ್ಪೀಕರ್​ಗೆ ಜೆಡಿಎಸ್‌‌ ಶಾಸಕ ವೆಂಕಟ್‌ರಾವ್ ನಾಡಗೌಡ ದೂರು ನೀಡಿದ್ದಾರೆ. ಈಗ ಕಾರಣ ಕೇಳಿ ಇಬ್ಬರು ಶಾಸಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.