ISI ಜೊತೆ ನಂಟು ಹೊಂದಿರುವ ಶಂಕೆ, ಬಟ್ಟೆ ವ್ಯಾಪಾರಿ ಜಿತೇಂದರ್‌ಸಿಂಗ್ ಬಂಧನ

| Updated By: ಆಯೇಷಾ ಬಾನು

Updated on: Sep 21, 2021 | 1:39 PM

ISI ಜೊತೆ ನಂಟು ಹೊಂದಿದ್ದ ಜಿತೇಂದ್ರಸಿಂಗ್ ಬೆಂಗಳೂರಿಗೆ ಬಂದಿದ್ದೇಕೆ ಎಂಬ ಬಗ್ಗೆ ಸಿಸಿಬಿ ಪೊಲೀಸರಿಗೆ ಹಲವು ಅನುಮಾನಗಳು ಶುರುವಾಗಿವೆ. ಬಟ್ಟೆ ವ್ಯಾಪಾರದ ಹೆಸರಿನಲ್ಲಿ ಆತ ಬೆಂಗಳೂರಿಗೆ ಬಂದಿದ್ದ ಹಾಗೂ ಕಳೆದ ಆರು ತಿಂಗಳಿಂದ ನಿರಂತರವಾಗಿ ISI ಜೊತೆ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಸಿಕ್ಕಿದೆ.

ISI ಜೊತೆ ನಂಟು ಹೊಂದಿರುವ ಶಂಕೆ, ಬಟ್ಟೆ ವ್ಯಾಪಾರಿ ಜಿತೇಂದರ್‌ಸಿಂಗ್ ಬಂಧನ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ISI ಜೊತೆ ನಂಟು ಹೊಂದಿರುವ ಶಂಕೆ ಹಿನ್ನೆಲೆಯಲ್ಲಿ ಜಿತೇಂದರ್‌ಸಿಂಗ್ನನ್ನು ಬಂಧಿಸಲಾಗಿದೆ. ಬಂಧಿತ ಜಿತೇಂದರ್ ಸಿಂಗ್​ನಿಂದ ಮೊಬೈಲ್ ಫೋನ್, ಐಡಿಯಾ ಸಿಮ್, ಜಿಯೋ ಸಿಮ್, ಮಿಲಿಟರಿ ಯೂನಿಫಾರ್ಮ್ ಬ್ಯಾಡ್ಜ್, ರೈಫಲ್ ಬ್ಯಾಡ್ಜ್, ಮಿಲಿಟರಿ ಯೂನಿಫಾರ್ಮ್ ವಶಕ್ಕೆ ಪಡೆಯಲಾಗಿದೆ. ಮೊಬೈಲ್ ರಿಟ್ರೀವ್ ಮಾಡಿ ಮೊಬೈಲ್ ಫೋನ್‌ನ ಸಿಡಿಆರ್ ಪರಿಶೀಲನೆ ಮಾಡಲಾಗುತ್ತಿದೆ. ಹಾಗೂ ಬೆಂಗಳೂರಿನಲ್ಲಿ ಆತ ಯಾರ ಸಂಪರ್ಕದಲ್ಲಿದ್ದನೆಂದು ಪತ್ತೆ ಹಚ್ಚಲಾಗುತ್ತಿದೆ. 2018ಕ್ಕೆ ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದ ಜಿತೇಂದರ್ ಏಕೆ ಬಂದನೆಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ಬೆಂಗಳೂರಿಗೆ ಜಿತೇಂದ್ರ ಸಿಂಗ್ ಬಂದಿದ್ದಾದ್ರು ಯಾಕೆ?
ISI ಜೊತೆ ನಂಟು ಹೊಂದಿದ್ದ ಜಿತೇಂದ್ರಸಿಂಗ್ ಬೆಂಗಳೂರಿಗೆ ಬಂದಿದ್ದೇಕೆ ಎಂಬ ಬಗ್ಗೆ ಸಿಸಿಬಿ ಪೊಲೀಸರಿಗೆ ಹಲವು ಅನುಮಾನಗಳು ಶುರುವಾಗಿವೆ. ಬಟ್ಟೆ ವ್ಯಾಪಾರದ ಹೆಸರಿನಲ್ಲಿ ಆತ ಬೆಂಗಳೂರಿಗೆ ಬಂದಿದ್ದ ಹಾಗೂ ಕಳೆದ ಆರು ತಿಂಗಳಿಂದ ನಿರಂತರವಾಗಿ ISI ಜೊತೆ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಸಿಕ್ಕಿದೆ. ಈ ವೇಳೆ ಭಾರತೀಯ ಸೇನೆ ಸಂಬಂಧಿತ ಹಲವು ಫೋಟೋಗಳನ್ನು ರವಾನಿಸಿದ್ದಾನೆ. ಅದೇ ರೀತಿ ಒಂದಿಷ್ಟು ಹಣ ಸಂದಾಯದ ಬಗ್ಗೆ ಸಹ ಮಾಹಿತಿ ಸಿಕ್ಕಿದೆ.

ಇನ್ನು ಜಿತೇಂದ್ರನನ್ನ ಬಂಧಿಸುತ್ತಿದ್ದಂತೆ ಜತೆಗಿದ್ದವರು ಎಸ್ಕೇಪ್ ಆಗಿದ್ದಾರೆ. ಜಿತೇಂದ್ರ ನಾಲ್ವರು ಯುವಕರ ಜತೆ ಬೆಂಗಳೂರಿನ ಜಾಲಿಮೊಹಲ್ಲಾದಲ್ಲಿ ವಾಸವಾಗಿದ್ದರು. ಬಟ್ಟೆ ವ್ಯಾಪಾರಿ ಎಂದು ಹೇಳಿಕೊಂಡಿದ್ದ ಜಿತೇಂದ್ರ ಸಿಂಗ್ ಯಾರ ಜೊತೆಯೂ ಹೆಚ್ಚಾಗಿ ಸೇರುತ್ತಿರಲಿಲ್ಲ. ಜಿತೇಂದ್ರ ಬಟ್ಟೆ ವ್ಯಾಪಾರ ಜತೆಗೆ ಫಿನಾಯಿಲ್ ವ್ಯಾಪಾರ ಮಾಡುತ್ತಿದ್ದ ಎಂದು ಜಿತೇಂದ್ರ ಸಿಂಗ್ ಚಲನವಲನ ಕಂಡಿದ್ದ ವ್ಯಾಪಾರಿ ಹೇಳಿಕೆ ನೀಡಿದ್ದಾರೆ.

ಆಡುಗೋಡಿ ಟೆಕ್ನಿಕಲ್ ವಿಂಗ್‌ನಲ್ಲಿ ಜಿತೇಂದ್ರ ವಿಚಾರಣೆ
ಜಿತೇಂದ್ರ ಸಿಂಗ್‌ನನ್ನ ಸಿಸಿಬಿ 12 ದಿನ ಕಸ್ಟಡಿಗೆ ಪಡೆದಿದೆ. ಆರ್ಮಿಗೆ ಸಂಬಂಧಿಸಿದ ಪೋಟೋ ಕಳಿಸಿದ್ದ ಜಿತೇಂದ್ರ ಸಿಂಗ್​ಗೆ ಸಿಸಿಬಿ ಪೊಲೀಸರು ದೇಶದ ಭದ್ರತೆ ವಿಚಾರವಾಗಿ ಆಡುಗೋಡಿ ಟೆಕ್ನಿಕಲ್ ವಿಂಗ್‌ನಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಯಾದಗಿರಿಯಲ್ಲಿ ಸ್ಯಾಟಲೈಟ್ ಫೋನ್ ಕರೆ ಪತ್ತೆ
ಇನ್ನು ಮತ್ತೊಂದು ಕಡೆ ಯಾದಗಿರಿ ಜಿಲ್ಲೆಯ ಹೆಡಗಿಮದ್ರದ ಗುಡ್ಡಗಾಡು ಪ್ರದೇಶದಿಂದ ಪಾಕ್‌ಗೆ ನಿಷೇಧಿತ ಸ್ಯಾಟಲೈಟ್ ಫೋನ್ ಕರೆ ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಏಪ್ರಿಲ್‌ನಲ್ಲಿ ಕಲಬುರಗಿಯಿಂದ ISD ತಂಡ ಬಂದು ತನಿಖೆ‌ ನಡೆಸಿತ್ತು. ಹೀಗಾಗಿ ಏಪ್ರಿಲ್ ತಿಂಗಳಲ್ಲೇ ಪಾಕ್‌ಗೆ ಕರೆ ಹೋಗಿರುವ ಶಂಕೆ ವ್ಯಕ್ತವಾಗಿದೆ. ಸ್ಯಾಟಲೈಟ್ ಕರೆ ಮಾಹಿತಿ ಹಿನ್ನೆಲೆ ಗ್ರಾಮಕ್ಕೆ ISD ತಂಡ ಭೇಟಿ ನೀಡಿದ್ದು ಇನ್ಸ್‌ಪೆಕ್ಟರ್ ಮಹಾದೇವಪ್ಪ ನೇತೃತ್ವದಲ್ಲಿ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.

ಇದನ್ನೂ ಓದಿ: Afghan Update: ಅಧಿಕಾರಕ್ಕಾಗಿ ತಾಲಿಬಾನ್-ಹಖ್ಖಾನಿ ಸಂಘರ್ಷ, ಮುಲ್ಲಾ ಬಾರದಾರ್​ಗೆ ತೀವ್ರ ಗಾಯ: ಐಎಸ್​ಐ ಮಧ್ಯಪ್ರವೇಶ

Published On - 10:28 am, Tue, 21 September 21