NLSIU ನೂತನ ಅಕಾಡೆಮಿಕ್‌ ಬ್ಲಾಕ್‌ನ ಮರು ಅಭಿವೃದ್ಧಿಗಾಗಿ JSW ಅನುದಾನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 12, 2024 | 6:05 PM

ನ್ಯಾಶನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯುನಿವರ್ಸಿಟಿ (NLSIU) ವಿಶ್ವವಿದ್ಯಾಲಯದ ಪ್ರಮುಖ ಅಕಾಡೆಮಿಕ್‌ ಬ್ಲಾಕ್‌, ಆವರಣದ ಸಮಗ್ರ ಮರುಅಭಿವೃದ್ಧಿ ಹಾಗೂ ವಿಸ್ತರಣೆ ಮತ್ತು ʻಕಾನೂನಿನ ಭವಿಷ್ಯದ ಕುರಿತ ಜೆಎಸ್‌ಡಬ್ಲ್ಯು ಕೇಂದ್ರ ಸ್ಥಾಪನೆಗಾಗಿ ಜೆಎಸ್‌ಡಬ್ಲ್ಯು ಗ್ರೂಪ್‌ನಿಂದ ಅನುದಾನವನ್ನು ಪ್ರಕಟಿಸಿದೆ.

NLSIU ನೂತನ ಅಕಾಡೆಮಿಕ್‌ ಬ್ಲಾಕ್‌ನ ಮರು ಅಭಿವೃದ್ಧಿಗಾಗಿ JSW ಅನುದಾನ
NLSIU ನೂತನ ಅಕಾಡೆಮಿಕ್‌ ಬ್ಲಾಕ್‌ನ ಮರು ಅಭಿವೃದ್ಧಿಗಾಗಿ JSW ಅನುದಾನ
Follow us on

ಬೆಂಗಳೂರು, ಏಪ್ರಿಲ್. 12: ‌ನ್ಯಾಶನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯುನಿವರ್ಸಿಟಿ (NLSIU) ವಿಶ್ವವಿದ್ಯಾಲಯದ ಪ್ರಮುಖ ಅಕಾಡೆಮಿಕ್‌ ಬ್ಲಾಕ್‌, ಆವರಣದ ಸಮಗ್ರ ಮರುಅಭಿವೃದ್ಧಿ ಹಾಗೂ ವಿಸ್ತರಣೆ ಮತ್ತು ಕಾನೂನಿನ ಭವಿಷ್ಯದ ಕುರಿತ ಜೆಎಸ್‌ಡಬ್ಲ್ಯು ಕೇಂದ್ರ ಸ್ಥಾಪನೆಗಾಗಿ ಜೆಎಸ್‌ಡಬ್ಲ್ಯು ಗ್ರೂಪ್‌(JSW Group)ನಿಂದ ಅನುದಾನವನ್ನು ಪ್ರಕಟಿಸಿದೆ. ಈ ಅನುದಾನದಿಂದ ಬೆಂಗಳೂರಿನ ನಾಗರಭಾವಿಯಲ್ಲಿರುವ ಎನ್‌ಎಲ್‌ಎಸ್‌ಐಯುನ ದಕ್ಷಿಣ ಭಾಗದಲ್ಲಿನ ನೂತನ ಅಕಾಡೆಮಿಕ್‌ ಬ್ಲಾಕ್‌ನ (ಎನ್‌ಎಬಿ) ಮರುಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ.

ಈಗಾಗಲೇ ಎರಡು ಅಂತಸ್ತುಗಳ ಎನ್‌ಎಬಿಯನ್ನು  2014ರಲ್ಲಿ ನಿರ್ಮಿಸಲಾಗಿದ್ದು, ಅದನ್ನು ಉಪನ್ಯಾಸಕ, ವಿಚಾರ ಸಂಕಿರಣ ಕೊಠಡಿಗಳು, ಕಚೇರಿಗಳು ಮತ್ತು ಸಭಾ ಭವನಗಳಿಗೆ ಬಳಸಿಕೊಳ್ಳಲಾಗಿದೆ. ಜೆಎಸ್‌ಡಬ್ಲ್ಯು ಅನುದಾನವು ಇನ್ನೂ ನಾಲ್ಕು ಮಹಡಿಗಳನ್ನು ಸೇರಿಸಲು ಹಾಗೂ ಲಭ್ಯ ಎರಡು ಅಂತಸ್ತುಗಳಲ್ಲಿ ಹೊಂದಿಕೊಳ್ಳುವಂತಹ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿದ ಕಲಿಕೆ ಮತ್ತು ಕಚೇರಿ ಸ್ಥಳಗಳನ್ನು ಒದಗಿಸುವ ಜೊತೆಗೆ ಬೋಧಕರು, ವಿದ್ಯಾರ್ಥಿಗಳು, ಮತ್ತು ಸಂಶೋಧಕರಿಗೆ ಸಹಯೋಗದ ಸಂಶೋಧನಾ ಸ್ಥಳಗಳನ್ನು ಒದಗಿಸುವುದು ಕೂಡ ಅದರ ಉದ್ದೇಶವಾಗಿದೆ.

ಇದನ್ನೂ ಓದಿ:ಎಂಜಿ ಮೋಟಾರ್ ಜೊತೆ ಜೆಎಸ್​ಡಬ್ಲ್ಯು ಜಂಟಿ ವ್ಯವಹಾರ: ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಎಂಜಿಎಂ ಎಲೆಕ್ಟ್ರಿಕ್ ಕಾರುಗಳು

ಈ ಕಟ್ಟಡಕ್ಕೆ ʻಜೆಎಸ್‌ಡಬ್ಲ್ಯು ಅಕಾಡೆಮಿಕ್‌ ಬ್ಲಾಕ್‌ʼ ಎಂದು ಹೆಸರಿಸಲಾಗುತ್ತದೆ. ಜೊತೆಗೆ ವಿಶ್ವವಿದ್ಯಾಲಯದ ಹೊಸ ಅಕಾಡೆಮಿಕ್‌ ಕೇಂದ್ರವನ್ನು ಇತ್ತೀಚೆಗೆ ಅಭಿವೃದ್ಧಿ ಪಡಿಸಲಾದ ಶ್ರೀ ನಾರಾಯಣ ರಾವ್‌ ಮೇಲ್ಗಿರಿ ಸ್ಮಾರಕ ರಾಷ್ಟ್ರೀಯ ಕಾನೂನು ಗ್ರಂಥಾಲಯ ಸಹಿತ ಸುತ್ತಮುತ್ತಲ ಆವರಣದೊಂದಿಗೆ ಸಮಗ್ರಗೊಳಿಸಲಾಗುತ್ತದೆ. ಈ ಅನುದಾನವು ʻʻಕಾನೂನಿನ ಭವಿಷ್ಯದ ಕುರಿತ ಜೆಎಸ್‌ಡಬ್ಲ್ಯು ಕೇಂದ್ರʼ ಎಂಬ ಹೊಸ ಸಂಶೋಧನಾ ಕೇಂದ್ರಕ್ಕೆ ಕೂಡ ಬೆಂಬಲ ಒದಗಿಸುತ್ತದೆ. ಭವಿಷ್ಯದ ಕಾನೂನು ವ್ಯವಸ್ಥೆ, ಕಾನೂನು ವೃತ್ತಿ ಮತ್ತು ಕಾನೂನು ಶಿಕ್ಷಣದ ಮೇಲೆ ಹೊಸ ತಂತ್ರಜ್ಞಾನಗಳ ಪರಿಣಾಮವನ್ನು ಶೋಧಿಸುವಲ್ಲಿ ಅಕಾಡೆಮಿಕ್‌ ಸಂಶೋಧನೆ ಹಾಗೂ ನೀತಿ ಸಂಶೋಧನೆಯನ್ನು ಈ ಕೇಂದ್ರ ಸಮನ್ವಯಗೊಳಿಸುತ್ತದೆ.

ಈ ಕೇಂದ್ರವು ಕಾನೂನು ನಿಯಂತ್ರಣದ ಹೊಸ ಮತ್ತು ಸೂಕ್ತ ಮಾದರಿಗಳನ್ನು ಅಭಿವೃದ್ಧಿ ಪಡಿಸುತ್ತದೆ. ಹಾಗೂ ಕಾನೂನು ವ್ಯವಸ್ಥೆಯ ಸುಧಾರಣೆ ಮತ್ತು ನ್ಯಾಯ ಎಲ್ಲರಿಗೂ ಸಿಗುವಂತಾಗಲು ಹೊಸ ತಂತ್ರಜ್ಞಾನಗಳನ್ನು ಇನ್‌ಕ್ಯುಬೇಟ್‌ ಮಾಡುತ್ತದೆ. ಒಬ್ಬ ಕೇಂದ್ರ ನಿರ್ದೇಶಕರ ನಾಯಕತ್ವದಲ್ಲಿ ಈ ಜೆಎಸ್‌ಡಬ್ಲ್ಯು ಕೇಂದ್ರವು ಡಾಕ್ಟೋರಲ್‌ ಹಾಗೂ ಪೋಸ್ಟ್‌ಡಾಕ್ಟೋರಲ್‌ ಸಂಶೋಧನೆಗಳನ್ನು ಪ್ರಾಯೋಜಿಸುತ್ತದೆ. ಸರಕಾರಗಳು, ದೇಶೀಯ ಮತ್ತು ಅಂತಾರ್ರಾಷ್ಟ್ರೀಯ ನಿಯಂತ್ರಕರು, ಅಕಾಡೆಮಿಯಾ, ನಾಗರಿಕ ಸಮಾಜ ಮತ್ತು ಖಾಸಗಿ ಕ್ಷೇತ್ರದ ಸಂಸ್ಥೆಗಳು ಮುಂತಾದ ವೈವಿಧ್ಯಮಯ ಪಾಲುದಾರರು ಇದರಲ್ಲಿ ಒಳಗೊಳ್ಳುತ್ತಾರೆ.

‘‘ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಅತಿ ದೊಡ್ಡದಾದ ಅನುದಾನವು, ಎನ್‌ಎಲ್‌ಎಸ್‌ಐಯುನ ಒಳಗೊಳ್ಳುವಿಕೆ ಮತ್ತು ವಿಸ್ತರಣೆ ಯೋಜನೆ 2021-25ರ ಮುಂದಿನ ಹಂತದ ಯಶಸ್ವಿ ಅನುಷ್ಠಾನಕ್ಕೆ ನೆರವಾಗಲಿದೆ. ಈ ಮಹತ್ವದ ಯೋಜನೆಯಡಿ ಎಲ್ಲರಿಗೂ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ವಿದ್ಯಾರ್ಥಿಗಳ ಪ್ರವೇಶವನ್ನು ಸುಮಾರು 350%ದಷ್ಟು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ. ಸಾಮಾಜಿಕವಾಗಿ ಒಳಗೊಳ್ಳುವ ವಿದ್ಯಾರ್ಥಿ ಸಂಘವನ್ನು ಸೃಷ್ಟಿಸುವುದು ಕೂಡ ಅದರ ಗುರಿಯಾಗಿದೆ.

ಕಾನೂನು ವಿದ್ಯಾರ್ಥಿಗಳ ಮುಂದಿನ ಪೀಳಿಗೆಗೆ ವಿಶ್ವ ದರ್ಜೆಯ ಮೂಲಸೌಕರ್ಯ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಎನ್ಎಲ್‌ಎಸ್‌ಐಯು ಬೆಳವಣಿಗೆ ನಿಟ್ಟಿನಲ್ಲಿ ಜೆಎಸ್‌ಡಬ್ಲ್ಯು ಬೆಂಬಲ ಮತ್ತು ಬದ್ಧತೆಗೆ ನಾವು ಕೃತಜ್ಞರಾಗಿದ್ದೇವೆ. ನಮ್ಮ ಕಾಲದ ತಂತ್ರಜ್ಞಾನ ಪರಿವರ್ತನೆಗೆ ಪ್ರತಿಸ್ಪಂದಿಸುವ ರೀತಿಯಲ್ಲಿ ಹೊಸ ಮತ್ತು ಉಪಯೋಗಕಾರಿ ಕಾನೂನು ಸಂಶೋಧನೆಗಳಿಗೆ ಪ್ರೋತ್ಸಾಹವನ್ನು ಅದು ನೀಡಲಿದೆ ಎಂದು ಎನ್‌ಎಲ್‌ಎಸ್‌ಐಯು ಕುಲಪತಿ ಪ್ರೊಫೆಸರ್‌ ಡಾ.ಸುಧೀರ್‌ ಕೃಷ್ಣಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ:ಕಾರವಾರ ಕೇಣಿ ಬೇಲೆಕೇರಿ ಬಂದರು; ಅದಾನಿ ಕಂಪನಿ ಹಿಂದಿಕ್ಕಿದ ಜೆಎಸ್​ಡಬ್ಲ್ಯುಗೆ ಪೋರ್ಟ್ ಪ್ರಾಜೆಕ್ಟ್

ಜೆಎಸ್‌ಡಬ್ಲ್ಯು ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಸಂಗೀತಾ ಜಿಂದಾಲ್‌ ಮಾತನಾಡಿ, ‘ಹೊಸ ಅಕಾಡೆಮಿಕ್‌ ಬ್ಲಾಕ್‌ ಪುನಶ್ಚೇತನಕ್ಕೆ ಜೆಎಸ್‌ಡಬ್ಲ್ಯು ಕೊಡುಗೆಯು ಬೋಧನೆ, ಗುಣಮಟ್ಟ ಸುಧಾರಣೆ, ಮೂಲಸೌಕರ್ಯ ಮತ್ತು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿ ಸಂಪನ್ಮೂಲಗಳನ್ನು ಹೊಂದಲು ಗಮನಾರ್ಹವಾಗಿ ನೆರವಾಗಲಿದೆ. ಕಾನೂನು ವೃತ್ತಿಯು ನಮ್ಮ ದೇಶದ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸಲಿದೆ. ನ್ಯಾಯಪೂರ್ಣವಾದ ಸಮಾಜವೇ ಬೆಳವಣಿಗೆ ಮತ್ತು ವಿತರಣಾ ನ್ಯಾಯದ ಅವಕಾಶಗಳನ್ನು ಸೃಷ್ಟಿಸುವುದೇ ಇದಕ್ಕೆ ಕಾರಣವಾಗಿದೆ. ಹಾಗಾಗಿ ಸಂವಾದ, ಕಾನೂನುಬದ್ಧ ವರ್ತನೆ ಮತ್ತು ನ್ಯಾಯವನ್ನು ಪ್ರೀತಿಸುವ ಸಮಾಜ ಹಾಗೂ ದೇಶಕ್ಕೆ ನಿಯಮಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಕಾನೂನು ಶಿಕ್ಷಣವು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ದೀರ್ಘಾವಧಿಯಲ್ಲಿ ಈ ಕೊಡುಗೆಯು ಪದವಿಯನ್ನು ಪಡೆಯುವ  ವಿದ್ಯಾರ್ಥಿಗಳ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ವೃತ್ತಿಪರರ ಕೌಶಲಕ್ಕೆ ಬೆಂಬಲ ನೀಡುವುದು ಮಾತ್ರ ಜೆಎಸ್‌ಡಬ್ಲ್ಯು ಗುರಿಯಲ್ಲ. ಆದರೆ, ಸಮರ್ಪಣೆ ಮನೋಭಾವ ಹಾಗೂ ಶ್ರೇಷ್ಠತೆಯಿಂದ ನಮ್ಮ ದೇಶಕ್ಕೆ ಸೇವೆ ಸಲ್ಲಿಸಲು ಬದ್ಧರಾಗಿರುವ ನಾಯಕರನ್ನು ಸಬಲೀಕರಿಸುವುದು ಅದರ ಗುರಿಯಾಗಿದೆ ಎಂದರು.

ಎನ್‌ಎಲ್‌ಎಸ್‌ನೊಂದಿಗೆ ಜೆಎಸ್‌ಡಬ್ಲ್ಯು ಸಮೂಹದ ಪಾಲುದಾರಿಕೆ ಬಗ್ಗೆ ಮಾತನಾಡಿದ ಜೆಎಸ್‌ಡಬ್ಲ್ಯು ಸಿಮೆಂಟ್ ಮತ್ತು ಜೆಎಸ್‌ಡಬ್ಲ್ಯು ಪೇಂಟ್ಸ್‌ನ ಆಡಳಿತ ನಿರ್ದೇಶಕ (ಎ.ಡಿ.) ಶ್ರೀ ಪಾರ್ಥ ಜಿಂದಾಲ್, ‘ವಿವಿಧ ರೀತಿಯಲ್ಲಿ ಶಿಕ್ಷಣದ ಪ್ರವರ್ತನೆಗೆ ಹಲವು ವರ್ಷಗಳಿಂದ ಜೆಎಸ್‌ಡಬ್ಲ್ಯು ಬದ್ಧವಾಗಿದೆ. ನ್ಯಾಶನಲ್‌ ಲಾ ಸ್ಕೂಲ್‌ನ (ಎನ್‌ಎಲ್‌ಎಸ್)‌ ಫ್ಯೂಚರ್‌ ಆಫ್‌ ಲಾ ಸೆಂಟರ್‌ಗೆ ಕೊಡುಗೆಯು ತಂತ್ರಜ್ಞಾನಗಳ ಬದಲಾವಣೆಗಳಿಗೆ ಕಾನೂನು ಹೇಗೆ ಹೊಂದಿಕೊಳ್ಳಬೇಕು ಎನ್ನುವ ಮಹತ್ವದ ಅಂಶಕ್ಕೆ ಬೆಂಬಲ ನೀಡಲು ನಮಗೆ ನೆರವಾಗುತ್ತದೆ. ಮುನ್ನೆಗೆಯಲು ಹಾಗೂ ಈ ಹೊಸ ಕ್ಷೇತ್ರಗಳಲ್ಲಿ ನಾಯಕನಾಗಲು ಇದು ಎನ್‌ಎಲ್‌ಎಸ್‌ಗೆ ಅವಕಾಶವನ್ನು ಕಲ್ಪಿಸುತ್ತದೆ.

ಕೃತಕ ಬುದ್ಧಿಮತ್ತೆಯಲ್ಲಿ (ಎ.ಐ.) ಲಾರ್ಜ್‌ ಲ್ಯಾಂಗ್ವೇಜ್‌ ಮಾದರಿಗಳು ಮುಂತಾದ ಹೊಸ ತಂತ್ರಜ್ಞಾನಗಳ ಆವಿಷ್ಕಾರವು ಕಾನೂನು ಕ್ಷೇತ್ರವನ್ನು ಈಗಾಗಲೇ ಕ್ರಾಂತಿಕಾರಕ ಗೊಳಿಸುತ್ತಿವೆ. ತಂತ್ರಜ್ಞಾನದಿಂದ ನಡೆಯುವ ಸಾಧನಗಳು ಗುತ್ತಿಗೆ ವಿಶ್ಲೇಷಣೆ ಮತ್ತು ಮೊಕದ್ದಮೆಗಳನ್ನು ಪರಿವರ್ತಿಸುತ್ತಿವೆ. ಆ ಮೂಲಕ ಕಾನೂನು ಪ್ರಕ್ರಿಯೆಯನ್ನು ಹೆಚ್ಚು ದಕ್ಷಗೊಳಿಸುತ್ತಿದೆ. ಎನ್‌ಎಲ್‌ಎಸ್‌ನ ಫ್ಯೂಚರ್‌ ಆಫ್‌ ಲಾ ಸೆಂಟರ್‌, ಈ ಆವಿಷ್ಕಾರಗಳ ಶೋಧನೆ, ಪಠ್ಯಕ್ರಮ ಅಭಿವೃದ್ಧಿ ಮತ್ತು ಸಂಶೋಧನಾ ಉಪಕ್ರಮಗಳ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ಇರಲಿದೆ. ಅದು ನೈತಿಕ, ಕಾನೂನು, ಹಾಗೂ ಕಾನೂನಿನಲ್ಲಿ ತಂತ್ರಜ್ಞಾನದ ಸಾಮಾಜಿಕ ಪರಿಣಾಮಗಳ ಕುರಿತ ಅಂಶಗಳನ್ನು ಸಂಶೋಧನಾ ಉಪಕ್ರಮಗಳು ನಿರ್ವಹಿಸಲಿವೆ. ಈ ತಂತ್ರಜ್ಞಾನಗಳನ್ನು ಜವಾಬ್ದಾರಿಯುತವಾಗಿ ಬಳಸಲು ಮತ್ತು ನಿಯಂತ್ರಿಸಲು ಭವಿಷ್ಯದ ಕಾನೂನು ವೃತ್ತಿಪರರು ಸಿದ್ಧಗೊಳ್ಳುವಂತೆ ಖಾತರಿಪಡಿಸುವುದು ಅದರ ಉದ್ದೇಶವಾಗಿದೆ ಎಂದು ತಿಳಿಸಿದರು.

ಬಳಿಕ ಜೆಎಸ್‌ಡಬ್ಲ್ಯು ಫೌಂಡೇಶನ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಅಶ್ವಿನಿ ಸಕ್ಸೇನಾ, ‘ಕ್ಷೇತ್ರದಲ್ಲಿ ಪ್ರಬಲವಾದ ಅಸ್ತಿತ್ವ ಹೊಂದಿರುವ ಮೂಲಕ ದೇಶದ 14 ರಾಜ್ಯಗಳ 33 ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಜೆಎಸ್‌ಡಬ್ಲ್ಯು ಸ್ಥಾವರ ಮತ್ತು ಬಂದರು ಪ್ರದೇಶದ ಸ್ಥಳಗಳಲ್ಲಿ ಸಮುದಾಯಗಳಿಗೆ ಆದ್ಯತೆ ನೀಡಿ ಕೆಲಸ ಮಾಡುತ್ತದೆ. ಭಾರತದ ಸಾಮಾಜಿಕ ಅಭಿವೃದ್ಧಿಗೆ ಅರ್ಥಪೂರ್ಣ ರೀತಿಯಲ್ಲಿ ಕೊಡುಗೆ ನೀಡಲು ಜೆಎಸ್‌ಡಬ್ಲ್ಯು ಫೌಂಡೇಶನ್‌ ಈ ಸ್ಥಳಗಳಾಚೆಯ ಸಮುದಾಯಗಳನ್ನು ಕೂಡ ತಲುಪುತ್ತದೆ. ಕೋವಿಡ್-19 ಸಾಂಕ್ರಾಮಿಕತೆಯ ಸಮಯದಲ್ಲಿ ಈ ಎಲ್ಲಾ ಸ್ಥಳಗಳಲ್ಲಿ ಆಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಮೂಲಕ ನಾನಾ ಸಮುದಾಯಗಳು ಮತ್ತು ಕುಟುಂಬಗಳಿಗೆ ಬೆಂಬಲ ಒದಗಿಸಿದೆ. ಜೆಎಸ್‌ಡಬ್ಲ್ಯು ಫೌಂಡೇಶನ್‌ನ ಸಮಗ್ರ ಜೀವನ-ಚಕ್ರ ಆಧಾರಿತ ಮಧ್ಯಪ್ರವೇಶಗಳು ಭಾರತದಾದ್ಯಂತ ತುಳಿತಕ್ಕೊಳಗಾದ ಹತ್ತು ಲಕ್ಷಕ್ಕಿಂತಲೂ ಅಧಿಕ ಜನರ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರಿವೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ