PSI Recruitment Scam: ಕೆಳಹಂತದ ಅಧಿಕಾರಿಗಳಿಂದ ಅಮೃತ್ ಪಾಲ್ ತನಿಖೆ ಪ್ರಯೋಜನವಿಲ್ಲ: ಹೈಕೋರ್ಟ್​

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 14, 2022 | 1:32 PM

ಅಮ್ರಿತ್ ಪಾಲ್ ಅವರ ವಿಚಾರಣೆಯನ್ನು ಕೆಳಹಂತದ ಅಧಿಕಾರಿಗಳು ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೈಕೋರ್ಟ್​ ಅಭಿಪ್ರಾಯಪಟ್ಟಿದೆ

PSI Recruitment Scam: ಕೆಳಹಂತದ ಅಧಿಕಾರಿಗಳಿಂದ ಅಮೃತ್ ಪಾಲ್ ತನಿಖೆ ಪ್ರಯೋಜನವಿಲ್ಲ: ಹೈಕೋರ್ಟ್​
ಕರ್ನಾಟಕ್​ ಹೈಕೋರ್ಟ್​
Follow us on

ಬೆಂಗಳೂರು: ಪಿಎಸ್​ಐ ನೇಮಕಾತಿ ಹಗರಣದಲ್ಲಿ ಅಕ್ರಮ ಎಸಗಿದ ಆರೋಪ ಎದುರಿಸುತ್ತಿರುವ ನೇಮಕಾತಿ ವಿಭಾಗದ ಮಾಜಿ ಎಡಿಜಿಪಿ ಅಮ್ರಿತ್ ಪಾಲ್ ಅವರ ವಿಚಾರಣೆಯನ್ನು ಕೆಳಹಂತದ ಅಧಿಕಾರಿಗಳು ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೈಕೋರ್ಟ್​ ಅಭಿಪ್ರಾಯಪಟ್ಟಿದೆ. ಈ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಸಿಐಡಿ ಪರ ವಕೀಲರು, ಡಿಜಿಪಿ ಮೇಲ್ವಿಚಾರಣೆಯಲ್ಲಿಯೇ ತನಿಖೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು. ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಮಧ್ಯಾಹ್ನ 2.30ಕ್ಕೆ ಕಲಾಪ ಮುಂದೂಡಿದರು.

ಇದೇ ವೇಳೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನೂ (Regional Forensic Science Laboratory – RFSL) ಸಿಐಡಿ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದರು. ಒಎಂಆರ್‌ ಪುಟಗಳು ಬದಲಾಗಿರುವ ಕುರಿತೂ ಮಾಹಿತಿ ಸಲ್ಲಿಸಲಾಯಿತು. ಸಿಐಡಿ ತನಿಖಾಧಿಕಾರಿಗಳು ಸಿದ್ಧಪಡಿಸಿರುವ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್​ಗೆ ಸಲ್ಲಿಸಲಾಗಿದೆ.

 

Published On - 1:29 pm, Thu, 14 July 22