
ಬೆಂಗಳೂರು, ಸೆಪ್ಟೆಂಬರ್ 18: ನೈಋತ್ಯ ರೈಲ್ವೆ (South Western Railway) ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲಿನ ಸೇವಾ ದಿನಗಳಲ್ಲಿ ಬದಲಾವಣೆ ಸೇರಿದಂತೆ ಕೆಲ ರೈಲಿನ ವರ್ಗ ಮತ್ತು ಸಂಖ್ಯೆಗಳಲ್ಲಿ ಬದಲಾವಣೆ ಮಾಡಿದೆ. ಆ ಮೂಲಕ ಪ್ರಯಾಣಿಕರ ಸಂಚಾರಕ್ಕೆ ಮತ್ತಷ್ಟು ಅನುಕೂಲ ಮಾಡಿಕೊಡಲಾಗಿದೆ. ಹಾಗಾದರೆ ಯಾವೆಲ್ಲಾ ಮಾರ್ಗದ ರೈಲಿನ ಸೇವಾ ದಿನ, ಸಮಯ ಸೇರಿದಂತೆ ಇತರೆ ಮಾಹಿತಿ ಇಲ್ಲಿದೆ.
ದಕ್ಷಿಣ ಮಧ್ಯ ರೈಲೆಯು ರೈಲು ಸಂಖ್ಯೆ (20703/20704) ಕಾಚಿಗುಡ-ಯಶವಂತಪುರ-ಕಾಚಿಗುಡ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಸೇವಾ ದಿನಗಳನ್ನು ಪರಿಷ್ಕರಿಸಿದೆ. ಪ್ರಸ್ತುತ, ಈ ರೈಲು ಬುಧವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಸಂಚರಿಸುತ್ತದೆ.
Kindly note:
I. Change in Train Category & Numbers
II. Change in Day of Services of Vande Bharat Express
I. ರೈಲಿನ ವರ್ಗ ಮತ್ತು ಸಂಖ್ಯೆಗಳಲ್ಲಿ ಬದಲಾವಣೆ
II. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸೇವಾ ದಿನಗಳಲ್ಲಿ ಬದಲಾವಣೆ#SWRupdates pic.twitter.com/BGa1saoDHJ— South Western Railway (@SWRRLY) September 17, 2025
ಡಿಸೆಂಬರ್ 4ರಿಂದ ಈ ರೈಲು ಇನ್ಮುಂದೆ ಶುಕ್ರವಾರ ಹೊರತುಪಡಿಸಿ ವಾರದ ಉಳಿದ ಎಲ್ಲಾ ದಿನಗಳಲ್ಲಿ ಸೇವೆ ಒದಗಿಸಲಿವೆ. ರೈಲಿನ ವೇಳಾಪಟ್ಟಿ, ನಿಲುಗಡೆಗಳು, ಆವರ್ತನ ಮತ್ತು ಬೋಗಿಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ದಕ್ಷಿಣ ರೈಲ್ವೆಯು ರೈಲು ಸಂಖ್ಯೆ (12678/12677) ಎರ್ನಾಕುಲಂ-ಕೆಎಸ್‌ಆರ್ ಬೆಂಗಳೂರು-ಎರ್ನಾಕುಲಂ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಡಿಸೆಂಬರ್ 3ರಿಂದ ಎಕ್ಸ್‌ಪ್ರೆಸ್ ವರ್ಗಕ್ಕೆ ಬದಲಾಯಿಸಿ, ಅದರ ಸಂಖ್ಯೆಗಳನ್ನು ಪರಿಷ್ಕರಿಸಿದೆ.
ಇದನ್ನೂ ಓದಿ: ಬೆಂಗಳೂರಿನ ರಿಂಗ್ ರೋಡ್ನಲ್ಲಿ 1 ವಾರ ವಾಹನ ಸಂಚಾರಕ್ಕೆ ನಿರ್ಬಂಧ: ಇಲ್ಲಿದೆ ಪರ್ಯಾಯ ಮಾರ್ಗ
ಇದರ ಪ್ರಕಾರ, ರೈಲು ಸಂಖ್ಯೆ (12678) ಎರ್ನಾಕುಲಂ- ಕೆಎಸ್‌ಆರ್ ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಇನ್ಮುಂದೆ ರೈಲು ಸಂಖ್ಯೆ (16378) ಎರ್ನಾಕುಲಂ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಆಗಿ ಸಂಚರಿಸಲಿದೆ. ಅದೇ ರೀತಿ, ರೈಲು ಸಂಖ್ಯೆ (12677) ಕೆಎಸ್‌ಆರ್ ಬೆಂಗಳೂರು-ಎರ್ನಾಕುಲಂ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಅನ್ನು ರೈಲು ಸಂಖ್ಯೆ (16377) ಬೆಂಗಳೂರು-ಎರ್ನಾಕುಲಂ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:38 am, Thu, 18 September 25