Kadalekai parishe: ಇಂದಿನಿಂದ ಬಸವನಗುಡಿ ಕಡಲೇಕಾಯಿ ಪರಿಷೆ ಆರಂಭ; 2 ವರ್ಷಗಳ ಬಳಿಕ ಮತ್ತೆ ಅದ್ದೂರಿ ಆಚರಣೆ

ಹೊಸ ರೂಪಂತರಿ ವೈರಸ್ ಭೀತಿ‌ಯ ನಡುವೆಯೇ ಬೆಂಗಳೂರಿನಲ್ಲಿ ಹಬ್ಬದ ಆಚಾರಣೆ ಆರಂಭವಾಗಿದ್ದು, ಕೊಂಚ ಆತಂಕ ಸೃಷ್ಟಿ ಮಾಡಿದೆ. ಹೀಗಾಗಿ ವ್ಯಾಪರಸ್ಥರು ಹಾಗೂ ಜನರ ಮೇಲೆ ಬಿಬಿಎಂಪಿ ಸಿಬ್ಬಂದಿಗಳು ಹೆಚ್ಚಿನ ನಿಗಾ ವಹಿಸಲಿದ್ದಾರೆ.

Kadalekai parishe: ಇಂದಿನಿಂದ ಬಸವನಗುಡಿ ಕಡಲೇಕಾಯಿ ಪರಿಷೆ ಆರಂಭ; 2 ವರ್ಷಗಳ ಬಳಿಕ ಮತ್ತೆ ಅದ್ದೂರಿ ಆಚರಣೆ
ಕಡಲೆಕಾಯಿ ಪರಿಷೆ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಕಡೆಯ ಕಾರ್ತಿಕ ಸೋಮವಾರ ಹಿನ್ನೆಲೆ ಇಂದಿನಿಂದ ( ನವೆಂಬರ್​ 29) ಬಸವನಗುಡಿಯಲ್ಲಿ ಕಡಲೇಕಾಯಿ ಪರಿಷೆ ಆರಂಭವಾಗಲಿದೆ. 2 ವರ್ಷಗಳ ಬಳಿಕ ಅದ್ಧೂರಿಯಾಗಿ ಐತಿಹಾಸಿಕ ಕಡಲೇಕಾಯಿ ಪರಿಷೆಗೆ ಚಾಲನೆ ಸಿಕ್ಕಿದ್ದು, ಬೆಳಗ್ಗೆ 10.30ಕ್ಕೆ ದೊಡ್ಡ ಗಣಪತಿ ಹಾಗೂ ಬಸವಣ್ಣನಿಗೆ ವಿಶೇಷ ಪೂಜೆ ಸಲ್ಲಿಸಿ, ಕಡಲೇಕಾಯಿ ಪರಿಷೆ (Kadalekai parishe) ಆರಂಭಲಾಗಲಿದೆ. ಹೊರ ರಾಜ್ಯದ ಜನ ಕೂಡ ಇಲ್ಲಿಗೆ ಆಗಮಿಸುವ ನಿರೀಕ್ಷೆ ಇದೆ. ಬಿಬಿಎಂಪಿ (BBMP) ಆಯುಕ್ತರಾದ ಗೌರವ್ ಗುಪ್ತಾ ಸೇರಿದಂತೆ ಹಲವು ರಾಜಕೀಯ ಗಣ್ಯರು ಕಡಲೇಕಾಯಿ ಪರಿಷೆಯಲ್ಲಿ ಭಾಗಿಯಾಗಲಿದ್ದಾರೆ.

ಕಡಲೇಕಾಯಿ ಪರಿಷೆಗೆ ಆಂಧ್ರ, ತಮಿಳುನಾಡು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಿಂದ ಕಡಲೇಕಾಯಿ ಮಾರಾಟಕ್ಕೆ ಬರುತ್ತದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾಗುವ ಸಾಧ್ಯತೆ ಇದೆ. ಆದರೆ ಹೊಸ ರೂಪಂತರಿ ವೈರಸ್ ಭೀತಿ‌ಯ ನಡುವೆಯೇ ಬೆಂಗಳೂರಿನಲ್ಲಿ ಹಬ್ಬದ ಆಚಾರಣೆ ಆರಂಭವಾಗಿದ್ದು, ಕೊಂಚ ಆತಂಕ ಸೃಷ್ಟಿ ಮಾಡಿದೆ. ಹೀಗಾಗಿ ವ್ಯಾಪರಸ್ಥರು ಹಾಗೂ ಜನರ ಮೇಲೆ ಬಿಬಿಎಂಪಿ ಸಿಬ್ಬಂದಿಗಳು ಹೆಚ್ಚಿನ ನಿಗಾ ವಹಿಸಲಿದ್ದಾರೆ.

ಕಾರ್ತಿಕ ಮಾಸದ ಕೊನೆ ಸೋಮವಾರದಂದು ನಡೆಯುವ ಕಡಲೇಕಾಯಿ ಪರಿಷೆ ಈ ಬಾರಿ ನವೆಂಬರ್ 29ರಿಂದ ಡಿಸೆಂಬರ್ 1ರ ವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಹೀಗಾಗಿ ಬಸವನಗುಡಿ ಸುತ್ತಾಮುತ್ತಾ ಜಾತ್ರೆಯ ವಾತಾವರಣ ನಿರ್ಮಾಣವಾಗಿದೆ. ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತದಿಗಳು ದೊಡ್ಡ ಗಣೇಶ ಹಾಗೂ ದೊಡ್ಡ ಬಸವಣ್ಣನ ದೇವಸ್ಥಾನದಲ್ಲಿ ಕ್ಯೂ ನಿಂತಿರುವ ದೃಶ್ಯ ಕಂಡು ಬಂದಿದೆ. ಸದ್ಯ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಸದ್ಯ ಒಮಿಕ್ರಾನ್ ರೂಪಾಂತರಿ ತಳಿ ರಾಜ್ಯದಲ್ಲಿ ಆತಂಕ ಹೆಚ್ಚಿಸಿದೆ. ದೇಶದಲ್ಲಿ ಇದುವರೆಗೂ ಈ ಹೊಸ ತಳಿಯ ಕೇಸ್ ಪತ್ತೆಯಾಗದೇ ಇದ್ರೂ, ಈ ರೂಪಾಂತರಿಯ ಕ್ರೌರ್ಯಕ್ಕೆ ಜಗತ್ತೆ ಬೆಚ್ಚಿ ಬಿದ್ದಿದೆ. ಹೀಗಾಗಿ ದೇವಾಸ್ಥಾನಕ್ಕೆ ಬರುವ ಪ್ರತಿಯೊಬ್ಬರಿಗೂ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದೆ. ಜಾತ್ರೆ ನಡೆಯುವ ಸ್ಥಳದಲ್ಲಿಯೇ ಟೆಸ್ಟಿಂಗ್ ಸೆಂಟರ್ ಹಾಗೂ ವ್ಯಾಕ್ಸಿನೇಷನ್‌ ನೀಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಸದ್ಯ ಕಡಲೇಕಾಯಿ ಪರಿಷೆ ಸಿದ್ದತೆ ಬಗ್ಗೆ ವಿಶೇಷ ಆಯುಕ್ತೆ ತುಳುಸಿ ಪರಿಶೀಲನೆ ನಡೆಸಿದ್ದಾರೆ. ಎಷ್ಟು ಕಡೆ ವ್ಯಾಕ್ಸಿನ್ ಸೆಂಟರ್​ಗಳಿವೆ, ಎಷ್ಟು ಶೌಚಾಲಯಗಳಿವೆ, ಎಷ್ಟು ಜನ ವ್ಯಾಪಾರಸ್ಥರಿದ್ದಾರೆ, ಮುಜುರಾಯಿ ಇಲಾಖೆಯಿಂದ ಏನೆಲ್ಲ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎನ್ನುವ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Peanut: ಕಡಲೆಕಾಯಿ ತಿನ್ನುವ ಅಭ್ಯಾಸ ಇದೆಯೇ? ಹೃದ್ರೋಗ ನಿವಾರಣೆಗೆ ಇದು ಹೇಗೆ ಸಹಕಾರಿ ತಿಳಿಯಿರಿ

ಬೆಂಗಳೂರು: ನ.29ರಿಂದ ಬಸವನಗುಡಿಯಲ್ಲಿ ಕಡಲೇಕಾಯಿ ಪರಿಷೆ ಆರಂಭ; ಕೊರೊನಾ ನಿಯಮ ಪಾಲಿಸಿ ಪರಿಷೆ ನಡೆಸಲು ಅನುಮತಿ

Published On - 10:54 am, Mon, 29 November 21

Click on your DTH Provider to Add TV9 Kannada