ಬೆಂಗಳೂರು: ಹೆಚ್ ಎಸ್ ಆರ್ ಲೇಔಟ್ ನಲ್ಲಿ (Parangipalya HSR Layout) ಕನ್ನಡ ಬಾವುಟ ಸುಟ್ಟ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ಹಿಂದಿದೆ ಆರೋಪಿ ಟೆಕ್ಕಿಯ ಲಾಕ್ ಡೌನ್ ಕಹಾನಿ ಇದಕ್ಕೆ ಹಿನ್ನೆಲೆಯಾಗಿ ಇದೆ! ಐಐಟಿ ಯಲ್ಲಿ ಓದಿದ್ದವನು ಕನ್ನಡ ಬಾವುಟ ಸುಡಲು (Kannada flag burnt) ಕಾರಣವೇನು ಎಂಬ ಸಂಗತಿ ಬಹಿರಂಗವಾಗಿದೆ.
ಪೊಲೀಸರ ಮೇಲೆ ರಿವೇಂಜ್ ತೀರಿಸಿಕೊಳ್ಳಲು 3 ವರ್ಷದ ಬಳಿಕ ಇದು ಪ್ರತೀಕಾರದ ರೂಪದಲ್ಲಿ ಕಾರ್ಯಗತವಾಗಿದೆ. ಬಂಧಿತ ಆರೋಪಿ ಅಮೃತೇಶ್ ವಿಚಾರಣೆ ವೇಳೆ ಹಲವಾರು ಆತಂಕಕಾರಿ ಮಾಹಿತಿಗಳು ಬಹಿರಂಗವಾಗಿವೆ. ಅಮೃತೇಶ್ ಮೂಲತಃ ಉತ್ತರ ಪ್ರದೇಶದವನಾಗಿದ್ದು, ನಗರದ ಪ್ರತಿಷ್ಠಿತ ಕಂಪನಿಯಲ್ಲಿ 2 ಲಕ್ಷ ರೂಪಾಯಿ ಸಂಬಳ ತೆಗೆದುಕೊಳ್ಳುತ್ತಿದ್ದಾನೆ (Techie). ಆದ್ರೆ 2019ರ ಲಾಕ್ ಡೌನ್ ವೇಳೆ (covid 19 lockdown) ಅನಿವಾರ್ಯವಾಗಿ ಊರಿಗೆ ತೆರಳಬೇಕಾಗಿತ್ತು. ಆದ್ರೆ ಈ ಸಮಯದಲ್ಲಿ ಬೆಂಗಳೂರಿನಲ್ಲಿ ಲಾಕ್ ಡೌನ್ ಹೇರಲಾಗಿತ್ತು. ಲಾಕ್ ಡೌನ್ ನಲ್ಲಿ ಊರಿಗೆ ತೆರಳಲು ಬೆಂಗಳೂರು ಪೊಲೀಸರು ಬಿಟ್ಟಿರಲಿಲ್ಲ. ಹೀಗಾಗಿ ಪೊಲೀಸ್ರ ಕೈಲಿ ಒದೆ ತಿಂದು ರೂಮಿಗೆ ವಾಪಸ್ಸಾಗಿದ್ದ ಅಮೃತೇಶ್.
ಇದನ್ನೂ ಓದಿ: ಚಾಮರಾಜನಗರದ ಈ ವ್ಯಕ್ತಿಯಲ್ಲಿ ಪತ್ನಿಯ ಶವಸಂಸ್ಕಾರಕ್ಕೂ ಹಣವಿರಲಿಲ್ಲ!
ರೂಮಿಗೆ ವಾಪಸ್ಸಾಗಿದ್ದೇ ಲಾಕ್ ಡೌನ್ ಮುಗಿಯೋವರೆಗೂ ನಗರದಲ್ಲೇ ಇದ್ದ ಅಮೃತೇಶ್. ಲಾಕ್ ಡೌನ್ ಮುಗಿಯುತ್ತಿದ್ದಂತೆ ಉತ್ತರ ಪ್ರದೇಶಕ್ಕೆ ವಾಪಸ್ ಆಗಿದ್ದ. ವರ್ಕ್ ಫ್ರಂ ಹೋಂ ಮಗಿದ ಬಳಿಕ ಮತ್ತೆ ನಗರಕ್ಕೆ ವಾಪಸ್ ಆಗಿದ್ದ. ಆದ್ರೆ ಕಂಪನಿಗೆ ಹೋಗಿ ಬರೋವಾಗೆಲ್ಲ ಪೊಲೀಸರನ್ನು ಕಂಡು ದ್ವೇಷ ಬೆಳೆಸಿಕೊಂಡಿದ್ದ. ಹೀಗಾಗಿ ಅಮೃತೇಶ ಕನ್ನಡ ಮತ್ತು ಕರ್ನಾಟಕದ ಬಗ್ಗೆಯೂ ದ್ವೇಷ ಬೆಳಸಿಕೊಂಡಿದ್ದ ಆರೋಪಿ!
ಇದಕ್ಕಾಗಿ ಭಾನುವಾರ ರಾತ್ರಿ ಬಾವುಟ ಸುಡಲು ಪ್ಲ್ಯಾನ್ ಮಾಡಿದ್ದ. ಒಂದು ವೇಳೆ ಬಾವುಟ ಸುಡೋದು ಯಾರಿಗೂ ಗೊತ್ತಾಗಿಲ್ಲ ಅಂದಿದ್ರೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವ ಪ್ಲ್ಯಾನ್ ಮಾಡಿದ್ದ. ಯಾಕಂದ್ರೆ ಬಾವುಟ ಸುಟ್ರೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತೆ. ಮಾಧ್ಯಮದವರು ಕವರೇಜ್ ಜಾಸ್ತಿ ಆಗುತ್ತೆ. ಪೊಲೀಸರನ್ನು ಅಮಾನತು ಮಾಡಿಸಬಹುದು ಅನ್ನೋ ಪ್ಲ್ಯಾನ್ ಸಿದ್ಧಪಡಿಸಿಕೊಂಡಿದ್ದ ಅಮೃತೇಶ್.
ತನ್ನನ್ನು ಊರಿಗೆ ಹೋಗಲು ಬಿಡದ ಪೊಲೀಸರನ್ನು ಸಸ್ಪೆಂಡ್ ಮಾಡ್ತಾರೆ ಎಂದು ಭಾವಿಸಿದ್ದ ಆರೋಪಿ ಟೆಕ್ಕಿ. ಸದ್ಯ ಬಾವುಟ ಸುಟ್ಟು ಜೈಲು ಪಾಲಾಗಿದ್ದಾನೆ. ಲಕ್ಷ ಲಕ್ಷ ದುಡಿಬೇಕಾದವನು ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುತಿದ್ದಾನೆ.
ಇದನ್ನೂ ಓದಿ: ಕಲಬುರಗಿ ತಾಲೂಕು ಆಫೀಸಿನಲ್ಲಿ ತಮ್ಮದೇ ದಾಖಲಾತಿ ಪತ್ರ ಪಡೆಯಲು ಜನ ಲಂಚದ ಹಣ ನೀಡಬೇಕಂತೆ!