ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲುಗೆ ಕೊರೊನಾ, ನನ್ನ ಸಂಪರ್ಕಕ್ಕೆ ಬಂದವರು ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಟ್ವೀಟ್

| Updated By: ಆಯೇಷಾ ಬಾನು

Updated on: Jan 10, 2022 | 1:08 PM

ನನಗೆ ಕೋವಿಡ್ ದೃಢವಾಗಿದ್ದು, ಯಾವುದೇ ಲಕ್ಷಣಗಳಿಲ್ಲದೆ ಆರೋಗ್ಯವಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ನಳೀನ್ ಕುಮಾರ್ ಕಟೀಲ್ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲುಗೆ ಕೊರೊನಾ, ನನ್ನ ಸಂಪರ್ಕಕ್ಕೆ ಬಂದವರು ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಟ್ವೀಟ್
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲು
Follow us on

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲುಗೆ(Nalin kumar kateel) ಕೊರೊನಾ ಸೋಂಕು(Coronavirus) ತಗುಲಿರುವುದು ದೃಢಪಟ್ಟಿದೆ. ಈ ಬಗ್ಗೆ ಟ್ವೀಟ್ ಮೂಲಕ ನಳೀನ್ ಕುಮಾರ್ ಕಟೀಲ್ ಮಾಹಿತಿ ಹಂಚಿಕೊಂಡಿದ್ದಾರೆ. ನನಗೆ ಕೋವಿಡ್ ದೃಢವಾಗಿದ್ದು, ಯಾವುದೇ ಲಕ್ಷಣಗಳಿಲ್ಲದೆ ಆರೋಗ್ಯವಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ನಳೀನ್ ಕುಮಾರ್ ಕಟೀಲ್ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಈ ಹಿಂದೆ ಸಚಿವ ಆರ್. ಅಶೋಕ್, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ್ಗೂ ಸೋಂಕು ದೃಢಪಟ್ಟಿದೆ. ಜನವರಿ 7ರಂದು ದೆಹಲಿಯಿಂದ ವಾಪಸಾಗಿದ್ದ ಗದ್ದಿಗೌಡರ್, ತಮ್ಮ ಬಾದಾಮಿ ನಿವಾಸದಲ್ಲಿ ಹೋಂ ಕ್ವಾರಂಟೈನ್ ಆಗಿದ್ದಾರೆ.

ನಿನ್ನೆ ಒಂದೇ ದಿನ 12,000 ಕೇಸ್
ಕರ್ನಾಟಕ ರಾಜ್ಯದಲ್ಲಿ ನಿನ್ನೆ 12,000 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಬೆಂಗಳೂರಿನಲ್ಲಿಯೇ 9,020 ಜನರಿಗೆ ಮಾರಿ ವಕ್ಕರಿಸಿದೆ. ಕೊರೊನಾ ಸೋಂಕಿಗೆ ರಾಜ್ಯದಲ್ಲಿ ನಿನ್ನೆ ನಾಲ್ವರು ಬಲಿಯಾಗಿದ್ದು, ಸಕ್ರಿಯ ಕೇಸ್ಗಳ ಸಂಖ್ಯೆಯೂ 49, 602ಕ್ಕೆ ಹೆಚ್ಚಿದೆ. ರಾಜ್ಯದ ಕೊವಿಡ್ ಪಾಸಿಟಿವಿಟಿ ದರ 6.33ಕ್ಕೆ ಏರಿಕೆ ಕಂಡಿದ್ರೆ, ಬೆಂಗಳೂರಲ್ಲಿ ಕೊವಿಡ್‌ ಪಾಸಿಟಿವಿಟಿ ದರ ಶೇಕಡಾ 10.53ಕ್ಕೆ ಬಂದುನಿಂತಿದೆ.

ಕಳೆದ 24 ಗಂಟೆಯಲ್ಲಿ 1,59,632 ಹೊಸ ಕೊವಿಡ್ ಕೇಸ್
ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1 ಲಕ್ಷದ59 ಸಾವಿರದ 632 ಹೊಸ ಕೊವಿಡ್ ಕೇಸ್ ಪತ್ತೆಯಾಗಿವೆ. 327 ಸೋಂಕಿತರು ಸಾವನ್ನಪ್ಪುವ ಮೂಲಕ, ಸೋಂಕಿನಿಂದ ಈವರೆಗೆ ಮೃತಪಟ್ಟವರ ಸಂಖ್ಯೆ 4 ಲಕ್ಷದ 83 ಸಾವಿರದ790ಕ್ಕೇರಿದೆ. ಇನ್ನು 24 ಗಂಟೆಯಲ್ಲಿ 40,863 ಕೊರೊನಾ ಸೋಂಕಿತರು ಗುಣಮುಖರಾಗಿದ್ದು, 5 ಲಕ್ಷದ90 ಸಾವಿರದ611ಕೊರೊನಾ ಸಕ್ರಿಯ ಪ್ರಕರಣಗಳು ಸದ್ಯ ದೇಶದಲ್ಲಿವೆ. ಆ ಮೂಲಕ ಕೊರೊನಾ ಪಾಸಿಟಿವಿಟಿ ದರವೂ ಶೇಕಡಾ 10.21ಕ್ಕೆ ಹೆಚ್ಚಳ ಕಂಡಿದೆ.

ಇದನ್ನೂ ಓದಿ: Novak Djokovic: ಕೋರ್ಟ್​ ಕೇಸ್​ನಲ್ಲಿ ಜೊಕೊವಿಕ್​ಗೆ ಗೆಲುವು: ಕ್ವಾರಂಟೈನ್​ನಿಂದ ಬಿಡುಗಡೆ ಮಾಡುವಂತೆ ಆದೇಶ

Published On - 12:46 pm, Mon, 10 January 22