AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Novak Djokovic: ಕೋರ್ಟ್​ ಕೇಸ್​ನಲ್ಲಿ ಜೊಕೊವಿಕ್​ಗೆ ಗೆಲುವು: ಕ್ವಾರಂಟೈನ್​ನಿಂದ ಬಿಡುಗಡೆ ಮಾಡುವಂತೆ ಆದೇಶ

ಸರ್ಕ್ಯೂಟ್ ಕೋರ್ಟ್ ನ್ಯಾಯಾಧೀಶ ಆಂಥೋನಿ ಕೆಲ್ಲಿ ಅವರು ಜೊಕೊವಿಕ್ ಅವರನ್ನು ಮೆಲ್ಬೋರ್ನ್ ಹೋಟೆಲ್ ಕ್ವಾರಂಟೈನ್‌ನಿಂದ 30 ನಿಮಿಷಗಳ ಒಳಗೆ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಆದೇಶ ಹೊರಡಿಸಿದ್ದಾರೆ.

Novak Djokovic: ಕೋರ್ಟ್​ ಕೇಸ್​ನಲ್ಲಿ ಜೊಕೊವಿಕ್​ಗೆ ಗೆಲುವು: ಕ್ವಾರಂಟೈನ್​ನಿಂದ ಬಿಡುಗಡೆ ಮಾಡುವಂತೆ ಆದೇಶ
Novak Djokovic
TV9 Web
| Edited By: |

Updated on: Jan 10, 2022 | 12:44 PM

Share

ಕೋವಿಡ್ ಲಸಿಕೆ ಹಾಕಿಸಿಕೊಳ್ಳದ ವಿಚಾರಕ್ಕೆ ಕಳೆದು ಎರಡು ದಿನಗಳಿಂದ ಭಾರೀ ಸುದ್ದಿಯಲ್ಲಿದ್ದ ಟೆನಿಸ್​ ಲೋಕದ ನಂ.1 ಆಟಗಾರ ಸರ್ಬಿಯಾದ ನೊವಾಕ್‌ ಜೊಕೊವಿಕ್​ಗೆ (Novak Djokovic) ಕೊನೆಗೂ ಗೆಲುವು ದಕ್ಕಿದೆ. ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿ ಆಡಲು ಹೋಗಿ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದರು. ಕೋವಿಡ್‌-19 (Covid 19) ಕಾರಣ ಆಸ್ಟ್ರೇಲಿಯಾದಲ್ಲಿ ಕಟ್ಟು ನಿಟ್ಟಿನ ನಿಯಮಗಳು ಜಾರಿಯಲ್ಲಿವೆ. ಈ ಹಿನ್ನೆಲೆಯಲ್ಲಿ ನೊವಾಕ್‌ ಜೊಕೊವಿಕ್‌ ಸರಿಯಾದ ದಾಖಲಾತಿಗಳನ್ನು ಒದಗಿಸುವಲ್ಲಿ ವಿಫಲರಾದ ಕಾರಣ ಅವರ ವೀಸಾ ತಿರಸ್ಕಾರವಾಗಿತ್ತು. ಇದರ ವಿಚಾರಣೆಯನ್ನು ಆಸ್ಟ್ರೇಲಿಯಾ ನ್ಯಾಯಾಲಯ ಸೋಮವಾರ ಕೈಗೆತ್ತಿಕೊಂಡಿದ್ದು, ಮಹತ್ವದ ತೀರ್ಪು ಹೊರಡಿಸಿದೆ. ಮೆಲ್ಬರ್ನ್​ನಲ್ಲಿ ಕೋರ್ಟ್ (Melbourne Court)ನಲ್ಲಿ ನಡೆದ ವಿಚಾರಣೆಯಲ್ಲಿ ಮೊದಲು ನೊವಾಕ್‌ ಜೊಕೊವಿಕ್‌ ಗಡಿಪಾರು ತೀರ್ಪಿಗೆ ಆಸ್ಟ್ರೇಲಿಯಾ ನ್ಯಾಯಾಧೀಶರು ಮಧ್ಯಂತರ ತಡೆಯಾಜ್ಞೆ ನೀಡಿದ್ದರು. ಇದೀಗ ಮಹತ್ವದ ತೀರ್ಪು ಪ್ರಕಟಿಸಿದ್ದು ಈ ಪ್ರಕರಣದಲ್ಲಿ ಜೊಕೊವಿಕ್​ಗೆ ಗೆಲುವು ಸಿಕ್ಕಿದೆ. ಸರ್ಕ್ಯೂಟ್ ಕೋರ್ಟ್ ನ್ಯಾಯಾಧೀಶ ಆಂಥೋನಿ ಕೆಲ್ಲಿ ಅವರು ಜೊಕೊವಿಕ್ ಅವರನ್ನು ಮೆಲ್ಬೋರ್ನ್ ಹೋಟೆಲ್ ಕ್ವಾರಂಟೈನ್‌ನಿಂದ 30 ನಿಮಿಷಗಳ ಒಳಗೆ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಆದೇಶ ಹೊರಡಿಸಿದ್ದಾರೆ.

ಜನವರಿ 17ರಿಂದ ಜನವರಿ 30ರವರೆಗೆ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಪಾಲ್ಗೊಳ್ಳಲೇಬೇಕೆಂಬ ಕಾತರತೆಯಲ್ಲಿ ಜೋಕೊವಿಚ್ ಇದ್ದರೆ, ಅವರನ್ನ ವಾಪಸ್ ಕಳಿಸುವ ಯೋಜನೆಯಲ್ಲಿ ಆಸ್ಟ್ರೇಲಿಯಾ ಸರ್ಕಾರ ಇತ್ತು. ಇದೇ ವೇಳೆ ಜೋಕೊವಿಕ್ ಕಾನೂನು ಹೋರಾಟಕ್ಕೂ ಮುಂದಾಗಿದ್ದರು. ಆಸ್ಟ್ರೇಲಿಯಾ ಅಧಿಕಾರಿಗಳ ಕ್ರಮದ ವಿರುದ್ಧ ಸವಾಲು ಹಾಕಿದ್ದರು. ಟೂರ್ನಿಯ ಆಯೋಜಕರು ತಮಗೆ ಡಿಸೆಂಬರ್ 30ರಂದು ಹಸಿರು ನಿಶಾನೆ ನೀಡಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದಿರುವುದಾಗಿ ತಿಳಿಸಿದ್ದರು.

ಆಸ್ಟ್ರೇಲಿಯನ್‌ ಓಪನ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂಬ ನಿರ್ಬಂಧವಿದೆ. ಆದರೆ ವಿಶ್ವದ ಒಂದನೇ ನಂಬರ್ ಆಟಗಾರ, ಸರ್ಬಿಯಾದ ನೊವಾಕ್ ಜೊಕೊವಿಚ್ ಲಸಿಕೆ ಹಾಕಿಸಿಕೊಳ್ಳಲು ಸಿದ್ಧ ಇರಲಿಲ್ಲ. ಟೂರ್ನಿಯಲ್ಲಿ ಆಡಲು ಅವರಿಗೆ ವೈದ್ಯಕೀಯ ತಂಡ ವಿನಾಯಿತಿ ನೀಡಿತ್ತು. ಆದರೆ ದೇಶಕ್ಕೆ ಕಾಲಿಡುತ್ತಿದ್ದಂತೆ ಅವರನ್ನು ವಶಕ್ಕೆ ಪಡೆದುಕೊಂಡಿದ್ದ ಅಧಿಕಾರಿಗಳು ವಿಸಾ ರದ್ದುಮಾಡಿ ಪಾರ್ಕ್‌ ಹೋಟೆಲ್‌ನಲ್ಲಿ ಇರಿಸಿದ್ದರು. ಈ ಹಿನ್ನೆಲೆಯಲ್ಲಿ ಜೊಕೊವಿಚ್ ನ್ಯಾಯಾಲಯದ ಮೊರೆ ಹೋಗಿದ್ದರು. ಇಂದು ಈ ಬಗ್ಗೆ ವಿಚಾರಣೆ ನಡೆಸಿ, ಜೊಕೊವಿಕ್‌ ಅವರನ್ನು ವಲಸೆ ಬಂಧನದಿಂದ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದೆ.

ವಿಶ್ವದ ನಂ.1 ಆಟಗಾರ ಹಾಗೂ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಯಲ್ಲಿ ದಾಖಲೆಯ 9 ಬಾರಿ ಟ್ರೋಫಿ ಗೆದ್ದಿರುವ ನೊವಾಕ್‌ಗೆ ಕೋವಿಡ್‌-19 ಲಸಿಕೆ ಪಡೆಯದೇ ಇದ್ದರೂ ವೈದ್ಯಕೀಯ ಕಾರಣ ಹಿನ್ನೆಲೆಯಲ್ಲಿ ಟೂರ್ನಿಗೆ ಪ್ರವೇಶ ಲಭ್ಯವಾಗಿತ್ತು. ಆದರೆ, ವೈದ್ಯಕೀಯ ಕಾರಣ ಕೊಟ್ಟು ಪಡೆಯಬೇಕಾದ ವೀಸಾ ತೆಗೆದುಕೊಳ್ಳದೇ ಇದ್ದ ಕಾರಣ ಈ ಗೊಂದಲಕ್ಕೆ ಸಿಲುಕಿದ್ದರು. ಆಸ್ಟ್ರೇಲಿಯಾದಲ್ಲಿ ಲಸಿಕೆಗಳಿಗೆ ಬಹಳ ಒತ್ತು ಕೊಡಲಾಗಿದೆ. ಅಲ್ಲಿನ ಬಹುತೇಕ ರಾಜ್ಯಗಳಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಬಹುತೇಕರು ಲಸಿಕೆ ಹಾಕಿಸಿಕೊಂಡಿದ್ದಾರೆ. ಅಂಥ ಆಸ್ಟ್ರೇಲಿಯಾ ದೇಶದಲ್ಲಿ ನಿಂತು ಲಸಿಕೆ ವಿರುದ್ಧ ಜೋಕೊವಿಚ್ ಮಾತನಾಡುತ್ತಿದ್ದಾರೆ ಎಂಬುದು ಅಲ್ಲಿನ ಸರ್ಕಾರದಲ್ಲಿರುವವರ ಆಕ್ರೋಶವಾಗಿದೆ.

Virat Kohli: ಕೋಚ್ ದ್ರಾವಿಡ್ ದಾಖಲೆಯನ್ನು ಪುಡಿ ಮಾಡಲು ಹೊರಟ ವಿರಾಟ್ ಕೊಹ್ಲಿ

India Playing XI: ಕ್ಲೈಮ್ಯಾಕ್ಸ್ ಕದನಕ್ಕೆ ಎರಡು ಪ್ರಮುಖ ಬದಲಾವಣೆ: ಭಾರತದ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ

ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ