ಬೆಂಗಳೂರಲ್ಲಿ ಹೆಚ್ಚು ಟಾರ್ಗೆಟ್ ಆಗ್ತಿದ್ದಾರೆ ಯುವಕರು, 19-39 ವರ್ಷದೊಳಗಿನವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗುತ್ತಿದೆ ಕೊರೊನಾ

ಬೆಂಗಳೂರಲ್ಲಿ ಯುವಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದೆ. ಬೆಂಗಳೂರಿನಲ್ಲಿ 20 ಸಾವಿರ ಯುವಕರಿಗೆ ಕೊರೊನಾ ಸೋಂಕು ತಗುಲಿದೆ. ಕಳೆದ ಐದು ದಿನದಲ್ಲಿ 36,90 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಈ‌ ಪೈಕಿ 19-39 ವರ್ಷದೊಳಗಿನ 20 ಸಾವಿರ ಜನ ಪತ್ತೆಯಾಗಿದ್ದಾರೆ.

ಬೆಂಗಳೂರಲ್ಲಿ ಹೆಚ್ಚು ಟಾರ್ಗೆಟ್ ಆಗ್ತಿದ್ದಾರೆ ಯುವಕರು, 19-39 ವರ್ಷದೊಳಗಿನವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗುತ್ತಿದೆ ಕೊರೊನಾ
ಸಾಂಕೇತಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Jan 10, 2022 | 11:43 AM

ಬೆಂಗಳೂರು: ಮಹಾಮಾರಿ ಕೊರೊನಾ ಬೆಂಗಳೂರಿನ ಜನರ ನಿದ್ದೆ ಕೆಡಿಸಿದೆ. ಮತ್ತೆ ಅದೇ ಹಳೇ ದಿನಗಳನ್ನು ನೆನಪಿಸುತ್ತಿದೆ. ಈ ಬಾರಿ ಕೊರೊನಾ ಹೆಚ್ಚಾಗಿ ಯುವಕರಲ್ಲಿ ಕಾಣಿಸಿಕೊಳ್ಳುತ್ತಿದೆ. ಬೆಂಗಳೂರಲ್ಲಿ ಯುವಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದೆ. ಬೆಂಗಳೂರಿನಲ್ಲಿ 20 ಸಾವಿರ ಯುವಕರಿಗೆ ಕೊರೊನಾ ಸೋಂಕು ತಗುಲಿದೆ. ಕಳೆದ ಐದು ದಿನದಲ್ಲಿ 36,90 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಈ‌ ಪೈಕಿ 19-39 ವರ್ಷದೊಳಗಿನ 20 ಸಾವಿರ ಜನ ಪತ್ತೆಯಾಗಿದ್ದಾರೆ. ಕಳೆದ 5 ದಿನದಲ್ಲಿ 8 ಸಾವಿರ ಯುವಕರಿಗೆ ಸೋಂಕು ದೃಢವಾಗಿದೆ. ನಿತ್ಯ ಸಾವಿರಕ್ಕೂ ಅಧಿಕ ಯುವಕರಿಗೆ ಕೊರೊನಾ ಸೋಂಕು ತಗುಲುತ್ತಿದೆ.

ನಿನ್ನೆ ಒಂದೇ ದಿನ 12,000 ಕೇಸ್ ಕರ್ನಾಟಕ ರಾಜ್ಯದಲ್ಲಿ ನಿನ್ನೆ 12,000 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಬೆಂಗಳೂರಿನಲ್ಲಿಯೇ 9,020 ಜನರಿಗೆ ಮಾರಿ ವಕ್ಕರಿಸಿದೆ. ಕೊರೊನಾ ಸೋಂಕಿಗೆ ರಾಜ್ಯದಲ್ಲಿ ನಿನ್ನೆ ನಾಲ್ವರು ಬಲಿಯಾಗಿದ್ದು, ಸಕ್ರಿಯ ಕೇಸ್ಗಳ ಸಂಖ್ಯೆಯೂ 49, 602ಕ್ಕೆ ಹೆಚ್ಚಿದೆ. ರಾಜ್ಯದ ಕೊವಿಡ್ ಪಾಸಿಟಿವಿಟಿ ದರ 6.33ಕ್ಕೆ ಏರಿಕೆ ಕಂಡಿದ್ರೆ, ಬೆಂಗಳೂರಲ್ಲಿ ಕೊವಿಡ್‌ ಪಾಸಿಟಿವಿಟಿ ದರ ಶೇಕಡಾ 10.53ಕ್ಕೆ ಬಂದುನಿಂತಿದೆ.

ಕಳೆದ 24 ಗಂಟೆಯಲ್ಲಿ 1,59,632 ಹೊಸ ಕೊವಿಡ್ ಕೇಸ್ ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1 ಲಕ್ಷದ59 ಸಾವಿರದ 632 ಹೊಸ ಕೊವಿಡ್ ಕೇಸ್ ಪತ್ತೆಯಾಗಿವೆ. 327 ಸೋಂಕಿತರು ಸಾವನ್ನಪ್ಪುವ ಮೂಲಕ, ಸೋಂಕಿನಿಂದ ಈವರೆಗೆ ಮೃತಪಟ್ಟವರ ಸಂಖ್ಯೆ 4 ಲಕ್ಷದ 83 ಸಾವಿರದ790ಕ್ಕೇರಿದೆ. ಇನ್ನು 24 ಗಂಟೆಯಲ್ಲಿ 40,863 ಕೊರೊನಾ ಸೋಂಕಿತರು ಗುಣಮುಖರಾಗಿದ್ದು, 5 ಲಕ್ಷದ90 ಸಾವಿರದ611ಕೊರೊನಾ ಸಕ್ರಿಯ ಪ್ರಕರಣಗಳು ಸದ್ಯ ದೇಶದಲ್ಲಿವೆ. ಆ ಮೂಲಕ ಕೊರೊನಾ ಪಾಸಿಟಿವಿಟಿ ದರವೂ ಶೇಕಡಾ 10.21ಕ್ಕೆ ಹೆಚ್ಚಳ ಕಂಡಿದೆ.

ಕಂಟೈನ್ಮೆಂಟ್ ಝೋನ್​ಗಳ ಸಂಖ್ಯೆ 382ಕ್ಕೆ ಏರಿಕೆ ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್​ಗಳ ಸಂಖ್ಯೆ 382ಕ್ಕೆ ಏರಿಕೆಯಾಗಿದೆ. ಮಹದೇವಪುರದಲ್ಲಿ ಬರೋಬ್ಬರಿ 113 ಕಂಟೈನ್ಮೆಂಟ್ ಝೋನ್​ಗಳು ಪತ್ತೆಯಾಗಿವೆ. ಬೊಮ್ಮನಹಳ್ಳಿಯಲ್ಲಿ 97 ಕಂಟೈನ್ಮೆಂಟ್ ಝೋನ್​ಗಳಿವೆ. ದಕ್ಷಿಣ ವಲಯದಲ್ಲಿ -43 ಪೂರ್ವ ವಲಯದಲ್ಲಿ -33 ಪಶ್ಚಿಮ ವಲಯದಲ್ಲಿ -33 ಯಲಹಂಕದಲ್ಲಿ -33 ದಾಸರಹಳ್ಳಿಯಲ್ಲಿ -6 ಆರ್ ಆರ್ ನಗರದಲ್ಲಿ-4

ಇನ್ನು 8 ವಲಯದಲ್ಲಿರುವ ಪಾಸಿಟಿವಿಟಿ ರೇಟ್ ಹಾಗೂ ಕೇಸ್ ಗಳ ಸಂಖ್ಯೆಯನ್ನ ನೋಡೊದಾದ್ರೆ ಮಹದೇವಪುರ- 898 ಕೇಸ್ -6.73% ಪಾಸಿಟಿವಿಟಿ ರೇಟ್ ಪೂರ್ವ ವಲಯ- 836 ಕೇಸ್ -6.72% ಪಾಸಿಟಿವಿಟಿ ರೇಟ್ ದಕ್ಷಿಣ- 738 ಕೇಸ್ – 6.37% ಪಾಸಿಟಿವಿಟಿ ರೇಟ್ ಪಶ್ಚಿಮ- 582 ಕೇಸ್ -5.07% ಪಾಸಿಟಿವಿಟಿ ರೇಟ್ ಆರ್ ಆರ್ ನಗರ- 311 ಕೇಸ್ -4.95 % ಪಾಸಿಟಿವಿಟಿ ರೇಟ್ ದಾಸರಹಳ್ಳಿ -81 ಕೇಸ್ -4.81% ಪಾಸಿಟಿವಿಟಿ ರೇಟ್ ಬೊಮ್ಮನಹಳ್ಳಿ- 558 ಕೇಸ್ -4.56% ಪಾಸಿಟಿವಿಟಿ ರೇಟ್ ಯಲಹಂಕ -288 ಕೇಸ್ -4.35%ಪಾಸಿಟಿವಿಟಿ ರೇಟ್

ಇದನ್ನೂ ಓದಿ: ಟಿವಿ ನೋಡಬೇಡ ಎಂದಿದ್ದಕ್ಕೆ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಯುವಕ

Published On - 11:32 am, Mon, 10 January 22

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ