ಬೆಂಗಳೂರು: ಬಿ.ಎಸ್. ಯಡಿಯೂರಪ್ಪ(BS Yediyurappa) ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ ವಿಚಾರದಿಂದ ರಾಜ್ಯ ಬಿಜೆಪಿಗೆ ರಿಲ್ಯಾಕ್ಸ್ ಆಗಿದೆ. 2023ರಲ್ಲಿ BS ಯಡಿಯೂರಪ್ಪ ಸ್ಪರ್ಧೆ ಬಗ್ಗೆ ರಾಜ್ಯ ಬಿಜೆಪಿಯ ನಾಯಕರು ಗೊಂದಲದಲ್ಲಿದ್ದರು. 2023ಕ್ಕೆ B.S.ಯಡಿಯೂರಪ್ಪ ಸ್ಪರ್ಧೆ ಮಾಡ್ತಾರೋ, ಇಲ್ವೋ? ವಿಜಯೇಂದ್ರ ಸ್ಪರ್ಧೆ ವರುಣಾದಿಂದಲೋ, ಶಿಕಾರಿಪುರದಿಂದಲೋ ಎಂಬ ಅನೇಕ ಗೊಂದಲಗಳಿದ್ದವು. ಸದ್ಯ ಈಗ ನಾಯಕರ ಗೊಂದಲಕ್ಕೆ ತೆರೆ ಬಿದ್ದಿದೆ.
ಯಡಿಯೂರಪ್ಪ ರಾಜಕೀಯ ನಡೆ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಈವರೆಗೆ ಹೈಕಮಾಂಡ್ ಯಾವುದೇ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಯಡಿಯೂರಪ್ಪ ವಿಚಾರ ನಮಗೆ ಬಿಡಿ ಎಂದಷ್ಟೇ ವರಿಷ್ಠರು ಹೇಳಿದ್ದರು. ಹೀಗಾಗಿ BSY ಘೋಷಣೆಯಿಂದ ರಾಜ್ಯ ನಾಯಕರಿಗೆ 2 ವಿಚಾರ ಸ್ಪಷ್ಟವಾಗಿದೆ. ಯಡಿಯೂರಪ್ಪ ಸ್ಪರ್ಧೆ ಮತ್ತು ವಿಜಯೇಂದ್ರ ಸ್ಪರ್ಧೆ ಎಲ್ಲಿಂದ ಎಂಬ ಬಗ್ಗೆ ರಾಜ್ಯ ನಾಯಕರಿಗೆ ಸ್ಪಷ್ಟತೆ ಸಿಕ್ಕಿದೆ.
ಈಗ ಬಿಜೆಪಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಿದ್ದು ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಶಿಕಾರಿಪುರದಿಂದಲೇ ವಿಜಯೇಂದ್ರ ಸ್ಫರ್ಧೆ ವಿಚಾರಕ್ಕೆ ಫೈನಲ್ ಟಚ್ ಸಿಗಲಿದೆ. ಒಂದು ವೇಳೆ ಶಿಕಾರಿಪುರದಿಂದ ಕಾರ್ಯಕರ್ತರಿಗೆ ಟಿಕೆಟ್ ಎಂಬ ನಿಲುವಿಗೆ ಹೈಕಮಾಂಡ್ ಬಂದಲ್ಲಿ ಮತ್ತೆ ಬೇರೆ ಕ್ಷೇತ್ರಕ್ಕೆ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆಗೆ ವಿಜಯೇಂದ್ರಗೆ ಬೀಳಲಿದೆ.
ವಿಜಯೇಂದ್ರಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟ ಬಿಎಸ್‌ವೈ
ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ (BS Yediyurappa) ಅವರು ಚುನಾವಣಾ ರಾಜಕೀಯದಿಂದ ನಿವೃತ್ತರಾಗಲು ( political retirement) ನಿರ್ಧರಿಸಿದ್ದಾರೆ. ಪುತ್ರ ವಿಜಯೇಂದ್ರಗೆ ಶಿಕಾರಿಪುರ ಕ್ಷೇತ್ರ (Shikaripura) ಬಿಟ್ಟುಕೊಡಲು ಸಹ ಮುಂದಾಗಿದ್ದಾರೆ. ಬಿಎಸ್‌ವೈ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲೆ ವಿಜಯೇಂದ್ರಗೆ ಪಕ್ಷದಲ್ಲಿ ಮಹತ್ವದ ಸ್ಥಾನಮಾನ ಸಿಕ್ಕಿಲ್ಲ. ಇದೆಲ್ಲವನ್ನೂ ಅಂದಾಜಿಸಿಯೇ ಬಿ.ಎಸ್.ಯಡಿಯೂರಪ್ಪ ಈ ತೀರ್ಮಾನ ಘೋಷಿಸಿದ್ದಾರೆ ಎನ್ನಲಾಗಿದೆ.
2018ರಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ವಿಜಯೇಂದ್ರ ಪ್ರಯತ್ನಿಸಿದ್ದರಾದರೂ ಕಡೇಕ್ಷಣದಲ್ಲಿ ಬಿಜೆಪಿ ಹೈಕಮಾಂಡ್ ಬ್ರೇಕ್ ಹಾಕಿತ್ತು. ವರಿಷ್ಠರು, ವಿಜಯೇಂದ್ರಗೆ ಕೇವಲ ಬಿಜೆಪಿ ಉಪಾಧ್ಯಕ್ಷ ಸ್ಥಾನ ನೀಡಿದ್ದರು! ಇದೀಗ ಬಿಎಸ್‌ವೈ ಕುಟುಂಬಸ್ಥರು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ! ಬಿಎಸ್‌ವೈ ಸಿಎಂ ಆಗಿದ್ದಾಗ ಉಪಚುನಾವಣೆಗಳಲ್ಲಿ ಮಹತ್ವದ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆಯಿದೆ!
Published On - 6:41 pm, Fri, 22 July 22