ಆರ್ಥಿಕತೆ ಹೆಚ್ಚಿಸಲು ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ; ಸಿಎಂ ಬೊಮ್ಮಾಯಿ ಅಭಿಪ್ರಾಯ

| Updated By: sandhya thejappa

Updated on: Feb 01, 2022 | 4:48 PM

ನದಿ ಜೋಡಣೆ ಬಗ್ಗೆ ಹೇಳಿದ್ದಾರೆ. ಡಿಪಿಆರ್ ಮಾಡುವಾಗ ರಾಜ್ಯದ ಪಾಲು ನಿಗದಿಪಡಿಸಲಿ. ಹೊಸ ಡಿಪಿಆರ್ನಲ್ಲಿ ರಾಜ್ಯದ ಪಾಲು ನಿಗದಿ ಮಾಡಲಿ. ಯೋಜನೆ ಜಾರಿಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಬಾರದು. ನಮ್ಮ ಪಾಲು ನಿರ್ಧಾರವಾಗುವವರೆಗೂ ಡಿಪಿಆರ್​ಗೆ ಒಪ್ಪಲ್ಲ.

ಆರ್ಥಿಕತೆ ಹೆಚ್ಚಿಸಲು ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ; ಸಿಎಂ ಬೊಮ್ಮಾಯಿ ಅಭಿಪ್ರಾಯ
ಸಿಎಂ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಇಂದು (ಫೆ.01) ಮಂಡನೆಯಾದ ಕೇಂದ್ರ ಬಜೆಟ್ (Budget) ಬಗ್ಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಪ್ರತಿಕ್ರಿಯೆ ನೀಡಿದ್ದಾರೆ. ಕೊವಿಡ್ ನೆರಳಿನಲ್ಲಿ ಮಂಡಿಸಿದ 3ನೇ ಬಜೆಟ್ ಇದು. ಆರ್ಥಿಕತೆ ಇನ್ನಷ್ಟು ಹೆಚ್ಚಿಸಲು ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ದೂರದೃಷ್ಟಿಯುಳ್ಳ ಬಜೆಟ್ ಮಂಡಿಸಲಾಗಿದೆ. ದೇಶದ ಆರ್ಥಿಕ ಬೆಳವಣಿಗೆಗೆ ಬಜೆಟ್ ಪೂರಕವಾಗಿದೆ. ರೈಲ್ವೆ, ಡಿಜಿಟಲ್ ಎಕಾನಮಿಗೆ ಹೆಚ್ಚು ಒತ್ತು ನೀಡಲಾಗಿದೆ. ಬರುವ ವರ್ಷ ಆರ್ಥಿಕ ಬೆಳವಣಿಗೆಗೆ ಆದ್ಯತೆ ನೀಡಲಾಗಿದೆ. ಸಾಮಾನ್ಯ ಜನರಿಗೆ ಮೂಲ ಸೌಲಭ್ಯ ಹೆಚ್ಚಿಸಲು ಆದ್ಯತೆ ನೀಡಿದ್ದಾರೆ ಅಂತ ತಿಳಿಸಿದರು.

ಜಲ ಜೀವನ್ ಮಿಷನ್‌ಗೆ ಹೆಚ್ಚಿನ ಹಣ ನೀಡಲಾಗಿದೆ. ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಗರಾಭಿವೃದ್ಧಿಗೆ ಹೊಸತನ ನೀಡಲು ಬಜೆಟ್‌ನಲ್ಲಿ ಒತ್ತು. ದೇಶವನ್ನು ಕೃಷಿ ಸ್ವಾಲಂಬನೆಗೆ ಗಮನ ಹರಿಸಲಾಗಿದೆ ಬಜೆಟ್‌ನಲ್ಲಿ ಆತ್ಮ ನಿರ್ಭರಕ್ಕೆ ಮತ್ತಷ್ಟು ಒತ್ತು ನೀಡಲಾಗಿದೆ. ರಾಜ್ಯದಲ್ಲಿ ಮೆಟ್ರೋಗೆ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆಯಿದೆ. ಪ್ರವಾಸೋದ್ಯಮ, ಮೂಲಸೌಲಭ್ಯ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆಗಳಿಗೆ ಅನುದಾನ ನೀಡಲಾಗಿದೆ. ಸಣ್ಣ ಕೈಗಾರಿಕೆಗಳಿಗೆ 5 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಇದರಿಂದಲೂ ನಮ್ಮ ರಾಜ್ಯಕ್ಕೆ ಅನುದಾನ ಸಿಗಲಿದೆ ಅಂತ ಸಿಎಂ ಬೊಮ್ಮಾಯಿ ಅಭಿಪ್ರಾಯಪಟ್ಟರು.

ನದಿ ಜೋಡಣೆ ಬಗ್ಗೆ ಹೇಳಿದ್ದಾರೆ. ಡಿಪಿಆರ್ ಮಾಡುವಾಗ ರಾಜ್ಯದ ಪಾಲು ನಿಗದಿಪಡಿಸಲಿ. ಹೊಸ ಡಿಪಿಆರ್​ನಲ್ಲಿ ರಾಜ್ಯದ ಪಾಲು ನಿಗದಿ ಮಾಡಲಿ. ಯೋಜನೆ ಜಾರಿಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಬಾರದು. ನಮ್ಮ ಪಾಲು ನಿರ್ಧಾರವಾಗುವವರೆಗೂ ಡಿಪಿಆರ್​ಗೆ ಒಪ್ಪಲ್ಲ. ಆರ್ಥಿಕ ವೃದ್ಧಿಯಾದರೆ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಮಾತನಾಡಿದ ಸಿಎಂ, ಒಟ್ಟಾರೆ ಕೇಂದ್ರ ಸರ್ಕಾರ ಪೂರಕ ಬಜೆಟ್ ಮಂಡಿಸಿದೆ ಎಂದು ಹೇಳಿದರು.

ಉದಾಹರಣೆಗೆ ಮೂಲಭೂತ ಸೌಕರ್ಯಗಳಿಗೆ ಬಹಳ ಹೂಡಿಕೆಯಾಗುತ್ತಿದೆ. ಮಲ್ಟಿ ಮಾಡೆಲ್ ಕನಕ್ಟಿವಿಟಿ ಫಾರ್ ಸ್ಟೇಟ್ಸ್​ನಲ್ಲಿ ಹೂಡಿಕೆ ಪ್ರಮಾಣ ಹೆಚ್ಚಾಗಿದೆ. ಬರುವ ವರ್ಷ ಆರ್ಥಿಕ ಬೆಳವಣಿಗೆಗೆ ಪೂರಕವಾದ ಬಜೆಟ್ ಮಂಡನೆ ಆಗುತ್ತದೆ. ನಗರದಲ್ಲಿ ಡಿಜಿಟಲೇಜಷನ್ ಮಾಡುವುದು ಟ್ರಾನ್ಸ್ಪೋರ್ಟ್ಗೆ ಹೆಚ್ಚು ಒತ್ತು ನೀಡಿದ್ದು, ನಗರ ಮತ್ತು ಗ್ರಾಮೀಣ ಭಾಗಕ್ಕೆ ಸಮನಾಗಿ ಒತ್ತು ನೀಡಿದೆ ಅಂತ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.

ಡಿಕೆಶಿ ಟೀಕೆಗೆ ನಾನು ಉತ್ತರ ನೀಡಿಲ್ಲ-ಸಿಎಂ ಬೊಮ್ಮಾಯಿ:
ಕೇಂದ್ರ ಬಜೆಟ್ ಬಗ್ಗೆ ಡಿಕೆ ಶಿವಕುಮಾರ್ ಟೀಕೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ನಾನು ಕೇಂದ್ರ ಬಜೆಟ್ ಬಗ್ಗೆ ಉತ್ತರ ಕೊಟ್ಟಿದ್ದೇನೆ. ಡಿಕೆಶಿ ಟೀಕೆಗೆ ನಾನು ಉತ್ತರ ನೀಡಿಲ್ಲ. ರಾಜ್ಯ ಬಜೆಟ್ ಬಗ್ಗೆ ಡಿಕೆ ಶಿವಕುಮಾರ್ ನಿರೀಕ್ಷೆ ಮಾಡಲಿ ಎಂದರು.

ಇದನ್ನೂ ಓದಿ

ತ್ಯಾವರೆಕೊಪ್ಪನಲ್ಲಿರುವ ಹುಲಿ ಮತ್ತು ಸಿಂಹ ಧಾಮದಲ್ಲಿ ಗಂಡು ಸಿಂಹದೊಂದಿಗೆ ಹೋರಾಡಿದ್ದ ಸಿಂಹಣಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆಯಿತು!

Budget 2022 ವರ್ಚುವಲ್‌ ಡಿಜಿಟಲ್‌ ಸ್ವತ್ತು, ಕ್ರಿಪ್ಟೊಕರೆನ್ಸಿಗಳ ಮೂಲಕ ಗಳಿಸುವ ಆದಾಯದ ಮೇಲೆ ಶೇ 30 ತೆರಿಗೆ: ಏನಿದು ಕ್ರಿಪ್ಟೊ ತೆರಿಗೆ?

Published On - 4:31 pm, Tue, 1 February 22