ಸಿದ್ದರಾಮಯ್ಯ-ಡಿಕೆಶಿ ನಡುವೆ ಸಿಎಂ ಕುರ್ಚಿ ಫೈಟ್​: ಸೋಶಿಯಲ್​ ಮೀಡಿಯಾದಲ್ಲಿ ಮೀಮ್ಸ್​ಗಳದ್ದೇ ಹವಾ!

ಕರ್ನಾಟಕದಲ್ಲಿ ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಫೈಟ್ ತಾರಕಕ್ಕೇರಿದೆ. ಇಬ್ಬರ ಬೆಂಬಲಿಗರು, ಸ್ವಾಮೀಜಿಗಳು ಮತ್ತು ಜಾತಿ ಸಂಘಟನೆಗಳು ಸಹ ತಮ್ಮ ನಾಯಕರ ಪರ ಧ್ವನಿ ಎತ್ತುತ್ತಿವೆ. ಈ ರಾಜಕೀಯ ತಿಕ್ಕಾಟ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮೀಮ್ಸ್ ರೂಪದಲ್ಲಿ ಹರಿದಾಡುತ್ತಿದೆ. ಒಂದಕ್ಕಿಂದ ಒಂದು ಭಿನ್ನ ವಿಡಿಯೋಗಳು ಕಾಣಸಿಗುತ್ತಿವೆ.

ಸಿದ್ದರಾಮಯ್ಯ-ಡಿಕೆಶಿ ನಡುವೆ ಸಿಎಂ ಕುರ್ಚಿ ಫೈಟ್​: ಸೋಶಿಯಲ್​ ಮೀಡಿಯಾದಲ್ಲಿ ಮೀಮ್ಸ್​ಗಳದ್ದೇ ಹವಾ!
ಸಿದ್ದರಾಮಯ್ಯ Vs ಡಿಕೆಶಿ

Updated on: Nov 28, 2025 | 6:59 PM

ಬೆಂಗಳೂರು, ನವೆಂಬರ್​​ 28: ಸಿಎಂ ಸ್ಥಾನದ ವಿಚಾರವಾಗಿ ರಾಜ್ಯ ಕಾಂಗ್ರೆಸ್​​ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್​ ನಡುವಿನ ತಿಕ್ಕಾಟ ತಾರಕಕ್ಕೇರಿದೆ. ಇಬ್ಬರು ನಾಯಕರ ಬೆಂಬಲಿಗರು ಸೇರಿ ಸ್ವಾಮೀಜಿಗಳೂ ಅಖಾಡಕ್ಕಿಳಿದಿದ್ದಾರೆ. ಜಾತಿವಾರು ಸಂಘ ಸಂಸ್ಥೆಗಳೂ ತಮ್ಮ ನಾಯಕರ ಪರ ಧ್ವನಿ ಎತ್ತುತ್ತಿವೆ. ಈ ಎಲ್ಲದರ ನಡುವೆ ರಾಜ್ಯ ಕಾಂಗ್ರೆಸ್​​ ನಾಯಕರ ನಡುವಿನ ಪಟ್ಟದ ಫೈಟ್​​ ಸಾಮಾಜಿಕ ಜಾಲತಾಣಗಳಲ್ಲಿ ಹಲ್ ​ಚಲ್​​ ಎಬ್ಬಿಸಿದೆ. ಈ ಕುರಿತು ನೂರಾರು ಮೀಮ್ಸ್​​ಗಗಳು ಹರಿದಾಡತೊಡಗಿವೆ. ಅಂತಹ ವಿಡಿಯೋಗಳ ಪೈಕಿ ಒಂದರಲ್ಲಿ ಈ ಕುರ್ಚಿ ಗುದ್ದಾಟವನ್ನು ಬಹಳ ವ್ಯಂಗ್ಯವಾಗಿ ಬಿಂಬಿಸಲಾಗಿದೆ.

ಮೀಮ್ಸ್​​ನಲ್ಲಿ ಏನಿದೆ?

ಅಣ್ಣಾ, ಎರಡೂವರೆ ವರ್ಷ ಮುಗಿದರೂ ಇವರು ನಿನಗೆ ಕುರ್ಚಿ ಬಿಡುವ ತರ ಕಾಣುತ್ತಿಲ್ಲ. ನಾನೇ ಹೋಗಿ ಆ ಸಿಎಂ ಕುರ್ಚಿಯನ್ನು ಎತ್ತುಕೊಂಡು ಬರುತ್ತೇನೆ ಎಂದು ಡಿ.ಕೆ. ಸುರೇಶ್​​ ಹೇಳುತ್ತಾರೆ. ಇದಕ್ಕೆ ಡಿ.ಕೆ. ಶಿವಕುಮಾರ್​​ ಕೂಡ ಆಯ್ತು ಎನ್ನುತ್ತಾರೆ. ಆದರೆ ಇವರ ನಡುವಿನ ಸಂಭಾಷಣೆಯನ್ನು ಕೇಳಿಸಿಕೊಳ್ಳುವ ಸಚಿವ ಜಮೀರ್​​ ಅಹ್ಮದ್​​ ಖಾನ್​​, ನಮ್ಮ ಸಿದ್ದರಾಮಯ್ಯ ಅವರ ಕುರ್ಚಿಗೆ ಕಣ್ಣು ಹಾಕ್ತೀರ ಎಂದು ತಮ್ಮಲ್ಲೇ ಹೇಳಿಕೊಳ್ಳುತ್ತಾರೆ. ಜೊತೆಗೆ ಸಿಎಂ ಕುರ್ಚಿಗೆ ಗಮ್​​ ಹಾಕಿ, ಈಗ ಹೇಗೆ ಕುರ್ಚಿ ಕಿತ್ಕೋತೀರಾ ನೋಡುತ್ತೇನೆ. ರಾಹುಲ್​​ ಸಾಬ್​​ ಬಂದರೂ ಕುರ್ಚಿ ಬಿಡಲ್ಲ ಎನ್ನುತ್ತಾರೆ. ಬಳಿಕ ಆ ಕುರ್ಚಿ ಮೇಲೆ ಬಂದು ಕುಳಿತುಕೊಳ್ಳುವ ಸಿದ್ದರಾಮಯ್ಯ, ಜಮೀರ್​ ಏನೋ ಅಂಟುಕೊಂಡ ರೀತಿ ಆಗುತ್ತಿದೆಯಲ್ಲ ಎನ್ನುತ್ತಾರೆ. ಇದಕ್ಕೆ ಉತ್ತರಿಸುವ ಜಮೀರ್​​, ಮುಖ್ಯಮಂತ್ರಿ ಕುರ್ಚಿ ಅಲ್ವಾ ಸರ್​​. ಅದಕ್ಕೂ ನಿಮ್ಮ ಬಿಟ್ಟಿರಲು ಆಗ್ತಿಲ್ಲ ಅನ್ನಿಸುತ್ತೆ ಎಂದು ಹೇಳುತ್ತಾರೆ. ಈ ವೇಳೆಗೆ ಅಲ್ಲಿಗೆ ಡಿಕೆ ಸಹೋದರರು ಬರಲಿದ್ದು, ಡಿಕೆಶಿ ಸಿದ್ದರಾಮಯ್ಯನವರೇ ಎನ್ನುತ್ತಾರೆ. ಆಗ ಬನ್ನಿ ಬನ್ನಿ ಎನ್ನುತ್ತಾ ಸಿದ್ದರಾಮಯ್ಯ ಕುರ್ಚಿಯಿಂದ ಎದ್ದೇಳುವಾಗ, ಕುರ್ಚಿಯೂ ಅವರ ಜೊತೆಗೇ ಬರುತ್ತೆ. ಈ ದೃಶ್ಯವನ್ನು ಕಂಡು ಡಿಕೆಶಿ ಸಹೋದರರು ಗಾಬರಿಯಾದರೆ, ಜಮೀರ್​​ ಮಾತ್ರ ಹಸನ್ಮುಖಿಯಾಗಿರುತ್ತಾರೆ.

ಇದನ್ನೂ ಓದಿ: ಕ್ಲೈಮ್ಯಾಕ್ಸ್ ಹಂತ ತಲುಪಿದ ಸಿಎಂ ಕುರ್ಚಿ ಕದನ: ಪದತ್ಯಾಗನಾ? ಪಟ್ಟಾಭಿಷೇಕನಾ?

ಇದೊಂದು ಮಾತ್ರವಲ್ಲದೆ ಇಂತಹ ಹಲವಾರು ಮೀಮ್ಸ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗ್ತಿವೆ. ಮತ್ತೊಂದು ವಿಡಿಯೋದಲ್ಲಿ ಅಧಿಕಾರಕ್ಕಾಗಿ ಕತ್ತಿ ಹಿಡಿದು ಹೋರಾಡುವ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರನ್ನ ರಾಹುಲ್​ ಗಾಂಧಿ ಸಮಾಧಾನ ಮಾಡುವ ರೀತಿಯಲ್ಲಿ ಬಿಂಬಿಸಲಾಗಿದೆ. ಸಿನಿಮಾ ದೃಶ್ಯವನ್ನು ಬಳಸಿಕೊಂಡು ಆ ಪಾತ್ರಗಳಿಗೆ ಇವರ ಹೆಸರನ್ನು ಉಲ್ಲೇಖಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:53 pm, Fri, 28 November 25