AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ದರ್ಶನ್ ಸಾವು: ಪೊಲೀಸರಿಂದಲೇ ಕೊಲೆ ಆರೋಪ, ಪ್ರಕರಣ ಸಿಐಡಿ ಹೆಗಲಿಗೆ

ದುಶ್ಚಟ ವಿಮುಕ್ತಿ ಕೇಂದ್ರದಲ್ಲಿ 23 ವರ್ಷದ ಯುವಕನ ಅಸಹಜ ಸಾವಿನ ಪ್ರಕರಣವು ಭಾರೀ ವಿವಾದ ಸೃಷ್ಟಿಸಿದೆ. ಪೊಲೀಸರು ಅಕ್ರಮವಾಗಿ ಬಂಧಿಸಿ ಹಲ್ಲೆ ನಡೆಸಿ, ಬಳಿಕ ರಿಯಾಬ್ ಸೆಂಟರ್​ಗೆ ಸೇರಿಸಿದ 10 ದಿನಗಳಲ್ಲಿ ಯುವಕ ಮೃತಪಟ್ಟಿದ್ದಾನೆ. ಇದು ಕೊಲೆ ಎಂದು ಪೋಷಕರು ಆರೋಪಿಸಿ. ಸದ್ಯ ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾಯಿಸಲಾಗಿದೆ.

ಬೆಂಗಳೂರಿನಲ್ಲಿ ದರ್ಶನ್ ಸಾವು: ಪೊಲೀಸರಿಂದಲೇ ಕೊಲೆ ಆರೋಪ, ಪ್ರಕರಣ ಸಿಐಡಿ ಹೆಗಲಿಗೆ
ಮೃತ ದರ್ಶನ್
ಗಂಗಾಧರ​ ಬ. ಸಾಬೋಜಿ
|

Updated on: Nov 28, 2025 | 6:22 PM

Share

ಬೆಂಗಳೂರು, ನವೆಂಬರ್​ 28: ಆತನ ವಯಸ್ಸು ಇನ್ನೂ 23. ಚಿಕ್ಕ ವಯಸ್ಸಿಗೆ ಕುಡಿತಕ್ಕೆ ದಾಸನಾಗಿದ್ದಲ್ಲದೇ ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಇತ್ತು. ಇಂತ ಯುವಕನನ್ನ (boy) ಪೊಲೀಸರು ಅಕ್ರಮವಾಗಿ ಬಂಧಿಸಿ ಮೂರು ದಿನ ಸ್ಟೇಷನ್​​ನಲ್ಲಿ ಇಟ್ಟಿದ್ದರು. ಬಳಿಕ ರಿಯಾಬ್ ಸೆಂಟರ್​ಗೆ ಸೇರಿಸಿದ್ದರು. ಆದರೆ ರಿಯಾಬ್ ಸೆಂಟರ್​ಗೆ ಸೇರಿದ ಹತ್ತು ದಿನದೊಳಗೆ ಆತನ ಪ್ರಾಣ (death) ಹೋಗಿದೆ. ಯುವಕನ ಈ ಸಾವು ಕೇವಲ ಸಾವಲ್ಲ, ಕೊಲೆ ಅಂತ ಪೋಷಕರು ಆರೋಪ ಮಾಡಿದ್ದು, ಪೊಲೀಸರ ಮೇಲೆ ಕೊಲೆ ಕೇಸ್ ದಾಖಲಾಗಿದೆ.

ಪೊಲೀಸರ ವಿರುದ್ಧವೇ ಕೊಲೆ ಕೇಸ್

ವಿವೇಕನಗರದ ಸೊಣ್ಣೆನಹಳ್ಳಿಯ ದರ್ಶನ್ ಎಂಬ 23 ವರ್ಷದ ಯುವಕನದ್ದು ಅಸಹಜ ಸಾವಲ್ಲ ಕೊಲೆ ಎಂಬ ಆರೋಪ ಪೊಲೀಸ್ ಇಲಾಖೆಯನ್ನ ದಿಗ್ರ್ಬಾಂತಿಗೊಳಿಸಿದೆ. ಇದಕ್ಕೆ ಕಾರಣ ಬೆಂಗಳೂರಿನ ಕೇಂದ್ರ ವಿಭಾಗದ ವಿವೇಕನಗರ ಪೊಲೀಸರ ವಿರುದ್ಧ ಕೊಲೆ ಕೇಸ್ ದಾಖಲಾಗಿರೋದು.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡ ತಡೆಗೆ ದಿಟ್ಟ ನಿರ್ಧಾರ; ಚೀಫ್ ಸೂಪರಿಂಟೆಂಡೆಂಟ್ ಹುದ್ದೆಗೆ IPS ಅಧಿಕಾರಿ

ನ.12ರಂದು ದರ್ಶನ್​​​ನನ್ನು ಅಕ್ರಮವಾಗಿ ಬಂಧಿಸಿದ್ದ ಪೊಲೀಸರು, ಆತನನ್ನ ಮೂರು ದಿನ ವಶದಲ್ಲಿಟ್ಟುಕೊಂಡು ಲಾಠಿ, ಪೈಪ್​ನಿಂದ ಹಲ್ಲೆ ಮಾಡಿದ್ದರಂತೆ. ಈ ಹಲ್ಲೆಯನ್ನು ಮರೆಮಾಚಲು ರಿಯಾಬ್ ಸೆಂಟರ್​ಗೆ ಸೇರಿಸಿದ್ದರು. ಆದರೆ ರಿಯಾಬ್​​ನವರು ಕೂಡ ಸರಿಯಾದ ಚಿಕಿತ್ಸೆ ನೀಡಿಲ್ಲ. ಹೀಗಾಗಿ 8 ದಿನದ ಬಳಿಕ ದರ್ಶನ್ ಸಾವನ್ನಪ್ಪಿದ್ದು, ಇದೊಂದು ಕೊಲೆ ಎಂದು ಆತನ ಪೋಷಕರು ಆರೋಪಿಸಿ ದೂರು ನೀಡಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವೇಕನಗರ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಪವನ್ ಸೇರಿದಂತೆ ನಾಲ್ಕು ಪೊಲೀಸರು ಮತ್ತು ಯೂನಿಟಿ ರಿಯಾಬ್ ಸೆಂಟರ್ ಮಾಲೀಕರ ವಿರುದ್ಧ ಕೊಲೆ ಮತ್ತು ಅಟ್ರಾಸಿಟಿ ಕೇಸ್ ದಾಖಲಾಗಿದೆ.

ಕಸ್ಟೋಡಿಯಲ್ ಡೆತ್ ಕೇಸ್ ಸಿಐಡಿಗೆ ವರ್ಗಾವಣೆ

ಸದ್ಯ ವಿವೇಕನಗರ ಪೊಲೀಸರ ಮೇಲೆ ದಾಖಲಾದ ಕಸ್ಟೋಡಿಯಲ್ ಡೆತ್ ಕೇಸ್ ಸಿಐಡಿಗೆ ವರ್ಗಾವಣೆ ಆಗಿದ್ದು, ತನಿಖೆ ಶುರುವಾಗಿದೆ. ಇತ್ತ ದರ್ಶನ್​ ಮರಣೋತ್ತರ ಪರೀಕ್ಷೆ ಮುಗಿಸಿ ಪೋಷಕರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಇನ್ನು ಘಟನೆ ಬಗ್ಗೆ ಕೇಂದ್ರ ವಿಭಾಗದ ಹಿರಿಯ ಅಧಿಕಾರಿಗಳು ಕೂಡ ಮಾಹಿತಿ ಪಡೆಯುತ್ತಿದ್ದಾರೆ. ದರ್ಶನ್​​​ ರಿಯಾಬ್ ಸೆಂಟರ್​ಗೆ ಸೇರಿಸಿದ 8 ದಿನಗಳ ಬಳಿಕ ಮೃತಪಟ್ಟಿರೋದ್ರಿಂದ ಆಂತರಿಕ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ ದರ್ಶನ್​​ ನಂಬಿ ಮದುವೆಯಾಗಿ ಒಂದು ಮಗುವಿಗೂ ಜನ್ಮ ನೀಡುರುವ ಆತನ ಪತ್ನಿ ಚಿಕ್ಕ ವಯಸ್ಸಿಗೆ ಕಣ್ಣೀರಲ್ಲೇ ಕೈತೊಳೆಯುವಂತಾಗಿದೆ.

ವರದಿ: ಪ್ರದೀಪ್ ಚಿಕ್ಕಾಟಿ, Tv9, ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕ್ಯಾಥೆಡ್ರಲ್ ಚರ್ಚ್​ನಲ್ಲಿ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗವಹಿಸಿದ ಮೋದಿ
ಕ್ಯಾಥೆಡ್ರಲ್ ಚರ್ಚ್​ನಲ್ಲಿ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗವಹಿಸಿದ ಮೋದಿ
‘10 ಬಾರಿ ನೋಡಿದ್ರೂ ಬೇಸರ ಬರಲ್ಲ’; ‘ಮಾರ್ಕ್’ ನೋಡಿ ಫ್ಯಾನ್ಸ್ ರಿಯಾಕ್ಷನ್
‘10 ಬಾರಿ ನೋಡಿದ್ರೂ ಬೇಸರ ಬರಲ್ಲ’; ‘ಮಾರ್ಕ್’ ನೋಡಿ ಫ್ಯಾನ್ಸ್ ರಿಯಾಕ್ಷನ್
ಡಿವೈಡರ್ ಹಾರಿ ಬಸ್​ಗೆ ಗುದ್ದಿದ ಲಾರಿ: ಪ್ರತ್ಯಕ್ಷದರ್ಶಿ ಹೇಳಿದ್ದೇನು ನೋಡಿ
ಡಿವೈಡರ್ ಹಾರಿ ಬಸ್​ಗೆ ಗುದ್ದಿದ ಲಾರಿ: ಪ್ರತ್ಯಕ್ಷದರ್ಶಿ ಹೇಳಿದ್ದೇನು ನೋಡಿ
ಟಿ20 ಪಂದ್ಯದಲ್ಲಿ 50 ಎಸೆತಗಳಲ್ಲಿ 61 ರನ್ ಬಾರಿಸಿದ RCB ದಾಂಡಿಗ..!
ಟಿ20 ಪಂದ್ಯದಲ್ಲಿ 50 ಎಸೆತಗಳಲ್ಲಿ 61 ರನ್ ಬಾರಿಸಿದ RCB ದಾಂಡಿಗ..!
ಗಿಲ್ಲಿಯ ‘ದೊಡ್ಡವ್ವ..’ ಹಾಡು ಹೇಳಿದ ಅಶ್ವಿನಿ ತಾಯಿ
ಗಿಲ್ಲಿಯ ‘ದೊಡ್ಡವ್ವ..’ ಹಾಡು ಹೇಳಿದ ಅಶ್ವಿನಿ ತಾಯಿ
ಚಿತ್ರದುರ್ಗ ಬಸ್ ದುರಂತ: 42 ಶಾಲಾ ಮಕ್ಕಳು ಪವಾಡಸದೃಶವಾಗಿ ಪಾರು
ಚಿತ್ರದುರ್ಗ ಬಸ್ ದುರಂತ: 42 ಶಾಲಾ ಮಕ್ಕಳು ಪವಾಡಸದೃಶವಾಗಿ ಪಾರು
ಬಸ್ ಹೊತ್ತಿ ಉರಿದ ಭಯಾನಕ ಘಟನೆ ಬಗ್ಗೆ ವಿವರಿಸಿದ ಕ್ಲೀನರ್
ಬಸ್ ಹೊತ್ತಿ ಉರಿದ ಭಯಾನಕ ಘಟನೆ ಬಗ್ಗೆ ವಿವರಿಸಿದ ಕ್ಲೀನರ್
ಬಿಗ್ ಬಾಸ್ ಮನೆಗೆ ಬಂತು ಗಿಲ್ಲಿ ಕುಟುಂಬ; ಮಾಡಿದ ಕಂಪ್ಲೇಂಟ್ ಏನು?
ಬಿಗ್ ಬಾಸ್ ಮನೆಗೆ ಬಂತು ಗಿಲ್ಲಿ ಕುಟುಂಬ; ಮಾಡಿದ ಕಂಪ್ಲೇಂಟ್ ಏನು?
ಎಲ್ಲೆಲ್ಲೂ ‘45’, ‘ಮಾರ್ಕ್’ ಸಿನಿಮಾ ಸಂಭ್ರಮ; ಅದ್ದೂರಿ ಸ್ವಾಗತ
ಎಲ್ಲೆಲ್ಲೂ ‘45’, ‘ಮಾರ್ಕ್’ ಸಿನಿಮಾ ಸಂಭ್ರಮ; ಅದ್ದೂರಿ ಸ್ವಾಗತ
ಚಿತ್ರದುರ್ಗ ಭೀಕರ ಬಸ್ ಅಪಘಾತ: ಬಸ್ ಚಾಲಕ, ನಿರ್ವಾಹಕ ಗ್ರೇಟ್ ಎಸ್ಕೇಪ್
ಚಿತ್ರದುರ್ಗ ಭೀಕರ ಬಸ್ ಅಪಘಾತ: ಬಸ್ ಚಾಲಕ, ನಿರ್ವಾಹಕ ಗ್ರೇಟ್ ಎಸ್ಕೇಪ್