ಪೇ ಸಿಎಂ ಅಭಿಯಾನ ವೈಯಕ್ತಿಕವಾಗಿ ಮಾಡಿರುವುದಲ್ಲ: ಪ್ರಿಯಾಂಕ್ ಖರ್ಗೆ

| Updated By: ರಶ್ಮಿ ಕಲ್ಲಕಟ್ಟ

Updated on: Sep 21, 2022 | 1:37 PM

ಸಾರ್ವಜನಿಕವಾಗಿ ಚರ್ಚೆ ಆಗಿರುವುದನ್ನ ಅಭಿಯಾನ ಮಾಡ್ತಿದ್ದೇವೆ. ಇದಕ್ಕೆ  ಉತ್ತರ ಕೊಡಬೇಕಾದವರು ಬಿಜೆಪಿಯವರು. ಪೋಸ್ಟರ್ ಹರಿದು ಟ್ವಿಟ್ಟರ್, ವೆಬ್‌ಸೈಟ್ ಹ್ಯಾಕ್ ಮಾಡಬಹುದು. ಆದರೆ ಚರ್ಚೆ ಮಾಡಲು...

ಪೇ ಸಿಎಂ ಅಭಿಯಾನ ವೈಯಕ್ತಿಕವಾಗಿ ಮಾಡಿರುವುದಲ್ಲ: ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
Follow us on

ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಆದರೆ ಈ ಬಿಜೆಪಿ (BJP) ಸರ್ಕಾರ ಯಾವುದರ ಬಗ್ಗೆ ಗಮನ ಹರಿಸಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ ನಡೆದಿಲ್ಲ, ಸುವ್ಯವಸ್ಥೆ ಇದೆ ಎಂದು ಹೇಳುತ್ತಿದ್ದಾರೆ. 20 ಲಕ್ಷ ಜನ ವಿವಿಧ ನೇಮಕಾತಿ ಹುದ್ದೆಗೆ ಪರೀಕ್ಷೆ ಬರೆದಿದ್ದಾರೆ. ಅಭ್ಯರ್ಥಿಗಳು ಫ್ರೀಡಂಪಾರ್ಕ್ನಲ್ಲಿ ಹೋರಾಟ ಮಾಡುತ್ತಿದ್ದಾರೆ. ಈವರೆಗೆ ಯಾವೊಬ್ಬ ಸಚಿವರು ಅಲ್ಲಿಗೆ ಹೋಗಿ ಸಮಸ್ಯೆ ಆಲಿಸಿಲ್ಲ. ಸದನದಲ್ಲಿ ಆಡಳಿತ ಪಕ್ಷ ವಿರೋಧ ಪಕ್ಷದ ರೀತಿ ನಡೆಯುತ್ತಿದೆ. ಇತಿಹಾಸದಲ್ಲಿ ಮೊದಲ ಭಾರಿಗೆ ಈ ರೀತಿ ವರ್ತನೆ ನಡೆಯುತ್ತಿರುವುದು ಎಂದು ವಿಧಾನಸೌಧದಲ್ಲಿ ಮಾತನಾಡಿದ ಖರ್ಗೆ ಹೇಳಿದ್ದಾರೆ.

ಪೇ ಸಿಎಂ ಅಭಿಯಾನ ವೈಯಕ್ತಿಕವಾಗಿ ಮಾಡಿರುವುದಲ್ಲ

ಪೇ ಸಿಎಂ ಅಭಿಯಾನ ವೈಯಕ್ತಿಕವಾಗಿ ಮಾಡಿರುವುದಲ್ಲ ಎಂದಿದ್ದಾರೆ ಪ್ರಿಯಾಂಕ್ ಖರ್ಗೆ. ಸಾರ್ವಜನಿಕವಾಗಿ ಚರ್ಚೆ ಆಗಿರುವುದನ್ನ ಅಭಿಯಾನ ಮಾಡ್ತಿದ್ದೇವೆ. ಇದಕ್ಕೆ  ಉತ್ತರ ಕೊಡಬೇಕಾದವರು ಬಿಜೆಪಿಯವರು. ಪೋಸ್ಟರ್ ಹರಿದು ಟ್ವಿಟ್ಟರ್, ವೆಬ್‌ಸೈಟ್ ಹ್ಯಾಕ್ ಮಾಡಬಹುದು. ಆದರೆ ಚರ್ಚೆ ಮಾಡಲು ಬಿಜೆಪಿಯವರು ಹೆದರುತ್ತಿದ್ದಾರೆ ಎಂದಿದ್ದಾರೆ ಖರ್ಗೆ.

ಪೇ ಸಿಎಂ ಎಂದು ಅಂಟಿಸಿದ್ದ ಪೋಸ್ಟರ್ ಗಳ ತೆರವು

ಕಾಂಗ್ರೆಸ್ ನವರು ಪೇ ಸಿಎಂ ಎಂದು ಅಂಟಿಸಿದ್ದ ಪೋಸ್ಟರ್ ಗಳನ್ನು ತೆರವು ಮಾಡಲಾಗಿದೆ. ಪೋಸ್ಟರ್ಗಳನ್ನು ಬಿಜೆಪಿ ಕಾರ್ಯಕರ್ತರು ತೆರವುಗೊಳಿಸಿದ್ದಾರೆ. ಬೆಂಗಳೂರು ನಗರದ ಕ್ವೀನ್ಸ್ ರೋಡ್, ಜಯಮಹಲ್
ಕಂಟೋನ್ಮೆಂಟ್ ಸುತ್ತಮುತ್ತ ‘ಸಿಎಂ ಮುಖಚಿತ್ರವುಳ್ಳ ಪೇಸಿಎಂ ಕ್ಯೂಆರ್ ಕೋಡ್ ಪೋಸ್ಟರ್ ಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಅಂಟಿಸಿದ್ದರು.

ಕಾಂಗ್ರೆಸ್ ಪಕ್ಷದ  ಪೇ ಸಿಎಂ ಅಭಿಯಾನ ಬಗ್ಗೆ ಕಮಿಷನರ್ ಪ್ರತಿಕ್ರಿಯೆ

ಪೇ ಸಿಎಂ ಎಂದು ಅಂಟಿಸಿದ್ದ ಪೋಸ್ಟರ್ಗಳ ಬಗ್ಗೆ ಬೆಂಗಳೂರಿನಲ್ಲಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಕೇಂದ್ರ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದೆ. ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗುತ್ತಿದೆ.ಪೋಸ್ಟರ್ ಅಂಟಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಘಟನೆ ಕುರಿತು ಸಿಸಿ ಕ್ಯಾಮರಾಗಳನ್ನ ಪರಿಶೀಲಿಸಲಾಗುತ್ತಿದೆ ಎಂದು ಕಮಿಷನರ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಪೇ ಸಿಎಂ ಅಭಿಯಾನಕ್ಕೆ ಬಿಜೆಪಿ ಕೌಂಟರ್?

ಕಾಂಗ್ರೆಸ್ನ ಮಾದರಿಯಲ್ಲೇ ಜಾಲತಾಣಗಳಲ್ಲಿ ಬಿಜೆಪಿ ಕಾಂಗ್ರೆಸ್ಗೆ ಸಿದ್ದರಾಮಯ್ಯ, ಡಿಕೆಶಿ ಬೇಡವಾಗಿದ್ದಾರೆಂದು ಪೋಸ್ಟ್ ಮಾಡಿದ್ದು, ಪೇ ಸಿಎಂ ಮಾದರಿಯಲ್ಲೇ ಕ್ಯೂ ಆರ್ ಕೋಡ್ ಸ್ಕ್ಯಾನ್ ಪೋಸ್ಟರ್ ಮಾಡಿದೆ.

ಕಾಂಗ್ರೆಸ್ ನ ‘ಪೇಸಿಎಂ’ ಅಭಿಯಾನಕ್ಕೆ ಸಿ.ಟಿ.ರವಿ ಆಕ್ರೋಶ

ಕಾಂಗ್ರೆಸ್ ನ ‘ಪೇಸಿಎಂ’ ಅಭಿಯಾನಕ್ಕೆ ಆಕ್ರೋಶ ವ್ಯಕ್ತ ಪಡಿಸಿದ ಸಿ.ಟಿ ರವಿ ದೆಹಲಿಯಲ್ಲಿ ದೆಹಲಿಯಲ್ಲಿ ಕಾಂಗ್ರೆಸ್‌ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ ಚುನಾವಣೆಗೆ ಟೂಲ್‌ ಕಿಟ್ ತಯಾರು ಮಾಡಿದೆ. ಇದು ಟೂಲ್ ಕಿಟ್ ಒಂದು ಭಾಗ. 40% ಸರ್ಕಾರ ಎಂದು ಮೂರ್ನಾಲ್ಕು ತಿಂಗಳಿನಿಂದ ಪ್ರಯತ್ನ ಮಾಡುತ್ತಿದೆ. ಈವರೆಗೂ ಸಾಕ್ಷಿ ಸಮೇತ ದೂರು ಕೊಡುವ ಪ್ರಯತ್ನ ಮಾಡಿಲ್ಲ. ಸುಳ್ಳನ್ನು ಸಾವಿರ ಸಲ ಹೇಳಿ ಸತ್ಯ ಮಾಡುತ್ತಿದ್ದಾರೆ. ಲೋಕಾಯುಕ್ತ ಈಗ ಓಪನ್ ಇದೆ ಹೋಗಿ ದೂರ ಕೊಡಲಿ. ಕಾಂಗ್ರೆಸ್ ಸಾಕಷ್ಟು ಹಗರಣ ಮುಚ್ಚಿ ಹಾಕಿದೆ. ನಾವು ಪಿಎಸ್‌ಐ ಹಗರಣ ಮುಚ್ಚಿ ಹಾಕಬಹುದಿತ್ತು. ಆದರೆ ನಾವು ಐಜಿಪಿಯಂತಹ ಹಿರಿಯ ಅಧಿಕಾರಯನ್ನು ಬಂಧಿಸಿದ್ದೇವೆ. ಹಗರಣ ಮುಚ್ಚಿದ ಕಾಂಗ್ರೆಸ್ ಬೇಕಾ, ಅಧಿಕಾರಿಯನ್ನೇ ಬಂಧಿಸಿದ ಬಿಜೆಪಿ ಬೇಕಾ ಜನರು ನಿರ್ಧರಿಸಲಿ. ಜನರು ಬಿಜೆಪಿ ಮೇಲೆ ವಿಶ್ವಾಸ ಇಡ್ತಾರೆ ಎನ್ನುವ ನಂಬಿಕೆ ಇದೆ. ದೇಶದ 73% ಜನರಿಗೆ ನಾವು ಬೇರೆ ಬೇರೆ ಯೋಜನೆಗಳ ಮೂಲಕ ಸಹಾಯ ಮಾಡಿದ್ದೇವೆ. ನಮ್ಮ ಯೋಜನೆಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗ್ತಿವಿ. ನಾವು ವಿರೋಧ ಪಕ್ಷವಾಗಿ ಫೇಲ್ ಆಗಿಲ್ಲ. ಹಗರಣ ನಡೆದಿಲ್ಲ ಎಂದು ಸರ್ಕಾರ ಸಮರ್ಥಿಸಿಕೊಂಡಿತ್ತು. ನಾವು ವಿಪಕ್ಷ ದಲ್ಲಿದ್ದ ಅವಧಿಯಲ್ಲೂ ವಕ್ಫ್ ಬೋರ್ಡ್ ಸೇರಿ ಹಲವು ತನಿಖೆಗಳು ನಡೆದಿವೆ. ಭ್ರಷ್ಟಾಚಾರರನ್ನು ಕಾಂಗ್ರೆಸ್ ರಕ್ಷಣೆ ಮಾಡಿತ್ತು.ವಾಚ್, ಹಾಸಿಗೆ ದಿಂಬು, ಶಿಕ್ಷಕರ ನೇಮಕ ಸೇರಿ ಹಲವು ಹಗರಣ ನಡೆದಿವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.