ರಾಜ್ಯದಲ್ಲಿರುವ 43 ಸಾವಿರ ಪೌರ ಕಾರ್ಮಿಕರ ಖಾಯಂ ನೇಮಕಾತಿಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗುವುದು : ಸಿಎಂ ಬೊಮ್ಮಾಯಿ ಭರವಸೆ

ರಾಜ್ಯದಲ್ಲಿ ಇರುವ ಒಟ್ಟು 43 ಸಾವಿರ ಪೌರ ಕಾರ್ಮಿಕರ ಖಾಯಂ ನೇಮಕಾತಿಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್​ ಮಾಡಿದ್ದಾರೆ.

ರಾಜ್ಯದಲ್ಲಿರುವ 43 ಸಾವಿರ ಪೌರ ಕಾರ್ಮಿಕರ ಖಾಯಂ ನೇಮಕಾತಿಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗುವುದು : ಸಿಎಂ ಬೊಮ್ಮಾಯಿ ಭರವಸೆ
ಸಿಎಂ ಬಸವರಾಜ ಬೊಮ್ಮಾಯಿ
Follow us
TV9 Web
| Updated By: ವಿವೇಕ ಬಿರಾದಾರ

Updated on:Sep 21, 2022 | 2:26 PM

ಬೆಂಗಳೂರು: “ರಾಜ್ಯದಲ್ಲಿ ಇರುವ ಒಟ್ಟು 43 ಸಾವಿರ ಪೌರ ಕಾರ್ಮಿಕರ (Pourakarmikas) ಖಾಯಂ ನೇಮಕಾತಿಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗುವುದು. I.P.D ಸಾಲಪ್ಪ ವರದಿ ಅನುಷ್ಠಾನಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಟ್ವೀಟ್​ ಮಾಡಿದ್ದಾರೆ. ಇದಕ್ಕೂ ಮುನ್ನ ಬೆಂಗಳೂರಿನ ಆರ್​. ಟಿ ನಗರದ ಸಿಎಂ ನಿವಾಸದ ಮುಂದೆ ಪೌರಕಾರ್ಮಿಕರು ಪ್ರತಿಭಟನೆ ಮಾಡಿದರು.

ಬೆಂಗಳೂರಿನಲ್ಲಿ 26 ಸಾವಿರ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ ಸರ್ಕಾರಕ್ಕೆ 8 ಸಾವಿರ ಕಾರ್ಮಿಕರನ್ನು ಖಾಯಂ ಮಾಡುವ ಅವಕಾಶವಿದೆ. ಆದರೆ ಸರ್ಕಾರ 1 ಸಾವಿರ ಪೌರಕಾರ್ಮಿಕರನ್ನ ಖಾಯಂ ಮಾಡಲಾಗಿದೆ. ಉಳಿದ 7 ಸಾವಿರ ಪೌರಕಾರ್ಮಿಕರ ಖಾಯಮಾತಿಗೆ ಒತ್ತಾಯ ಮಾಡಿದರು.

ಹಿನ್ನೆಲೆ

ಈ ಹಿಂದ ಜುಲೈ ತಿಂಗಳಲ್ಲಿ ವಿವಿಧ  ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಪೌರಕಾರ್ಮಿಕರು ರಾಜ್ಯದಲ್ಲಿ ಹಲವು ಕಡೆ ಪ್ರತಿಭಟನೆ ಮಾಡಿದ್ದರು. ಬೆಂಗಳೂರಿನಲ್ಲಿ ಫ್ರೀಡಂಪಾರ್ಕ್​ನಲ್ಲಿ ಕೂಡ ಅಹೋರಾತ್ರಿಯೂ ಧರಣಿ ನಡೆಸಿದ್ದು, ಲಿಖಿತ ರೂಪದ ಆದೇಶ ಪ್ರತಿ ಬಂದ ಬಳಿಕ ಧರಣಿ ಕೈಬಿಡುತ್ತೇವೆಂದು ಪ್ರತಿಭಟನಕಾರರು ಹೇಳಿದ್ದರು.

ಆಗ ಸಿಎಂ ಬಸವರಾಜ ಬೊಮ್ಮಾಯಿ, ಪೌರಕಾರ್ಮಿಕರ ಜೊತೆಗೆ ಎಲ್ಲಾ ಮಾತನಾಡಿದ್ದೇನೆ. ಸಹಾನುಭೂತಿಯಿಂದ ಮಾನವೀಯತೆಯಿಂದ ಕ್ರಮಕೈಗೊಂಡು ಹೊಸ ಕಾನೂನು ಮಾಡಬೇಕು ಎಂದು ಅಂದುಕೊಂಡಿದ್ದೇವೆ. 3 ತಿಂಗಳಲ್ಲಿ ಯಾವ ರೀತಿ ನೇಮಕಾತಿ ಮಾಡಬೇಕೆಂದು ಚರ್ಚೆ ಮಾಡುತ್ತೇವೆ. ಪೌರ ಕಾರ್ಮಿಕರು, ಅಧಿಕಾರಿಗಳ ಜಂಟಿ ಸಮಿತಿ ಮಾಡಿದ್ದೇವೆ. ಪೌರಕಾರ್ಮಿಕರ ಸಂರಕ್ಷಣೆ, ಹೆಲ್ತ್, ಶಿಕ್ಷಣದ ಬಗ್ಗೆ ಕಾನೂನು ಕಾನೂನನ್ನು ರಚನೆ ಮಾಡಬೇಕು. ಮುಂದಿನ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪ ಮಾಡುತ್ತೇನೆ ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 2:24 pm, Wed, 21 September 22