ಬೆಂಗಳೂರು: ಕರ್ನಾಟಕದಲ್ಲಿ ಸೋಮವಾರ (ಜ.17) 27,156 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 14 ಜನರು ಸಾವನ್ನಪ್ಪಿದ್ದಾರೆ, 7827 ಜನರು ಸೋಂಕಿನಿಂದ ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 27,156 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ಪ್ರಮಾಣ ಶೇ 12.45 ಮತ್ತು ಸೋಂಕಿತರ ಸಾವಿನ ಸರಾಸರಿ ಶೇ 0.05 ಇದೆ. ರಾಜ್ಯದಲ್ಲಿ ಈವರೆಗೆ 32,47,243 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 29,91,472 ಜನರು ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 38,445 ಜನರು ಸಾವನ್ನಪ್ಪಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಎಂದಿನಂತೆ ಗರಿಷ್ಠ ಪ್ರಮಾಣದ ಸೋಂಕಿತರ ಸಂಖ್ಯೆ ವರದಿಯಾಗಿದೆ. ನಗರದ 15,947 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಐವರು ಮೃತಪಟ್ಟಿದ್ದಾರೆ, 4888 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಪ್ರಸ್ತುತ 1,57,254 ಸಕ್ರಿಯ ಪ್ರಕರಣಗಳಿದ್ದು ಈವರೆಗೆ ಒಟ್ಟು 16,458 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈವರೆಗೆ ಒಟ್ಟು 14,32,754 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,59,041 ಜನರು ಚೇತರಿಸಿಕೊಂಡಿದ್ದಾರೆ.
ಇಂದಿನ 17/01/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/spgeOcG8nZ@CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/LXHC80MRrn
— K’taka Health Dept (@DHFWKA) January 17, 2022
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬಾಗಲಕೋಟೆ 82, ಬಳ್ಳಾರಿ 560, ಬೆಳಗಾವಿ 294, ಬೆಂಗಳೂರು ಗ್ರಾಮಾಂತರ 538, ಬೆಂಗಳೂರು ನಗರ 15,947, ಬೀದರ್ 75, ಚಾಮರಾಜನಗರ 101, ಚಿಕ್ಕಬಳ್ಳಾಪುರ 209, ಚಿಕ್ಕಮಗಳೂರು 236, ಚಿತ್ರದುರ್ಗ 178, ದಕ್ಷಿನ ಕನ್ನಡ 490, ದಾವಣಗೆರೆ 121, ಧಾರವಾಡ 784, ಗದಗ 71, ಹಾಸನ 1050, ಹಾವೇರಿ 27, ಕಲಬುರಗಿ 479, ಕೊಡಗು 137, ಕೋಲಾರ 463, ಕೊಪ್ಪಳ 89, ಮಮಡ್ಯ 917, ಮೈಸೂರು 1770, ರಾಯಚೂರು 140, ರಾಮನಗರ 96, ಶಿವಮೊಗ್ಗ 364, ತುಮಕೂರು 1147, ಉಡುಪಿ 442, ಉತ್ತರ ಕನ್ನಡ 203, ವಿಜಯಪುರ 128, ಯಾದಗಿರಿ 18.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು?
ಬೆಂಗಳೂರು ನಗರ 5, ದಕ್ಷಿಣ ಕನ್ನಡ 3, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಧಾರವಾಡ, ಕಲಬುರಗಿ, ರಾಮನಗರ, ತುಮಕೂರು ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಸಚಿವರ ನಡುವೆ ಗೊಂದಲವಿಲ್ಲ, ಮಕ್ಕಳ ಬಗ್ಗೆ ತೀವ್ರ ನಿಗಾ: ಆರೋಗ್ಯ ಸಚಿವ ಸುಧಾಕರ್