ಬೆಂಗಳೂರು: ಕರ್ನಾಟಕದಲ್ಲಿ ಗುರುವಾರ (ಫೆ.3) 16,436 ಮಂದಿಯಲ್ಲಿ ಕೊರೊನಾ ಸೋಂಕು (Coronavirus) ದೃಢಪಟ್ಟಿದ್ದು, 60 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 1,48,800 ಸಕ್ರಿಯ (Covid Active Cases) ಪ್ರಕರಣಗಳಿದ್ದು, ಪಾಸಿಟಿವಿಟಿ ಪ್ರಮಾಣ ಶೇ 11.31 ಇದ್ದು, ಸೋಂಕಿನಿಂದ ಸಾವನ್ನಪ್ಪುವವರ ಸರಾಸರಿ ಶೇ 0.36 ಇದೆ. ಇಂದು ಒಟ್ಟು 44,819 ಜನರು ಸೋಂಕಿನಿಂದ ಚೇತರಿಸಿಕೊಂಡು, ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 38,60,774 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 36,72,744 ಮಂದಿ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 39,197 ಜನರು ಸಾವನ್ನಪ್ಪಿದ್ದಾರೆ.
ಬೆಂಗಳೂರು ನಗರದಲ್ಲಿ ಇಂದು 6640 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 14 ಜನರು ಸಾವನ್ನಪ್ಪಿದ್ದಾರೆ. ನಗರದಲ್ಲಿ ಪ್ರಸ್ತುತ 71,525 ಸಕ್ರಿಯ ಪ್ರಕರಣಗಳಿವೆ. ನಗರದಲ್ಲಿ ಈವರೆಗೆ ಒಟ್ಟು 17,43,065 ಜನರಲ್ಲಿ ಸೋಂಕು ದೃಢಪಟ್ಟಿದ್ದು, 16,54,910 ಜನರು ಸಾವನ್ನಪ್ಪಿದ್ದಾರೆ. ಈವರೆಗೆ ಒಟ್ಟು 16,629 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ 6640, ಬಾಗಲಕೋಟೆ 287, ಬಳ್ಳಾರಿ 348, ಬೆಳಗಾವಿ 1508, ಬೆಂಗಳೂರು ಗ್ರಾಮಾಂತರ 344, ಬೀದರ್ 115, ಚಾಮರಾಜನಗರ 221, ಚಿಕ್ಕಬಳ್ಳಾಪುರ 154, ಚಿಕ್ಕಮಗಳೂರು 132, ಚಿತ್ರದುರ್ಗ 241, ದಕ್ಷಿಣ ಕನ್ನಡ 317, ದಾವಣಗೆರೆ 157, ಧಾರವಾಡ 535, ಗದಗ 109, ಹಾಸನ 470, ಹಾವೇರಿ 203, ಕಲಬುರ್ಗಿ 243, ಕೊಡಗು 478, ಕೋಲಾರ 181, ಕೊಪ್ಪಳ 178, ಮಂಡ್ಯ 345, ರಾಯಚೂರು 137, ರಾಮನಗರ 65, ಶಿವಮೊಗ್ಗ 701, ತುಮಕೂರು 572, ಉಡುಪಿ 309, ಉತ್ತರ ಕನ್ನಡ 567, ವಿಜಯಪುರ 124, ಯಾದಗಿರಿ 49.
ಇಂದಿನ 03/02/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/wa8oXcdlwo @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/3ts8djAeqg
— K’taka Health Dept (@DHFWKA) February 3, 2022
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು?
ಬೆಂಗಳೂರು ನಗರ 14, ದಕ್ಷಿಣ ಕನ್ನಡ, ಮಂಡ್ಯ, ಮೈಸೂರು 5, ಬೆಳಗಾವಿ, ಚಿಕ್ಕಬಳ್ಳಾಪುರ, ಹಾವೇರಿ 3, ಚಾಮರಾಜನಗರ, ಕಲಬುರ್ಗಿ, ಶಿವಮೊಗ್ಗ, ತುಮಕೂರು, ಉಡುಪಿ, ಉತ್ತರ ಕನ್ನಡ, ಯಾದಗಿರಿ 2, ದಾವಣಗೆರೆ, ಧಾರವಾಡ, ಗದಗ, ಬಳ್ಳಾರಿ, ಚಿಕ್ಕಮಗಳೂರು, ಕೊಡಗು, ರಾಯಚೂರು, ವಿಜಯಪುರ 1.
ಇದನ್ನೂ ಓದಿ: Axar Patel Covid Positive: ಅಕ್ಷರ್ ಪಟೇಲ್ಗೆ ಕೊರೊನಾ ದೃಢ: ಟೀಮ್ ಇಂಡಿಯಾದಲ್ಲಿ ಹೆಚ್ಚಿದ ಆತಂಕ
ಇದನ್ನೂ ಓದಿ: ಕೊವಿಡ್ ವೈರಸ್ ಅಂತ್ಯ ಯಾವಾಗ? ಒಮಿಕ್ರಾನ್ ಕೊನೆಯ ರೂಪಾಂತರಿಯಾ?; ತಜ್ಞರ ಅಭಿಪ್ರಾಯ ಇಲ್ಲಿದೆ