Karnataka Covid 19 Update: ರಾಜ್ಯದಲ್ಲಿ ಹೊಸದಾಗಿ 41,400 ಜನರಿಗೆ ಕೊರೊನಾ, 52 ಸಾವು

| Updated By: ಆಯೇಷಾ ಬಾನು

Updated on: Jan 25, 2022 | 7:13 PM

ರಾಜ್ಯದಲ್ಲಿ ಇಂದು 24 ಗಂಟೆಯಲ್ಲಿ 41,400 ಜನರಿಗೆ ಕೊರೊನಾ ತಗುಲಿದೆ. ಹಾಗೂ ಕೊರೊನಾ ಸೋಂಕಿಗೆ 52 ಜನರು ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ 24 ಗಂಟೆಯಲ್ಲಿ 19,105 ಜನರಿಗೆ ಸೋಂಕು ತಗುಲಿದ್ದು ಇಂದು ಕೊರೊನಾದಿಂದ 19 ಜನರು ಮೃತಪಟ್ಟಿದ್ದಾರೆ.

Karnataka Covid 19 Update: ರಾಜ್ಯದಲ್ಲಿ ಹೊಸದಾಗಿ 41,400 ಜನರಿಗೆ ಕೊರೊನಾ, 52 ಸಾವು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸೋಂಕಿನ ಆರ್ಭಟ ಮುಂದುವರೆದಿದೆ. ರಾಜ್ಯದಲ್ಲಿ 24 ಗಂಟೆಯಲ್ಲಿ 41,400 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿಗೆ 52 ಜನರು ಬಲಿಯಾಗಿದ್ದಾರೆ. ಈ ಬಗ್ಗೆ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಟಿಸಿದೆ.

ರಾಜ್ಯದಲ್ಲಿ ಇಂದು 24 ಗಂಟೆಯಲ್ಲಿ 41,400 ಜನರಿಗೆ ಕೊರೊನಾ ತಗುಲಿದೆ. ಹಾಗೂ ಕೊರೊನಾ ಸೋಂಕಿಗೆ 52 ಜನರು ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ 24 ಗಂಟೆಯಲ್ಲಿ 19,105 ಜನರಿಗೆ ಸೋಂಕು ತಗುಲಿದ್ದು ಇಂದು ಕೊರೊನಾದಿಂದ 19 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾ ಆ್ಯಕ್ಟಿವ್ ಕೇಸ್ ಸಂಖ್ಯೆ 3,50,742 ಇದೆ. ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇಕಡಾ 26.70 ಇದೆ ಎಂದು ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಜ.19 ರಂದು 30,540 ಸೋಂಕಿತರು ಪತ್ತೆಯಾಗಿದ್ರೆ, ಜ.20 ರಂದು 30,540 ಕೇಸ್ ದೃಢಪಟ್ಟಿದ್ವು, ಜ.21 ರಂದು ದಿಢೀರ್ ಇಳಿಕೆ ಕಂಡು 17,266 ಹೊಸ ಪ್ರಕರಣಗಳ ಕಂಡುಬಂದಿದ್ವು, ಜ.22ರಂದು ಮತ್ತೆ ಏರಿಕೆ ಕಂಡು 26,299 ಸೋಂಕಿತರು ಪತ್ತೆಯಾಗಿದ್ರು. ಜ.23 ರಂದು 21,569 ಕೇಸ್ ಪತ್ತೆಯಾದ್ವು. ಜ.24 17,000 ಕೇಸ್ ಮಾತ್ರ ದೃಡಪಟ್ಟಿದ್ವು ಸದ್ಯ ಇಂದು ಅಂದ್ರೆ ಜ.25ರಂದು 19,105 ಜನರಿಗೆ ಸೋಂಕು ತಗುಲಿದೆ. ಇನ್ನೂ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಸಹ ಶೇ. 0.03 ಇದೆ. ಇತ್ತ ಬಿಬಿಎಂಪಿ ಕೂಡಾ ಕೋವಿಡ್ ಕೇರ್ ಸೆಂಟರ್ಗಳನ್ನ ಕ್ಲೋಸ್ ಮಾಡ್ತಿದೆಯಂತೆ.

ಇದನ್ನೂ ಓದಿ: Corona 3rd Wave: ರಾಜ್ಯದಲ್ಲಿ ಕೊರೊನಾ 3ನೇ ಅಲೆ ಆತಂಕ; ಮೈಸೂರು, ಕೋಲಾರದಲ್ಲಿ ಸಕಲ ಸಿದ್ಧತೆ

ಮೆದುಳಿನ ಆರೋಗ್ಯ ಇಡೀ ದೇಹದ ಒಟ್ಟು ಆರೋಗ್ಯ ಕಾಪಾಡಲು ಅಗತ್ಯವಾಗಿದೆ: ಸಚಿವ ಕೆ ಸುಧಾಕರ್