ಬೆಂಗಳೂರು: ಮದುವೆಯಾದ ಒಂದೇ ವರ್ಷಕ್ಕೆ ಗೃಹಿಣಿ ರಮ್ಯಾ(19)ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನೇಕಲ್ ತಾಲೂಕಿನ ಮರಸೂರು ಗ್ರಾಮದ ಬಳಿ ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. 1 ವರ್ಷದ ಹಿಂದೆ ಮರಸೂರು ಗ್ರಾಮದ ಅಂಜಿ ಜೊತೆ ರಮ್ಯಾ ವಿವಾಹ ಆಗಿತ್ತು. ರಾತ್ರಿ ಇಬ್ಬರ ನಡುವೆ ಜಗಳ ನಡೆದಿತ್ತು. ರಾತ್ರಿ 11 ಗಂಟೆಯಲ್ಲಿ ಮನೆಯಿಂದ ಹೊರ ನಡೆದಿದ್ದ ರಮ್ಯಾ ಮನೆಗೆ ಹಿಂತಿರುಗಲಿಲ್ಲ. ಈ ಹಿನ್ನೆಲೆ ಹುಟುಕಾಟ ನಡೆಸಿದಾಗ ಸಂಜೆ ರೈಲು ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ ಬೈಯ್ಯಪ್ಪನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಸ್ ಬೈಕ್ ನಡುವೆ ಡಿಕ್ಕಿ ಸವಾರರು ಸಾವು
ಕಲಬುರಗಿ: ತಾಲೂಕಿನ ತಾವರಗೇರಾ ಗ್ರಾಮದ ಬಳಿ ಸರ್ಕಾರಿ ಬಸ್, ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿದ್ದು ತೆಲಂಗಾಣದ ರಂಗಾರೆಡ್ಡಿ ಮೂಲದ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
150 ಕೆ.ಜಿ ಗೋಮಾಂಸ ವಶ
ಅಕ್ರಮವಾಗಿ ಓಮಿನಿಯಲ್ಲಿ 150 ಕೆ.ಜಿ ಗೋಮಾಂಸ ಸಾಗಾಟ ಮಾಡುತಿದ್ದದನ್ನು ಪೊಲೀಸರು ಪತ್ತೆ ಹಚ್ಚಿದ್ದು ಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಗೇರುಸೊಪ್ಪ ಕಡೆಯಿಂದ ಹೊನ್ನಾವರ ಕಡೆಗೆ ಸಾಗಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ₹27,000 ಮೌಲ್ಯದ ಸುಮಾರು 150 ಕೆ.ಜಿ ಗೋಮಾಂಸ ಹಾಗೂ ವಾಹನ ವಶಕ್ಕೆ ಪಡೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕುಳಕೋಡ ಕ್ರಾಸ್ ಬಳಿ ಘಟನೆ ನಡೆದಿದೆ. ಪೊಲೀಸರು ದಾಳಿ ನಡೆಸುತ್ತಿದ್ದಂತೆ ಆರೋಪಿ ಚಾಲಕ ಪರಾರಿಯಾಗಿದ್ದಾನೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರಿನಲ್ಲಿ ಹೆಚ್ಚಿದ ಮನೆಗಳ್ಳರ ಹಾವಳಿ
ತುಮಕೂರು: ನಗರದ ಸಿದ್ದರಾಮೇಶ್ವರ ಬಡಾವಣೆಯ 7 ಮನೆಯಲ್ಲಿ ಸರಣಿ ಮನೆಗಳ್ಳತನ ನಡೆದಿದೆ. ನಿನ್ನೆ ಮಧ್ಯರಾತ್ರಿ ಮನೆಗಳಿಗೆ ನುಗ್ಗಿ, 5 ಲಕ್ಷ ನಗದು, ಸುಮಾರು 150 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.