ಡಾಕ್ಟರ್ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಸೀಟ್ ಮರು ಹಂಚಿಕೆಗೆ ಕಾಲಾವಕಾಶ ಹೇಳಿ ಸುಪ್ರೀಂಕೋರ್ಟ್ ಮೊರೆ ಹೋದ ಸರ್ಕಾರ
ಡಾಕ್ಟರ್ ಕನಸು ಕಾಣುತ್ತೀರೊ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸರ್ಕಾರದಿಂದ ಸುವರ್ಣ ಅವಕಾಶ. MBBS ಓದಬೇಕು ಅಂತೀರೊ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದಾಗಿದೆ. ರಾಜ್ಯದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಉಳಿದ ಸೀಟ್ ಹಂಚಿಕೆಗೆ ಎರಡು ವಾರಗಳ ಕಾಲ ಕಾಲಾವಕಾಶ ನೀಡುವಂತೆ ಸರ್ಕಾರ ಸುಪ್ರೀಂಕೋರ್ಟ್ ಗೆ ಮನವಿ ಮಾಡಿದೆ.
ಬೆಂಗಳೂರು, ಅ.24: ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ರಾಜ್ಯದಲ್ಲಿ ಸರ್ಕಾರಿ ಹಾಗೂ ಖಾಸಗಿ ಮೆಡಿಕಲ್ ಸೀಟ್ ಗಳನ್ನ ಈ ವರ್ಷ ಹಂಚಿಕೆ ಮಾಡಿದೆ (Medical Seat). ಈ ವರ್ಷ ಎಲ್ಲವೂ ಡಿಜಿಟಲ್ ಸೀಟ್ ಹಂಚಿಕೆಯಾಗಿರೋದರಿಂದ ಯಾವುದೇ ಸೀಟ್ ಬ್ಲಾಕಿಂಗ್ ಗೋಲ್ ಮಾಲ್ ಗೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಸದ್ಯ ಸೀಟ್ ಹಂಚಿಕೆ ಪ್ರಕ್ರಿಯೇ ಮುಗಿದ ಬಳಿಕವು ರಾಜ್ಯದಲ್ಲಿ 146 ವೈದ್ಯಕೀಯ ಸೀಟ್ ಉಳಿದುಕೊಂಡಿದೆ. ಹೀಗಾಗಿ ಈ ಸೀಟ್ ಅನಾವಶ್ಯಕವಾಗಿ ಹಾಳಾಗದೆ ಇರಲಿ, ರಾಜ್ಯದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಉಳಿದ ಸೀಟ್ ಹಂಚಿಕೆಗೆ ಎರಡು ವಾರಗಳ ಕಾಲ ಕಾಲಾವಕಾಶ ನೀಡುವಂತೆ ಸರ್ಕಾರ (Karnataka Government) ಸುಪ್ರೀಂಕೋರ್ಟ್ ಗೆ (Supreme Court) ಮನವಿ ಮಾಡಿದೆ.
ರಾಜ್ಯದ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸು ಈಡೇರಿಸಲು ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು ಈ ವರ್ಷ ರಾಜ್ಯದಲ್ಲಿ ಸೀಟ್ ಬ್ಲಾಕಿಂಗ್ ಕಳ್ಳಾಟಕ್ಕೆ ಬ್ರೇಕ್ ಬೀದಿರೊ ಹಿನ್ನಲೆ ರಾಜ್ಯದಲ್ಲಿ ಸದ್ಯ ಸೀಟ್ ಹಂಚಿಕೆ ಕೌನ್ಸಿಲಿಂಗ್ ಪ್ರಕ್ರಿಯೇ ಬಳಿಕವೂ ನೂರಾರು ಸೀಟ್ ಉಳಿದುಕೊಂಡಿದೆ. 140ಕ್ಕೂ ಹೆಚ್ಚು ಮೆಡಿಕಲ್ ಸೀಟ್ ಬಾಕಿ ಉಳಿದುಕೊಂಡಿವೆ. ಈ ಸೀಟ್ ಗಳ ಮರು ಹಂಚಿಕೆಗೆ ಈಗ ಅವಧಿ ಮುಗಿದಿರುವುದರಿಂದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಉಳಿದ ಮೆಡಿಕಲ್ ಸೀಟ್ ಮರು ಹಂಚಿಕೆಗೆ ಅವಕಾಶ ನೀಡುವಂತೆ ಕೋರ್ಟ್ ಮೊರೆ ಹೋಗಿದೆ. ಎರಡು ವಾರಗಳ ಕಾಲ ಸೀಟ್ ಮರು ಹಂಚಿಕೆಗೆ ಅವಕಾಶ ನೀಡುವಂತೆ ಮನವಿ ಮಾಡಿದೆ. ಬಾಕಿ ಉಳಿದ ಸೀಟ್ ವ್ಯರ್ಥ ಆಗದಂತೆ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದೆ.
ಇದನ್ನೂ ಓದಿ: ನಗರದಲ್ಲಿ ಮುಂದುವರೆದ ಬಿಬಿಎಂಪಿ ತಪಾಸಣೆ: 10 ರೆಸ್ಟೋರೆಂಟ್ ಬಂದ್
ಇನ್ನು ಈ ಬಗ್ಗೆ ಕೋರ್ಟ್ ಅನುಮತಿ ಸಿಕ್ಕರೆ ಮಾತ್ರ ಸೀಟ್ ಮರು ಹಂಚಿಕೆಗೆ ಅವಕಾಶ ಸಿಗಲಿದೆ. ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ರೆ ರಾಜ್ಯದ ವಿದ್ಯಾರ್ಥಿಗಳಿಗೆ ಬಂಪರ್ ಆಫರ್ ಸಿಗಲಿದೆ. ಮತಷ್ಟು ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯುವ ಭಾಗ್ಯ ಸಿಗಲಿದೆ.
ಒಟ್ನಲ್ಲಿ ರಾಜ್ಯದ ಅದೇಷ್ಟೊ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ರಾಜ್ಯದಲ್ಲಿ ಸೀಟ್ ಇಲ್ಲದೆ ಹೊರ ರಾಜ್ಯಕ್ಕೆ ಹೊರ ದೇಶಕ್ಕೆ ಹೋಗ್ತಾರೆ. ಆದ್ರೆ ಈ ಬಾರಿ ಖಾಸಗಿ ಕೋಟಾ ಸೇರಿದಂತೆ ಸರ್ಕಾರಿ ಸೀಟ್ ಕೂಡಾ ಉಳಿದುಕೊಂಡಿದ್ದು ಮೆಡಿಕಲ್ ಸೀಟ್ ವ್ಯರ್ಥ ಆಗದಂತೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಅಂತಾ ಸರ್ಕಾರ ಕೋರ್ಟ್ಗೆ ಮನವಿ ಮಾಡಿದ್ದು. ಕೋರ್ಟ್ ಗ್ರೀನ್ ಸಿಗ್ನಲ್ ನೀಡುತ್ತಾ ಅಂತಾ ಕಾದು ನೋಡಬೇಕಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:03 pm, Tue, 24 October 23