ಬೆಂಗಳೂರು: ಕೇರಳ, ಹೈದರಾಬಾದ್ ಮುಸ್ಲಿಮರಿಂದ (Muslims) ನಮ್ಮ ರಾಜ್ಯದ ರೈತರಿಗೆ (Farmers) ಚಿತ್ರಹಿಂಸೆಯಾಗುತ್ತಿದೆ ಎಂದು ಹಿಂದೂ ಸಂಘಟನೆಯ ಮುಖಂಡ ಭರತ್ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಹೊರ ರಾಜ್ಯದ ಮುಸ್ಲಿಮರಿಂದ ಬೆಳೆಗೆ ಉತ್ತಮ ಬೆಲೆ ಸಿಗುತ್ತಿಲ್ಲ ಎಂದು ಆರೋಪ ಮಾಡಿರುವ ಭರತ್ ಶೆಟ್ಟಿ, ಮಧ್ಯವರ್ತಿಗಳಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಬಗ್ಗೆ ಧ್ವನಿ ಎತ್ತಿದ್ರೆ ಧರ್ಮ ವಿರೋಧಿಗಳು ಅಂತ ಪಟ್ಟ ಕಟ್ಟುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಹಿಂದೂ, ಮುಸ್ಲಿಮರಲ್ಲಿ ಸೌಹಾರ್ದತೆ ಇತ್ತು. ಕೇರಳ ಮುಸ್ಲಿಮರು ನಮ್ಮ ನಡುವೆ ವಿಷಬೀಜ ಬಿತ್ತುತ್ತಿದ್ದಾರೆ ಎಂದು ಹೇಳಿದರು.
ಕೇರಳ ಮುಸ್ಲಿಮರು ಧರ್ಮ ಸಂಘರ್ಷಕ್ಕೆ ಕಾರಣವಾಗಿದ್ದಾರೆ. ರಾಜ್ಯದ ಮುಸ್ಲಿಮರು ರಾಜ್ಯದ ಜನರ ಪರವಾಗಿ ನಿಲ್ಲಬೇಕು. ಮಾವಿನ ವಿಚಾರವಲ್ಲದೆ, ಇತರೆ ಬೆಳೆಗಾರರ ನೋವು ಗೊತ್ತು. ಶುಂಠಿ ಬೆಳೆಗಾರರು, ರೇಷ್ಮೆ ಬೆಳೆಗಾರರ ನೋವು ಗೊತ್ತು. ನಾವು ಕರ್ನಾಟಕದ ರೈತರ ಪರವಾಗಿ ಧ್ವನಿ ಎತ್ತಿದ್ದೇವೆ. ಈ ವಿಚಾರದಲ್ಲಿ ಹಿಂದೂ ಕನ್ನಡಿಗರು ಎಚ್ಚರಿಕೆಯ ಸಂದೇಶ ರವಾನೆ ಮಾಡುತ್ತೇವೆ ಎಂದು ಭರತ್ ಶೆಟ್ಟಿ ತಿಳಿಸಿದ್ದಾರೆ.
ಧ್ವನಿವರ್ಧಕ ಬಳಕೆ ವಿರೋಧಿಸಿ ಭಜನೆ:
ನೆಲಮಂಗಲ: ಆಜಾನ್‌ಗೆ ಧ್ವನಿವರ್ಧಕ ಬಳಕೆ ವಿರೋಧಿಸಿ ಬೆಂಗಳೂರಿನ ಟಿ.ದಾಸರಹಳ್ಳಿಯ ದೇಗುಲದಲ್ಲಿ ಭಜನೆ ಮಾಡಿದ್ದಾರೆ. ವಿಶ್ವ ಹಿಂದೂ ಪರಿಷತ್ ದೇಗುಲದಲ್ಲಿ ಭಜನೆ ಮಾಡಿದೆ.
ಲೈಸೆನ್ಸ್ ನೀಡುವ ಅಧಿಕಾರ ಪೊಲೀಸ್ ಇಲಾಖೆಗೆ ಹಸ್ತಾಂತರ?
ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆ ವಿವಾದ ವಿಚಾರಕ್ಕೆ ಸಂಬಂಧಿಸಿ ಲೈಸೆನ್ಸ್ ನೀಡುವ ಅಧಿಕಾರ ಪೊಲೀಸ್ ಇಲಾಖೆಗೆ ಹಸ್ತಾಂತರ ಮಾಡುವ ಸಾಧ್ಯತೆಯಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡುತ್ತಿತ್ತು. ಪೊಲೀಸರಿಂದ ಲೈಸೆನ್ಸ್ ಪಡೆಯುವಂತೆ ಮಾಡಲು ಚಿಂತನೆ ಮಾಡಲಾಗಿದೆ. ಆಯಾ ಠಾಣಾ ವ್ಯಾಪ್ತಿಯಲ್ಲಿ ಅನುಮತಿ ಪಡೆಯುವ ಸಾಧ್ಯತೆಯಿದೆ.
ಇದನ್ನೂ ಓದಿ
ದೆಹಲಿ ಸಚಿವ ಸತ್ಯೇಂದ್ರ ಜೈನ್ ಕುಟುಂಬಕ್ಕೆ ಸೇರಿದ 481 ಕೋಟಿ ರೂ.ಆಸ್ತಿ ಮುಟ್ಟುಗೋಲು ಹಾಕಿದ ಇ.ಡಿ.
ಬಿಬಿಎಂಪಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು; ಒಂದೇ ಕಾಮಗಾರಿಗೆ ಎರಡೆರಡು ಬಾರಿ ಹಣ ಪಾವತಿ
Published On - 9:07 am, Wed, 6 April 22