AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊನ್ನೆ ಕಾಶ್ಮೀರದಲ್ಲಿ ನಡೆದಿದ್ದು ನಾಳೆ ದೇಶದಲ್ಲೂ ಆಗಬಹುದು; ಬುದ್ಧಿಜೀವಿಗಳು ಮೌನವಾಗಿದ್ದಾರೆ -ಬಿಜೆಪಿ ನಾಯಕ ಸಿ.ಟಿ.ರವಿ

ಮೊನ್ನೆ ಕಾಶ್ಮೀರದಲ್ಲಿ ನಡೆದಿದ್ದು ನಾಳೆ ದೇಶದಲ್ಲೂ ಆಗಬಹುದು. ಇದನ್ನು ನಾನು ಖಂಡಿಸುತ್ತೇನೆ. ಇದರ ಬಗ್ಗೆ ಬುದ್ಧಿಜೀವಿಗಳು ಮೌನವಾಗಿದ್ದಾರೆ. ಸತ್ತವನು ಹಿಂದೂ ಆದರೆ ಕಾಂಗ್ರೆಸ್ನವರಿಗೆ ಕಣ್ಣೀರು ಬರಲ್ಲ. ಸತ್ತವರು ಹಿಂದೂ ಆದರೆ ಸಿದ್ದರಾಮಯ್ಯ ಸಂತಾಪ ಸೂಚಿಸಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ಮೊನ್ನೆ ಕಾಶ್ಮೀರದಲ್ಲಿ ನಡೆದಿದ್ದು ನಾಳೆ ದೇಶದಲ್ಲೂ ಆಗಬಹುದು; ಬುದ್ಧಿಜೀವಿಗಳು ಮೌನವಾಗಿದ್ದಾರೆ -ಬಿಜೆಪಿ ನಾಯಕ ಸಿ.ಟಿ.ರವಿ
ಸಿ ಟಿ ರವಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ
TV9 Web
| Updated By: ಆಯೇಷಾ ಬಾನು|

Updated on: Apr 06, 2022 | 11:09 AM

Share

ಬೆಂಗಳೂರು: ಮುಸ್ಲಿಮರು ಮಾವು ತೆಗೆದುಕೊಳ್ಳದಂತೆ ಅಭಿಯಾನ ವಿಚಾರಕ್ಕೆ ಸಂಬಂಧಿಸಿ ಈ ರೀತಿಯ‌ ನಿಲುವನ್ನು ನಮ್ಮ ಪಕ್ಷ ಸಮರ್ಥಿಸಿಕೊಳ್ಳುವುದಿಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.

ಮೊನ್ನೆ ಕಾಶ್ಮೀರದಲ್ಲಿ ನಡೆದಿದ್ದು ನಾಳೆ ದೇಶದಲ್ಲೂ ಆಗಬಹುದು. ಇದನ್ನು ನಾನು ಖಂಡಿಸುತ್ತೇನೆ. ಇದರ ಬಗ್ಗೆ ಬುದ್ಧಿಜೀವಿಗಳು ಮೌನವಾಗಿದ್ದಾರೆ. ಸತ್ತವನು ಹಿಂದೂ ಆದರೆ ಕಾಂಗ್ರೆಸ್ನವರಿಗೆ ಕಣ್ಣೀರು ಬರಲ್ಲ. ಸತ್ತವರು ಹಿಂದೂ ಆದರೆ ಸಿದ್ದರಾಮಯ್ಯ ಸಂತಾಪ ಸೂಚಿಸಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ಕನ್ನಡ ಮಾತಾಡಿದ್ದಕ್ಕೆ ಯುವಕ ಚಂದ್ರು ಹತ್ಯೆ ಮಾಡಿದ್ದಾರೆ. ಬೆಂಗಳೂರಿನ ಗೋರಿಪಾಳ್ಯದಲ್ಲಿ ಯುವಕನ ಹತ್ಯೆಯಾಗಿದೆ. ನಾವು ಯಾವ ದೇಶದಲ್ಲಿ ಇದ್ದೇವೆಂದು ಸಿ.ಟಿ.ರವಿ ಪ್ರಶ್ನೆ ಮಾಡಿದ್ದಾರೆ. ಈ ವಿಚಾರವನ್ನು ನಾವು ವ್ಯಕ್ತಿಗತ ಆಧಾರದಲ್ಲಿ ನೋಡಬಾರದು. ಇದರ ಹಿಂದೆ ಯಾವ ಪ್ರಚೋದನಕಾರಿ ಅಂಶಗಳಿವೆ. ಮೊನ್ನೆ ಕಾಶ್ಮೀರದಲ್ಲಿ ನಡೆದಿದ್ದು ನಾಳೆ ದೇಶದಲ್ಲೂ ಆಗಬಹುದು. ಇದನ್ನು ನಾನು ಖಂಡಿಸುತ್ತೇನೆ.

ಸಮವಸ್ತ್ರ ಕುರಿತ ಹೈಕೋರ್ಟ್ ಆದೇಶಕ್ಕೆ ನಾವು ಬದ್ಧ. ಶಾದಿ ಭಾಗ್ಯದಿಂದ ಸಮಾಜ ಒಡೆಯುವ ಕೆಲಸ ಮಾಡಿದ್ರು. ಧ್ವನಿವರ್ಧಕಗಳ ಶಬ್ದದ ಪ್ರಮಾಣ ಬಗ್ಗೆ ಕೋರ್ಟ್ ಆದೇಶಗಳನ್ನು ಎಲ್ಲರೂ ಪಾಲಿಸಲಿ. ನಾವು ನ್ಯಾಯಾಲಯದ ಪರ, ಪರಿಸರ ಇಲಾಖೆಯ ಪರ. ನ್ಯಾಯಾಲಯದ ತೀರ್ಪುನ್ನು ವಿರೋಧ ಮಾಡಬಾರದು. ಮತಾಂಧತೆ ಭೂತ ಯಾರಿಗೆ ಹೊಕ್ಕಿದೆ ಎಂದು ಗೊತ್ತಾಗುತ್ತೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.

ಪಕ್ಷದೊಳಗೆ ಪ್ರಜಾಪ್ರಭುತ್ವವೇ ಇಲ್ಲ ಬಿಜೆಪಿ‌ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿರುವ ಪಕ್ಷ. ಕೆಲ ಪಕ್ಷಗಳು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತವೆ. ಆದರೆ ಆ ಪಕ್ಷದೊಳಗೆ ಪ್ರಜಾಪ್ರಭುತ್ವವೇ ಇಲ್ಲ. ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಹತ್ತು ಲಕ್ಷಕ್ಕೂ ಹೆಚ್ಚು ಬೂತ್‌ಗಳಲ್ಲಿ ಬೂತ್ ಅಧ್ಯಕ್ಷರು ತಮ್ಮ ಮನೆಗಳೆದುರು ಪಕ್ಷದ ಧ್ವಜ‌ ಹಾರಿಸಿದ್ದಾರೆ. 15 ಸಾವಿರ ಮಂಡಲಗಳಲ್ಲಿ ಶೋಭಾಯಾತ್ರೆ, ಧ್ವಜಾರೋಹಣ ಮಾಡಲಾಗಿದೆ. ಬಿಜೆಪಿ 42 ವಸಂತಗಳನ್ನು ಪೂರೈಸಿದೆ. 1951 ರಲ್ಲಿ ರಾಷ್ಟ್ರದ ಹಿತಕ್ಕೆ ಒಂದು ಪಕ್ಷದ ಅವಶ್ಯಕತೆ ಕಂಡು ಬಂತು. ಶ್ಯಾಮ್ ಪ್ರಸಾದ್ ಮುಖರ್ಜಿ ನೇತೃತ್ವದಲ್ಲಿ ಆಂದೋಲನ‌ ಶುರುವಾಯಿತು. ಧ್ಯೇಯ ನಿಷ್ಠೆ, ಸತತ ಪರಿಶ್ರಮದಿಂದ ಬಿಜೆಪಿ ಬೆಳೆದಿದೆ. ಇವತ್ತು ಬಿಜೆಪಿ‌ 18 ಕೋಟಿ ಸದಸ್ಯತ್ವ ಹೊಂದಿದೆ. ಅತೀ ಹೆಚ್ಚು ಒಬಿಸಿ, ಎಸ್ಸಿ ಎಸ್ಟಿ ಶಾಸಕರನ್ನು, ಮಹಿಳಾ ಶಾಸಕಿಯರನ್ನು ಹೊಂದಿದೆ. ಜಗತ್ತಿನಲ್ಲೇ ಸಮರ್ಥ ನಾಯಕತ್ವ ಹೊಂದಿರುವ ಪಕ್ಷ ಬಿಜೆಪಿ.

ಕುಮಾರಸ್ವಾಮಿ ಮೊದಲು ಹಿಜಾಬ್, ಸಮವಸ್ತ್ರ ಬಗ್ಗೆ ತಮ್ಮ ನಿಲುವು ಸ್ಪಷ್ಟ ಪಡಿಸಲಿ ಇನ್ನು ಬಿಜೆಪಿ ಬಗ್ಗೆ ಕುಮಾರಸ್ವಾಮಿ ಟೀಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸಿ.ಟಿ.ರವಿ, ಅವರು ಟೀಕೆ ಮಾಡಲೇಬೇಕು. ಅವರಿಗೆ ಹೊಗಳುವ ಔದಾರ್ಯತೆ ಇಲ್ಲ. ಯೂನಿಫಾರಂ ವಿರುದ್ಧ ಹಿಜಾಬ್ ತಂದವರಿಗೆ ಅವರು‌ ಪಾಠ ಹೇಳಬೇಕಿತ್ತು. ಕುಮಾರಸ್ವಾಮಿ ಮೊದಲು ಹಿಜಾಬ್, ಸಮವಸ್ತ್ರ ಬಗ್ಗೆ ತಮ್ಮ ನಿಲುವು ಸ್ಪಷ್ಟ ಪಡಿಸಲಿ ಎಂದರು.

ಇದನ್ನೂ ಓದಿ: BJP Foundation Day: ಬಿಜೆಪಿ ಪಾಲಿಗೆ ಈ ಸಂಸ್ಥಾಪನಾ ದಿನ ತುಂಬ ಮಹತ್ವದ್ದು; ಮೂರು ಕಾರಣ ಹೇಳಿದ ಪ್ರಧಾನಿ ಮೋದಿ

Fighting: ಟೈಮಿಂಗ್ ವಿಚಾರಕ್ಕೆ ಉಡುಪಿಯ ಬಸ್ ಕಂಡಕ್ಟರ್​ಗಳ ನಡುವೆ ಹೊಡೆದಾಟ; ವಿಡಿಯೋ ವೈರಲ್

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ