AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BJP Foundation Day: ಬಿಜೆಪಿ ಪಾಲಿಗೆ ಈ ಸಂಸ್ಥಾಪನಾ ದಿನ ತುಂಬ ಮಹತ್ವದ್ದು; ಮೂರು ಕಾರಣ ಹೇಳಿದ ಪ್ರಧಾನಿ ಮೋದಿ

ಇಂದು ಭಾರತ ಯಾವುದೇ ಒತ್ತಡ, ಬಲವಂತಕ್ಕೆ ಒಳಗಾಗುವ ಭಯವಿಲ್ಲದೆ ತನ್ನ ಹಿತಾಸಕ್ತಿ, ನಿಲುವನ್ನು ಜಗತ್ತಿನ ಎದುರು ದೃಢವಾಗಿ ತೋರಿಸುವ ದೇಶವಾಗಿ ಮಾರ್ಪಾಡಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

BJP Foundation Day: ಬಿಜೆಪಿ ಪಾಲಿಗೆ ಈ ಸಂಸ್ಥಾಪನಾ ದಿನ ತುಂಬ ಮಹತ್ವದ್ದು; ಮೂರು ಕಾರಣ ಹೇಳಿದ ಪ್ರಧಾನಿ ಮೋದಿ
ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತು
TV9 Web
| Updated By: Lakshmi Hegde|

Updated on:Apr 06, 2022 | 11:30 AM

Share

ಇಂದು ನವರಾತ್ರಿಯ ಐದನೇ ದಿನ. ನಾವಿಂದು ಸ್ಕಂದ ಮಾತೆಯನ್ನು ಪೂಜಿಸುತ್ತೇವೆ. ಸ್ಕಂದ ಮಾತೆ ಕಮಲದ ಸಿಂಹಾಸನದ  ಮೇಲೆ ಕುಳಿತು, ಕಮಲದ ಹೂವನ್ನು ಹಿಡಿದು ಕುಳಿತಿರುವ ದೇವತೆ. ಬಿಜೆಪಿಯ ಪ್ರತಿಯೊಬ್ಬ ಸದಸ್ಯ, ಕಾರ್ಯಕರ್ತನಿಗೂ ಆಶೀರ್ವದಿಸಿ, ಒಳ್ಳೆಯದನ್ನು ಮಾಡು ಎಂದು ನಾನು ಮಾತೆಯಲ್ಲಿ ಬೇಡಿಕೊಳ್ಳುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಹೇಳಿದರು. ಇಂದು ಬಿಜೆಪಿಯ 42ನೇ ಸಂಸ್ಥಾಪನಾ ದಿನದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರು, ಸಚಿವರು, ಸಂಸದರು, ಶಾಸಕರನ್ನು ಉದ್ದೇಶಿಸಿ ಮಾತನಾಡಿದರು. ಅದಕ್ಕೂ ಮೊದಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ದೆಹಲಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ಪಕ್ಷದ ಧ್ವಜ ಹಾರಿಸಿ, ಮಾತನಾಡಿದರು.

ಬಿಜೆಪಿ ಪಾಲಿಗೆ ಈ ಬಾರಿಯ ಸಂಸ್ಥಾಪನಾ ದಿನ ತುಂಬ ಮಹತ್ವ ಎನ್ನಿಸಿದೆ. ಅದಕ್ಕೆ ಮೂರು ಕಾರಣಗಳಿವೆ. ಅದರಲ್ಲಿ ಮೊದಲನೇಯದು, ನಾವು ಈ ಬಾರಿ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದ್ದೇವೆ. ಇದು ಸ್ಫೂರ್ತಿದಾಯಕ ಸಂದರ್ಭ. ಎರಡನೇದಾಗಿ, ಭಾರತ ಜಾಗತಿಕ ಮಟ್ಟದಲ್ಲಿ ಕ್ಷಿಪ್ರವಾಗಿ ಅಭಿವೃದ್ಧಿಯಾಗುತ್ತಿದೆ. ಹೊಸಹೊಸ ಅವಕಾಶಗಳು ಭಾರತಕ್ಕೆ ನಿರಂತರವಾಗಿ ಲಭ್ಯವಾಗುತ್ತಿವೆ. ಹಾಗೇ, ಮೂರನೇ ಕಾರಣ,  ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಏರುವ ಮೂಲಕ, ಡಬಲ್​ ಎಂಜಿನ್​ ಸರ್ಕಾರ ಮತ್ತೆ ಆಡಳಿತಕ್ಕೆ ಬಂದಿದೆ. ಅಷ್ಟೇ ಅಲ್ಲ, ಬರೋಬ್ಬರಿ ಮೂರು ದಶಕಗಳ ನಂತರ ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ 100 ದಾಟಿದೆ ಎಂದು ಪ್ರಧಾನಿ ಹೇಳಿದರು.

ಇಂದು ಭಾರತ ಯಾವುದೇ ಒತ್ತಡ, ಬಲವಂತಕ್ಕೆ ಒಳಗಾಗುವ ಭಯವಿಲ್ಲದೆ ತನ್ನ ಹಿತಾಸಕ್ತಿ, ನಿಲುವನ್ನು ಜಗತ್ತಿನ ಎದುರು ದೃಢವಾಗಿ ತೋರಿಸುವ ದೇಶವಾಗಿ ಮಾರ್ಪಾಡಾಗಿದೆ. ಇಡೀ ಜಗತ್ತು ಎರಡು ಪ್ರತಿಸ್ಪರ್ಧಿ ಬಣವಾಗಿ ರೂಪುಗೊಂಡಾಗಲೂ ಭಾರತ ಮಾನವೀಯತೆ ಬಗ್ಗೆ ಮಾತನಾಡುವ ಮತ್ತು ಅದಕ್ಕೆ ಪೂರಕವಾಗಿ ಕೆಲಸ ಮಾಡುವ ದೇಶವಾಗಿ ಭಾರತ ನಿಂತಿದೆ ಎಂದು ಹೇಳಿದ ಪ್ರಧಾನಿ ಮೋದಿ,  ಯಾವುದೇ ಪಕ್ಷ ಅಧಿಕಾರದಲ್ಲಿ ಇರಲಿ, ಅದು ಜನರಿಗಾಗಿ, ದೇಶಕ್ಕಾಗಿ ಏನೂ ಮಾಡುವುದಿಲ್ಲ ಎಂದು ಜನರು ನಂಬಿದ್ದ ಕಾಲವೊಂದಿತ್ತು. ಆದರೆ ಈಗ ಆ ಅಭಿಪ್ರಾಯ ಬಿಜೆಪಿಯಿಂದ ಬದಲಾಗಿದೆ. ಈಗ ದೇಶ ಬದಲಾಗುತ್ತಿದೆ..ಮುಂದುವರಿಯುತ್ತಿ ಎಂಬುದನ್ನು ಪ್ರತಿಯೊಬ್ಬ ನಾಗರಿಕನೂ ಹೆಮ್ಮೆಯಿಂದ ಹೇಳುತ್ತಿದ್ದಾನೆ ಎಂದರು.

ಭಾರತ ಕೊವಿಡ್​ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದೆ. ಈಗಿನವರೆಗೆ 180 ಕೋಟಿ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ. ಇಡೀ ಜಗತ್ತಿನಲ್ಲಿ ಅನೇಕ ದೇಶಗಳು ಆರ್ಥಿಕ ಸಂಕಷ್ಟಕ್ಕೀಡಾಗಿವೆ. ಈ ಮಧ್ಯೆ ಭಾರತ ಸುಮಾರು 80 ಕೋಟಿ ಜನರಿಗೆ ಉಚಿತ ರೇಶನ್​ ಕೊಡುತ್ತಿದೆ. ಬಡವರು ಖಾಲಿ ಹೊಟ್ಟೆಯಲ್ಲಿ ಮಲಗುವಂತಾಗಬಾರದು. ಹೀಗಾಗಿ ನಾವು ಉಚಿತ ರೇಶನ್​ಗಾಗಿಯೇ ಸುಮಾರು 3.5 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ. ಹಲವು ರಾಜಕೀಯ ಪಕ್ಷಗಳು ಅನೇಕ ದಶಕಗಳಿಂದಲೂ ಬರೀ ಮತಬ್ಯಾಂಕ್​​ಗಾಗಿ ಜನರನ್ನು ಬಳಸಿಕೊಳ್ಳುವಂಥ ರಾಜಕಾರಣ ಮಾಡಿಕೊಂಡು ಬಂದಿವೆ. ಪ್ರತಿಪಕ್ಷಗಳ ನಾಟಕ, ನಂಬಿಸುವ ರಾಜಕಾರಣಕ್ಕೆ ಬಿಜೆಪಿ ಸವಾಲಾಗಿದೆ. ಅಲ್ಲದೆ, ಅವೆಲ್ಲವನ್ನೂ ಜನರಿಗೆ ಅರ್ಥ ಮಾಡಿಸಿದೆ ಎಂದು ಹೇಳಿದರು.

ಸದ್ಯ ದೇಶದಲ್ಲಿ ಎರಡು ರೀತಿಯ ರಾಜಕೀಯ ನಡೆಯುತ್ತಿದೆ. ಅದರಲ್ಲಿ ಕುಟುಂಬ ಪ್ರೀತಿಯ ರಾಜಕಾರಣ ಒಂದಾದರೆ, ಇನ್ನೊಂದು ರಾಷ್ಟ್ರವನ್ನು ಪ್ರೀತಿಸುವ ರಾಜಕೀಯ. ಕೆಲವು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ತಮ್ಮ ಕುಟುಂಬಕ್ಕಾಗಿ ಮಾತ್ರ ಕೆಲಸ ಮಾಡುತ್ತಿವೆ. ಇವು ಹಲವು ದಶಕಗಳಿಂದಲೂ ದೇಶಕ್ಕೆ ಹಾನಿಯನ್ನು ಮಾಡುತ್ತಿವೆ. ಇಂಥ ಪಕ್ಷಗಳ ಕಾರ್ಯವೈಖರಿ, ರಾಜಕೀಯದ ಬಗ್ಗೆ ಜನರಿಗೆ ಅರ್ಥ ಮಾಡಿಸಿದ್ದು ಬಿಜೆಪಿ ಎಂಬ ಹೆಮ್ಮೆಯಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ: ಪುನೀತ್​ ಮಾಡಬೇಕಿದ್ದ ಚಿತ್ರದಲ್ಲಿ ಯುವ ರಾಜ್​ಕುಮಾರ್​? ‘ಹೊಂಬಾಳೆ ಫಿಲ್ಮ್ಸ್​’ ಬಗ್ಗೆ ಹಬ್ಬಿದೆ ಗುಸುಗುಸು

Published On - 10:18 am, Wed, 6 April 22

ಬೇರೆ ಭಾಷೆಯಿಂದ ಅವಕಾಶ ಇದೆ; ಆದರೆ ಕನ್ನಡಲ್ಲಿ ಚಾನ್ಸ್ ಇಲ್ಲ: ಖುಷಿ ರವಿ
ಬೇರೆ ಭಾಷೆಯಿಂದ ಅವಕಾಶ ಇದೆ; ಆದರೆ ಕನ್ನಡಲ್ಲಿ ಚಾನ್ಸ್ ಇಲ್ಲ: ಖುಷಿ ರವಿ
ಸಿಎಂ ತಾರತಮ್ಯ ಮಾಡಲ್ಲ, ಅನುದಾನ ಸಮಾನವಾಗಿ ಸಿಗುತ್ತದೆ: ಕೊತ್ತೂರು ಮಂಜನಾಥ್
ಸಿಎಂ ತಾರತಮ್ಯ ಮಾಡಲ್ಲ, ಅನುದಾನ ಸಮಾನವಾಗಿ ಸಿಗುತ್ತದೆ: ಕೊತ್ತೂರು ಮಂಜನಾಥ್
ಬುಮ್ರಾ ಆಡುವುದರ ಬಗ್ಗೆ ಸಿರಾಜ್ ಹೇಳಿದ್ದೇನು? ವಿಡಿಯೋ
ಬುಮ್ರಾ ಆಡುವುದರ ಬಗ್ಗೆ ಸಿರಾಜ್ ಹೇಳಿದ್ದೇನು? ವಿಡಿಯೋ
ಮೈಸೂರು ಜನ ಮತ್ತು ಪೌರಕಾರ್ಮಿಕರಿಗೆ ಶ್ರೇಯಸ್ಸು ಸಲ್ಲಬೇಕು: ಪಾಲಿಕೆ ಆಯುಕ್ತ
ಮೈಸೂರು ಜನ ಮತ್ತು ಪೌರಕಾರ್ಮಿಕರಿಗೆ ಶ್ರೇಯಸ್ಸು ಸಲ್ಲಬೇಕು: ಪಾಲಿಕೆ ಆಯುಕ್ತ
ರಿಷಭ್ ಪಂತ್ ಬಗ್ಗೆ ಹೊರಬಿತ್ತು ಮತ್ತೊಂದು ಬಿಗ್ ಅಪ್​ಡೇಟ್
ರಿಷಭ್ ಪಂತ್ ಬಗ್ಗೆ ಹೊರಬಿತ್ತು ಮತ್ತೊಂದು ಬಿಗ್ ಅಪ್​ಡೇಟ್
ಚರ್ಚೆಗೆ ಕರೆದರೆ ವಿಜಯೇಂದ್ರ ಚುನಾವಣೆ ನಡೆಸಿ ಅನ್ನುತ್ತಾರೆ: ಸಿದ್ದರಾಮಯ್ಯ
ಚರ್ಚೆಗೆ ಕರೆದರೆ ವಿಜಯೇಂದ್ರ ಚುನಾವಣೆ ನಡೆಸಿ ಅನ್ನುತ್ತಾರೆ: ಸಿದ್ದರಾಮಯ್ಯ
ಇಬ್ಬರು ಮುಸ್ಲಿಂ ಯುವಕರು ಮಠವನ್ನು ಪ್ರವೇಶಿಸಿದ್ದರು: ಅರವಿಂದ್ ಬೆಲ್ಲದ್
ಇಬ್ಬರು ಮುಸ್ಲಿಂ ಯುವಕರು ಮಠವನ್ನು ಪ್ರವೇಶಿಸಿದ್ದರು: ಅರವಿಂದ್ ಬೆಲ್ಲದ್
ಯಾವ ಸ್ವಾಮೀಜಿಯಿಂದಲೂ ನಾನು ಸ್ವಂತಕ್ಕಾಗಿ ಲಾಭ ಮಾಡಿಕೊಂಡಿಲ್ಲ: ಯತ್ನಾಳ್
ಯಾವ ಸ್ವಾಮೀಜಿಯಿಂದಲೂ ನಾನು ಸ್ವಂತಕ್ಕಾಗಿ ಲಾಭ ಮಾಡಿಕೊಂಡಿಲ್ಲ: ಯತ್ನಾಳ್
ಢಾಕಾ ಕಾಲೇಜಿನ ಮೇಲೆ ಚೀನಾ ನಿರ್ಮಿತ ಯುದ್ಧ ವಿಮಾನ ಪತನ, ಹಲವು ಮಂದಿ ಸಾವು
ಢಾಕಾ ಕಾಲೇಜಿನ ಮೇಲೆ ಚೀನಾ ನಿರ್ಮಿತ ಯುದ್ಧ ವಿಮಾನ ಪತನ, ಹಲವು ಮಂದಿ ಸಾವು
ಚಾಮರಾಜನಗರ ಹಾಗೂ ಪಾವಗಡ ಎರಡಕ್ಕೂ ಭೇಟಿ ನೀಡಿದ ವಿಚಾರವಾದಿ ಸಿಎಂ
ಚಾಮರಾಜನಗರ ಹಾಗೂ ಪಾವಗಡ ಎರಡಕ್ಕೂ ಭೇಟಿ ನೀಡಿದ ವಿಚಾರವಾದಿ ಸಿಎಂ