ಬಿಬಿಎಂಪಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು; ಒಂದೇ ಕಾಮಗಾರಿಗೆ ಎರಡೆರಡು ಬಾರಿ ಹಣ ಪಾವತಿ

ಬಿಬಿಎಂಪಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು; ಒಂದೇ ಕಾಮಗಾರಿಗೆ ಎರಡೆರಡು ಬಾರಿ ಹಣ ಪಾವತಿ
ಬಿಬಿಎಂಪಿ

ಬಿಬಿಎಂಪಿ ಅಂದ್ರೆ ಭ್ರಷ್ಟರ ಕೂಪ.. ಭ್ರಷ್ಟಾಚಾರಿಗಳ ಅಡ್ಡಾ.. ಹಳೇ ಕಲ್ಲು, ಹೊಸ ಬಿಲ್ಲು ಅಂತೆಲ್ಲಾ ಆರೋಪಗಳನ್ನ ಹೊತ್ತಿಕೊಂಡಿದೆ. ಬಿಬಿಎಂಪಿಯನ್ನ ಇಲ್ಲಿರೋ ಭ್ರಷ್ಟ ಅಧಿಕಾರಿಗಳೇ ಗುಡಿಸಿ ಗುಂಡಾಂತರ ಮಾಡ್ತಿದ್ದಾರೆ.

TV9kannada Web Team

| Edited By: Ayesha Banu

Apr 06, 2022 | 6:57 AM

ಬೆಂಗಳೂರು: ಬಿಬಿಎಂಪಿಯಲ್ಲಿ(BBMP) ಒಂದು ಕೆಲ್ಸಕ್ಕೆ ಎರಡ್ ಎರಡು ಬಾರಿ ಹಣ ಕೊಡ್ತಾರೆ. ಒಮ್ಮೆ ಆಫ್ ಲೈನ್ನಲ್ಲಿ ಕೊಟ್ರೆ ಮತ್ತೊಮ್ಮೆ ಆನ್ಲೈನ್ನಲ್ಲಿ ಪೇಮೆಂಟ್ ಕೊಡ್ತಾರೆ. ಗುತ್ತಿಗೆದಾರರ ಜೊತೆಗೂಡಿ ಬಿಬಿಎಂಪಿಯ ಹಣಕಾಸು ವಿಭಾಗದ ಅಧಿಕಾರಿಗಳೇ ಬಿಬಿಎಂಪಿಯನ್ನ ಗುಡಿಸಿಗುಂಡಾಂತರ ಮಾಡ್ತಿದ್ದಾರೆ.

ಬಿಬಿಎಂಪಿ ಅಂದ್ರೆ ಭ್ರಷ್ಟರ ಕೂಪ.. ಭ್ರಷ್ಟಾಚಾರಿಗಳ ಅಡ್ಡಾ.. ಹಳೇ ಕಲ್ಲು, ಹೊಸ ಬಿಲ್ಲು ಅಂತೆಲ್ಲಾ ಆರೋಪಗಳನ್ನ ಹೊತ್ತಿಕೊಂಡಿದೆ. ಬಿಬಿಎಂಪಿಯನ್ನ ಇಲ್ಲಿರೋ ಭ್ರಷ್ಟ ಅಧಿಕಾರಿಗಳೇ ಗುಡಿಸಿ ಗುಂಡಾಂತರ ಮಾಡ್ತಿದ್ದಾರೆ. ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ಎಷ್ಟರ ಮಟ್ಟಿಗೆ ಬೇರು ಬಿಟ್ಟಿದೆ ಅನ್ನೋದಕ್ಕೆ ಇದೇ ಸಾಕ್ಷಿ. ಬಿಬಿಎಂಪಿಯ ಹಣಕಾಸು ವಿಭಾಗದ ಅಧಿಕಾರಿಗಳು ಒಂದೇ ಕಾಮಗಾರಿಗೆ ಎರಡೆರಡು ಬಾರಿ ಹಣ ಪಾವತಿ ಮಾಡಿದ್ದಾರೆ. ಗುತ್ತಿಗೆದಾರರ ಅಕೌಂಟ್ಗೆ ಒಮ್ಮೆ ಆಫ್ ಲೈನ್ ಅಂತಾ ಒಮ್ಮೆ ಆನ್ಲೈನ್ನಲ್ಲಿ ಅಂತಾ ನೂರಾರು ಕೋಟಿ ಹಣ ಪಾವತಿ ಮಾಡಿ ಬೃಹತ್ ಭ್ರಷ್ಟಾಚಾರವೆಸಗಿದ್ದಾರೆ.

ಬಿಬಿಎಂಪಿ ಹಣಕಾಸು ವಿಭಾಗದಿಂದಲೇ ಬೃಹತ್ ಭ್ರಷ್ಟಾಚಾರ? 2019 ರಲ್ಲಿ ಕಾಮಾಕ್ಷಿಪಾಳ್ಯದಲ್ಲಿ ರಾಜಕಾಲುವೆ ಕಾಮಗಾರಿ ಮಾಡಿದ್ದ ಗುತ್ತಿಗೆದಾರನೊಬ್ಬ ಬಿಲ್ ಪಾವತಿಗೆ ಬಿಬಿಎಂಪಿಗೆ 2020 ರಲ್ಲಿ ಅರ್ಜಿ ಸಲ್ಲಿಸಿದ್ದ. ಹಿರಿತನ ಇಲ್ಲದ ಕಾರಣ ಬಿಲ್ ಪಾವತಿ ಆಗಿರಲಿಲ್ಲ. ನಂತರ ಹಣಕಾಸು ವಿಭಾಗದ ಅಧಿಕಾರಿಗಳ ನೇರವಿನೊಂದಿಗೆ ಆಫ್ ಲೈನ್ನಲ್ಲಿ ಒಂದು ಕೋಟಿ 62 ಲಕ್ಷದ 70 ಸಾವಿರದ 500 ರೂಪಾಯಿಯನ್ನ 2020 ಮಾರ್ಚ್ ನಲ್ಲಿ ಪಡೆದುಕೊಂಡಿದ್ದ. ಹಣಕಾಸು ವಿಭಾಗದಿಂದ ಗುತ್ತಿಗೆದಾರ ಮಾಡಿದ ಕೆಲ್ಸಕ್ಕೆ ಪೇಮೆಂಟ್ ಮಾಡಲಾಗಿತ್ತು. ಆದ್ರೆ, ಇದೆಲ್ಲಾ ಆಗಿ ಎರಡು ವರ್ಷದ ನಂತರ ಅಂದ್ರೆ, ಕಳೆದ ತಿಂಗಳು ಇದೇ ಗುತ್ತಿಗೆದಾರನಿಗೆ ಮತ್ತೆ ಒಂದು ಕೋಟಿ 62 ಲಕ್ಷದ 70 ಸಾವಿರದ 500 ರೂಪಾಯಿಯನ್ನ ಪೇಮೆಂಟ್ ಮಾಡಿದ್ದಾರಂತೆ.

ಒಂದು ಕಾಮಗಾರಿಗೆ ಒಂದೇ ಬಾರಿ ಹಣ ಪಾವತಿ ಮಾಡಬೇಕು. ಆದ್ರೆ ಬಿಬಿಎಂಪಿ ಹಣಕಾಸು ವಿಭಾಗದ ಅಧಿಕಾರಿಗಳು ಒಂದೇ ಕಾಮಗಾರಿಗೆ ಎರಡು ಎರಡು ಬಾರಿ ಪೇಮೆಂಟ್ ಮಾಡ್ತಿದ್ದಾರೆ. ಈ ಬಗ್ಗೆ ಬಿಬಿಎಂಪಿ ಮುಖ್ಯಲೆಕ್ಕಾಧಿಕಾರಿ ರಾಜುರನ್ನ ಪ್ರಶ್ನಿಸಿದ್ರೆ, ಇದು ಬ್ಯಾಂಕ್ ಪ್ರಾಬ್ಲಂ ಅಂತಾ ಕುಂಟು ನೆಪ ಹೇಳ್ತಿದ್ದಾರೆ.

ಅಧಿಕಾರಿಗಳೇ ಇಂಥಾ ಬೇಜವಾಬ್ದಾರಿ ಉತ್ತರಗಳಿಂದ ಬಿಬಿಎಂಪಿಯ ದುಡ್ಡು ಪೋಲ್ ಆಗ್ತಿದೆ. ಗುತ್ತಿಗೆದಾರರಿಗೆ ಒಂದೇ ಕಾಮಗಾರಿಗೆ ಎರಡು ಬಾರಿ ಹಣ ಪಾವತಿ ಮಾಡ್ತಿರೋದು ದೊಡ್ಡ ಭ್ರಷ್ಟಾಚಾರವನ್ನ ಖುದ್ದು ಹಣಕಾಸು ವಿಭಾಗದ ಅಧಿಕಾರಿಗಳೇ ಲೂಟಿಕೋರರಾಗಿದ್ದು ದುರಂತವೇ ಸರಿ.

ವರದಿ: ಮುತ್ತಪ್ಪ ಲಮಾಣಿ, ಟಿವಿ9 ಬೆಂಗಳೂರು

ಇದನ್ನೂ ಓದಿ; ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ವಲಯವಾರು ಕ್ರಿಯಾ ಯೋಜನೆ ರೂಪಿಸಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ

ಡೆಲಿವರಿ ಬಾಯ್​ಗಳೆಂಬ ಹರಕೆಯ ಕುರಿಗಳು: ರವಿ ಅರೇಹಳ್ಳಿ ಬರಹ

Follow us on

Related Stories

Most Read Stories

Click on your DTH Provider to Add TV9 Kannada