ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿ (Pothole) ಮುಚ್ಚುವ ವಿಚಾರಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ (Karnataka High Court) ಆದೇಶ ಹೊರಡಿಸಿದೆ. ವಲಯವಾರು ಕ್ರಿಯಾ ಯೋಜನೆ ರೂಪಿಸಲು ಆದೇಶ ನೀಡಿರುವ ಹೈಕೋರ್ಟ್, 8 ವಲಯಗಳಲ್ಲಿ ರಸ್ತೆ ಅಗೆಯುವ ಏಜೆನ್ಸಿಗಳನ್ನು ಗುರುತಿಸಿ. ಏಜೆನ್ಸಿಗಳೊಂದಿಗೆ ಬಿಬಿಎಂಪಿ ಅಧಿಕಾರಿಗಳು ಸಭೆ ನಡೆಸಬೇಕು ಎಂದು ತಿಳಿಸಿದೆ. ರಸ್ತೆಗಳ ಜಂಟಿ ಸರ್ವೆ ನಡೆಸಿ ಯೋಜನೆ ರೂಪಿಸಬೇಕು. ರಸ್ತೆ ಗುಂಡಿ ಮುಚ್ಚಲು ಸಂಸ್ಥೆ ಆಸಕ್ತಿ ವ್ಯಕ್ತಪಡಿಸಿದೆ. ಅಮೆರಿಕನ್ ರೋಡ್ ಟೆಕ್ನಾಲಜಿ ಸಲ್ಯೂಷನ್ಸ್ ಸಂಸ್ಥೆ ಸಿದ್ಧವಿದೆ. ಸಂಸ್ಥೆಯೊಂದಿಗೂ ಅಧಿಕಾರಿಗಳು ಸೇರಿ ಯೋಜನೆ ರೂಪಿಸಬೇಕು ಎಂದು ಹೈಕೋರ್ಟ್ ವಿಭಾಗೀಯ ಪೀಠದಿಂದ ಆದೇಶ ಹೊರಡಿಸಿದೆ.
ಬಿಬಿಎಂಪಿ ಈವರೆಗೂ ಕೈಗೊಂಡ ಕ್ರಮಗಳ ಬಗ್ಗೆ ಹೈಕೋರ್ಟ್ ಅಸಮಾಧಾನ ಹೊರಹಾಕಿದೆ. ನೀವು ಹೇಳುತ್ತೀರಾ ಏನೂ ಮಾಡುವುದಿಲ್ಲ. ಬಿಬಿಎಂಪಿ ಪ್ರತಿದಿನ ಒಂದು ವಲಯದ ಸಭೆ ನಡೆಸಬೇಕು. ಏ.19ರೊಳಗೆ 8 ವಲಯಗಳ ಕ್ರಿಯಾಯೋಜನೆ ಸಲ್ಲಿಸಬೇಕು ಅಂತ ಬಿಬಿಎಂಪಿಗೆ ಹೈಕೋರ್ಟ್ ವಿಭಾಗೀಯ ಪೀಠ ತಾಕೀತು ಮಾಡಿದೆ.
15 ದಿನಗಳ ಗಡುವು ನೀಡಿದ್ದ ಹೈಕೋರ್ಟ್: ಹೈಕೋರ್ಟ್ ಮಾರ್ಚ್ 15ಕ್ಕೆ ನಗರದಲ್ಲಿ ರಸ್ತೆ ಗುಂಡಿ ದುರಸ್ತಿಗೆ 15 ದಿನಗಳ ಗಡುವು ನೀಡಿತ್ತು. 15 ದಿನಗಳಲ್ಲಿ ರಸ್ತೆಗುಂಡಿ ಮುಚ್ಚಲು ಬಿಬಿಎಂಪಿಗೆ ಹೈಕೋರ್ಟ್ ತಾಕೀತು ನೀಡಿದ್ದು, 15 ದಿನಗಳಲ್ಲಿ ಕ್ರಮ ಕೈಗೊಂಡ ವರದಿ ನೀಡಲು ಸೂಚಿಸಿತ್ತು. ಸಿಬಿಡಿ ವ್ಯಾಪ್ತಿಯ ಪ್ರದೇಶ ಗುಂಡಿ ಮುಕ್ತ ಮಾಡಿ ಸಿಜೆ ರಿತುರಾಜ್ ಅವಸ್ತಿ, ನ್ಯಾ.S.R.ಕೃಷ್ಣ ಕುಮಾರ್ರಿದ್ದ ಪೀಠ ಆದೇಶ ನೀಡಿತ್ತು. ರಸ್ತೆ ಗುಂಡಿಯಿಂದ ಅಶ್ವಿನ್ ಸಾವು ಪ್ರಸ್ತಾಪ ಮಾಡಿದ ಹೈಕೋರ್ಟ್ ಆತಂಕ ವ್ಯಕ್ತಪಡಿಸಿತ್ತು. ಕೂಡಲೇ ರಸ್ತೆ ಗುಂಡಿಗಳನ್ನ ಮುಚ್ಚಲು ಆದೇಶಿಸಿತ್ತು.
ಇದನ್ನೂ ಓದಿ
Crime News: ರಾತ್ರಿ ಬಸ್ನಲ್ಲಿ ಮೈ-ಕೈ ಮುಟ್ಟಿದವನಿಗೆ ಪಿನ್ನಲ್ಲಿ ಚುಚ್ಚಿ, ಪೊಲೀಸ್ ಠಾಣೆಗೆ ಎಳೆದೊಯ್ದ ಮಹಿಳೆ
ಕರ್ನಾಟಕದ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳಲ್ಲಿ ಮದ್ಯಪಾನ ಖಾಲಿ! ಇಂದು ಸಂಜೆಯಿಂದ ಮದ್ಯ ಪ್ರಿಯರಿಗೆ ಇಲ್ಲ ಎಣ್ಣೆ