ರಾಜ್ಯದಲ್ಲಿ ಧರ್ಮ ಸಂಘರ್ಷಕ್ಕೆ ಬ್ರೇಕ್ ಹಾಕಲು ಮುಂದಾದ ಹೆಚ್ಡಿ ಕುಮಾರಸ್ವಾಮಿ; ಪ್ರತಿಭಟನೆ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ

ರಾಜ್ಯದಲ್ಲಿ ಧರ್ಮ ಸಂಘರ್ಷಕ್ಕೆ ಬ್ರೇಕ್ ಹಾಕಲು ಮುಂದಾದ ಹೆಚ್ಡಿ ಕುಮಾರಸ್ವಾಮಿ; ಪ್ರತಿಭಟನೆ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ
ಹೆಚ್ ಡಿ ಕುಮಾರಸ್ವಾಮಿ

ಹಿಜಾಬ್, ಹಲಾಲ್, ಆಜಾನ್ ಸಂಘರ್ಷಕ್ಕೆ ಕುಮಾರಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಸಂಘರ್ಷಗಳಿಗೆ ಬ್ರೇಕ್ ಹಾಕುವಂತೆ ಸರ್ಕಾರಕ್ಕೆ ಹೆಚ್ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಸರ್ಕಾರ ಎಲ್ಲಾ ಸಂಘರ್ಷಗಳಿಗೆ ಬ್ರೇಕ್ ಹಾಕದಿದ್ದರೆ ರಾಜ್ಯಾದ್ಯಂತ ರಸ್ತೆಗಿಳಿದು ಪ್ರತಿಭಟನೆ ಮಾಡಲು HDK ಪ್ಲ್ಯಾನ್ ಮಾಡಿಕೊಂಡಿದ್ದಾರೆ.

TV9kannada Web Team

| Edited By: Ayesha Banu

Apr 06, 2022 | 8:21 AM

ಬೆಂಗಳೂರು: ರಾಜ್ಯದಲ್ಲಿ ಧರ್ಮ ಸಂಘರ್ಷ ಮುಂದುವರಿದಿರುವ ಹಿನ್ನೆಲೆಯಲ್ಲಿ ರಸ್ತೆಗಿಳಿದು ಪ್ರತಿಭಟಿಸಲು ಹೆಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ. ಸಂಘರ್ಷಗಳ ವಿಚಾರದಲ್ಲಿ ಕಾಂಗ್ರೆಸ್ ಮೌನವಹಿಸಿದೆ. ಹೀಗಾಗಿ ಕೈ ನಾಯಕರ ಮೌನವನ್ನೆ ಅಸ್ತ್ರವಾಗಿ ಬಳಸಿಕೊಳ್ಳಲು ಹೆಚ್ಡಿಕೆ ಪ್ಲ್ಯಾನ್ ಮಾಡಿದ್ದು ರಸ್ತೆಗಿಳಿದು ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.

ಹಿಜಾಬ್, ಹಲಾಲ್, ಆಜಾನ್ ಸಂಘರ್ಷಕ್ಕೆ ಕುಮಾರಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಸಂಘರ್ಷಗಳಿಗೆ ಬ್ರೇಕ್ ಹಾಕುವಂತೆ ಸರ್ಕಾರಕ್ಕೆ ಹೆಚ್ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಸರ್ಕಾರ ಎಲ್ಲಾ ಸಂಘರ್ಷಗಳಿಗೆ ಬ್ರೇಕ್ ಹಾಕದಿದ್ದರೆ ರಾಜ್ಯಾದ್ಯಂತ ರಸ್ತೆಗಿಳಿದು ಪ್ರತಿಭಟನೆ ಮಾಡಲು HDK ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಧರಣಿ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ಗೆ ಕೌಂಟರ್ ಕೊಡಲು ಹೆಚ್ಡಿಕೆ ಹೊಸ ತಂತ್ರ ರೂಪಿಸಿದ್ದಾರೆ.

ಸರ್ವಜನಾಂಗದ ಶಾಂತಿಯ ತೋಟ ಭಾವೈಕ್ಯತೆಯ ಚರ್ಚೆ ಇನ್ನು ಮತ್ತೊಂದೆಡೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಮೈಸೂರಿನ ಕಲಾಮಂದಿರದಲ್ಲಿ ಬೆಳಗ್ಗೆ 10.30ಕ್ಕೆ ಸರ್ವಜನಾಂಗದ ಶಾಂತಿಯ ತೋಟ ಭಾವೈಕ್ಯತೆಯ ಚರ್ಚೆ ನಡೆಯಲಿದೆ. ಲೋಕನಾಯಕ ಜೆ.ಪಿ ವಿಚಾರ ವೇದಿಕೆ ಅಡಿ ಕಾರ್ಯಕ್ರಮ ನಡೆಯಲಿದೆ. ‘ಸಮಾಜ ಎತ್ತ ಸಾಗುತ್ತಿದೆ? ನಾವೇನು ಮಾಡಬೇಕು?’ ವಿಚಾರ ಚರ್ಚೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಪರಿಷತ್ ಮಾಜಿ ಸದಸ್ಯ ಸಿ.ಎಂ.ಇಬ್ರಾಹಿಂ, ಬಸವ ಧ್ಯಾನಮಂದಿರದ ಬಸವಲಿಂಗಮೂರ್ತಿ ಶರಣರು, ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಹೌಝು ಇಲ್ವಿಯಾ ಇಮಾಮ್ ಸಜ್ಜದ್‌ ವಿದ್ಯಾಸಂಸ್ಥೆಯ ಮೌಲಾನಾ ಅಬ್ಬಾಸ್ ಸಜ್ಜದ್, ಸಾಹಿತಿ ಅರವಿಂದ ಮಾಲಗತ್ತಿ ಸೇರಿ ಹಲವರು ಭಾಗಿಯಾಗಲಿದ್ದಾರೆ.

ಆಜಾನ್, ಸುಪ್ರಭಾತ ಈಗಿನದಲ್ಲ ಮೊದಲಿಂದಲೂ ಬಂದಿರುವುದು; ದೇವಾಲಯಗಳಲ್ಲಿ ಭಜನೆ, ಸುಪ್ರಭಾತ ಪುನರುದ್ಧಾರ ಮಾಡೋಣ -ಹೆಚ್ಡಿಕೆ ಬೆಂಗಳೂರು: ಆಜಾನ್(Azaan) ಸಂಘರ್ಷ ವಿಚಾರಕ್ಕೆ ಸಂಬಂಧಿಸಿ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಸರಣಿ ಟ್ವೀಟ್ ಮೂಲಕ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಮಸೀದಿ, ದೇವಸ್ಥಾನಗಳಲ್ಲಿ ಆಜಾನ್, ಸುಪ್ರಭಾತ ಈಗಿನದಲ್ಲ. ಮೊದಲಿಂದಲೂ ಬಂದಿರುವುದು ಎಂದು ಸುಪ್ರಭಾತ, ಆಜಾನ್ ಬಗ್ಗೆ ಬಾಲ್ಯದ ನೆನಪುಗಳನ್ನು ಹೆಚ್ಡಿ ಕುಮಾರಸ್ವಾಮಿ ಹಂಚಿಕೊಂಡಿದ್ದಾರೆ. ದೇವಾಲಯಗಳಲ್ಲಿ ನಡೆಯುತ್ತಿದ್ದ ಭಜನೆ, ಸುಪ್ರಭಾತ, ಶ್ಲೋಕ ಕ್ರಮೇಣ ಕಡಿಮೆಯಾಗುತ್ತಿದೆ. ನಾವೆಲ್ಲರೂ ಸೇರಿ ಅವುಗಳನ್ನು ಮತ್ತೆ ಪುನರುದ್ಧಾರ ಮಾಡೋಣ ಎಂದು ಕರೆ ನೀಡಿದ್ದಾರೆ.

ಹೆಚ್ಡಿ ಕುಮಾರಸ್ವಾಮಿ ಮಾಡಿರುವ ಟ್ವೀಟ್ ಈ ರೀತಿ ಇದೆ ದೇವಾಲಯಗಳಲ್ಲಿ ಸೂರ್ಯೋದಯಕ್ಕೆ ಮುನ್ನವೇ ಸುಪ್ರಭಾತ ಕೇಳಿಸುವುದು, ಮಸೀದಿಗಳಲ್ಲಿ ಅಲ್ಲಾಹ್ ಕೂಗುವುದನ್ನು ನಾನು ಬಾಲ್ಯದಿಂದಲೂ ಕೇಳಿಕೊಂಡೇ ಬೆಳೆದಿದ್ದೇನೆ. ನಮ್ಮ ಊರಿನಲ್ಲಿ ನಿತ್ಯವೂ ನಾನು ಕೇಳುತ್ತಿದ್ದ ಸದ್ದುಗಳಾಗಿದ್ದವು ಇವು. ಅದೇ ರೀತಿ ಊರಿನ ಸಿನಿಮಾ ಟೆಂಟಿನಲ್ಲಿ ರಾತ್ರಿಯ ಸೆಕೆಂಡ್ ಶೋ ಆರಂಭಕ್ಕೆ ಮುನ್ನ ಘಂಟಸಾಲ ಅವರು ಭಕ್ತಿಪರವಶರಾಗಿ ಹಾಡಿರುವ ʼನಮೋ ವೆಂಕಟೇಶʼ ಎನ್ನುವ ಶ್ರೀ ವೆಂಕಟೇಶ್ವರ ಸ್ವಾಮಿಯವರ ಕೀರ್ತನೆಯನ್ನು ಧ್ವನಿವರ್ಧಕದಲ್ಲಿ ಕೇಳಿಸುತ್ತಿದ್ದನ್ನು ನನ್ನಂತೆಯೇ ಅನೇಕರು ಕೇಳಿರುತ್ತಾರೆ. ಅಷ್ಟೇ ಅಲ್ಲ, ಸಂಜೆಯಾದರೆ ಇಡೀ ಊರಿನ ಜನರೆಲ್ಲ ಗುಡಿಯಲ್ಲಿ ಸೇರಿ ಭಜನೆ ಮಾಡುತ್ತಿದ್ದದ್ದು, ಕರತಾಳ ಹಿಡಿದು ರಾತ್ರಿ ಹತ್ತು ಗಂಟೆವರೆಗೂ ಭಗವಂತನ ಭಜನೆಯಲ್ಲಿ ಲೀನವಾಗುತ್ತಿದ್ದ ದಿನಗಳು ಇನ್ನೂ ನನ್ನ ಸ್ಮೃತಿಪಟಲದಲ್ಲಿ ಹಚ್ಚಹಸಿರಾಗಿವೆ. ನಾನೂ ಬಹಳ ಶ್ರದ್ಧೆಯಿಂದ ಭಜನೆಯಲ್ಲಿ ಪಾಲ್ಗೊಳ್ಳುತ್ತಿದ್ದೆ ಎಂದು ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ಬಿಬಿಎಂಪಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು; ಒಂದೇ ಕಾಮಗಾರಿಗೆ ಎರಡೆರಡು ಬಾರಿ ಹಣ ಪಾವತಿ

Gold Price Today: ಬೆಳ್ಳಿ ಬೆಲೆ 1 ಕೆಜಿಗೆ 300 ರೂ. ಕುಸಿತ; ಇಂದಿನ ಚಿನ್ನದ ದರ ಹೀಗಿದೆ

Follow us on

Related Stories

Most Read Stories

Click on your DTH Provider to Add TV9 Kannada