ಧ್ವನಿವರ್ಧಕ ಬಳಕೆ: ಹೈಕೋರ್ಟ್ ಆದೇಶ ಪಾಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಡಿಜಿ & ಐಜಿಪಿ ಪ್ರವೀಣ್ ಸೂದ್‌ರಿಂದ ಸುತ್ತೋಲೆ
ಧಾರ್ಮಿಕ ಕೇಂದ್ರಗಳು, ಪಬ್, ನೈಟ್ ಕ್ಲಬ್, ಇನ್ಸ್ಟಿಟ್ಯೂಟ್ಗಳು, ಫಂಕ್ಷನ್ ಸೇರಿದಂತೆ ಎಲ್ಲಾ ಕಡೆ ನಿಗಾ ಇಡಿ. ಹೈ ಕೋರ್ಟ್ ಆದೇಶವನ್ನ ಯಥಾವತ್ತಾಗಿ ಪಾಲಿಸಿ. ಶಬ್ಧ ಮಾಲಿನ್ಯ ಉಂಟು ಮಾಡ್ತಿರುವವರ ಮೇಲೆ ಕೇಸ್ ಹಾಕಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರು: ಮಸೀದಿಗಳ ಮೇಲೆ ಧ್ವನಿವರ್ಧಕ ಬಳಕೆಗೆ ರಾಜ್ಯದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಈ ವಿಚಾರಕ್ಕೆ ಸಂಬಂಧಿಸಿ ಡಿಜಿ & ಐಜಿಪಿ ಪ್ರವೀಣ್ ಸೂದ್ ಸುತ್ತೋಲೆ ಹೊರಡಿಸಿದ್ದಾರೆ. ಹೈಕೋರ್ಟ್ ಆದೇಶ ಯಥಾವತ್ತಾಗಿ ಪಾಲಿಸಲು ಸೂಚನೆ ನೀಡಿದ್ದಾರೆ. ಶಬ್ದ ಮಾಲಿನ್ಯ ಮಾಡುತ್ತಿದ್ದರೆ ಕೇಸ್ ಹಾಕಿ ಕಾನೂನು ಪ್ರಕಾರ ಕ್ರಮಕೈಗೊಳ್ಳುವಂತೆ ಪೊಲೀಸ್ ಆಯುಕ್ತರು, ಐಜಿಪಿಗಳು, SPಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.
ಧಾರ್ಮಿಕ ಕೇಂದ್ರಗಳು, ಪಬ್, ನೈಟ್ ಕ್ಲಬ್, ಇನ್ಸ್ಟಿಟ್ಯೂಟ್ಗಳು, ಫಂಕ್ಷನ್ ಸೇರಿದಂತೆ ಎಲ್ಲಾ ಕಡೆ ನಿಗಾ ಇಡಿ. ಹೈ ಕೋರ್ಟ್ ಆದೇಶವನ್ನ ಯಥಾವತ್ತಾಗಿ ಪಾಲಿಸಿ. ಶಬ್ಧ ಮಾಲಿನ್ಯ ಉಂಟು ಮಾಡ್ತಿರುವವರ ಮೇಲೆ ಕೇಸ್ ಹಾಕಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ನಿಯಂತ್ರಣ ಮಂಡಳಿ ಕಾಯ್ದೆ 2000 ಅಡಿ ಶಬ್ಧ ಮಾಲಿನ್ಯ ಉಂಟು ಮಾಡ್ತಿದ್ರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಎಸ್ಪಿ, ಐಜಿಪಿಗಳು ಮತ್ತು ಕಮೀಷನರ್ಗೆ ಡಿಜಿ & ಐಜಿಪಿ ಸೂಚನೆ ನೀಡಿದ್ದಾರೆ.
ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆ ಕೂಡ ಮಾಡಿಕೊಂಡ್ರು ಇನ್ನು ಮತ್ತೊಂದು ಕಡೆ ಗೃಹಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್, ಜೆಡಿಎಸ್ ಮತ್ತು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಸಂಘರ್ಷಗಳಿಗೆ ಕಾಂಗ್ರೆಸ್ ನಾಯಕರ ಹೇಳಿಕೆಗಳು ಕಾರಣ. ಮತ ಬ್ಯಾಂಕ್ಗಾಗಿ JDS, ಕಾಂಗ್ರೆಸ್ ಬೊಬ್ಬೆ ಹೊಡೆಯುತ್ತಿವೆ. ಇದಕ್ಕೆ ಜನ ಉತ್ತರ ಕೊಡುತ್ತಾರೆ. ಆಜಾನ್ ಬಗ್ಗೆ ಇವರಿಗೆ ಸತ್ಯ ಹೇಳಲು ಆಗುತ್ತಿಲ್ಲ. ಗೃಹ ಇಲಾಖೆ ತುಂಬಾ ಚೆನ್ನಾಗಿ ನಡೆಯುತ್ತಿದೆ. ಸಿದ್ದರಾಮಯ್ಯ ಕಾಲದಲ್ಲಿ ನಿವೃತ್ತ IPS ಅಧಿಕಾರಿ ಆಡಳಿತ ನಡೆಸುತ್ತಿದ್ರು. ಅವರ ಕಾಲದಲ್ಲಿ ಮೂವರು ಗೃಹ ಸಚಿವರನ್ನು ಡಮ್ಮಿ ಮಾಡಿದ್ರು. ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆ ಕೂಡ ಮಾಡಿಕೊಂಡ್ರು. ಈಗ ಓಲೈಕೆ ರಾಜಕಾರಣಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಗೃಹಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ರು
ಇದನ್ನೂ ಓದಿ: Fighting: ಟೈಮಿಂಗ್ ವಿಚಾರಕ್ಕೆ ಉಡುಪಿಯ ಬಸ್ ಕಂಡಕ್ಟರ್ಗಳ ನಡುವೆ ಹೊಡೆದಾಟ; ವಿಡಿಯೋ ವೈರಲ್
ಮಂಗಳೂರು: ಭಿನ್ನ ಕೋಮಿನ ಜೋಡಿಯ ಮೇಲೆ ಹಲ್ಲೆಗೆ ಯತ್ನ; ನೈತಿಕ ಪೊಲೀಸ್ಗಿರಿ ಆರೋಪದಡಿ ಇಬ್ಬರ ಬಂಧನ
Published On - 10:02 am, Wed, 6 April 22