ಬೆಂಗಳೂರು, ಅ.17: ರೇಷನ್ ಕಾರ್ಡ್ (Ration Card) ಇದ್ದರೂ ರೇಷನ್ ಪಡೆಯದ ಕಾರ್ಡ್ದಾರರಿಗೆ ಆಹಾರ ಇಲಾಖೆ ಬಿಗ್ ಶಾಕ್ ಕೊಟ್ಟಿದೆ. 6 ತಿಂಗಳಿಂದ ಪಡಿತರ ಪಡೆಯದವರ ರೇಷನ್ ಕಾರ್ಡ್ ಅಮಾನತು ಮಾಡಲು ಆಹಾರ ಇಲಾಖೆ ಮುಂದಾಗಿದೆ. ಈ ನಿಯಮ ಅಂತ್ಯೋದಯ, ಬಿಪಿಎಲ್, ಪಿಹೆಚ್ಹೆಚ್ ಕಾರ್ಡ್ಗೆ ಅನ್ವಯಿಸುತ್ತದೆ. ಸದ್ಯ ಆರು ತಿಂಗಳಿಂದ ಒಟ್ಟು 3.26 ಲಕ್ಷ ಜನ ಪಡಿತರ ಪಡೆದಿಲ್ಲ. ಆಹಾರ ಇಲಾಖೆ ಪಡಿತರ ಪಡೆಯದ ಕಾರ್ಡ್ಗಳ ಡೇಟಾ ಸಂಗ್ರಹಿಸಿ ಕಾರ್ಡ್ ಅಮಾನತಿಗೆ ಆದೇಶ ನೀಡಿದೆ.
ಒಟ್ಟು 3.26 ಲಕ್ಷದಷ್ಟು ಫಲಾನುಭವಿಗಳು ಆರು ತಿಂಗಳಿನಿಂದ ರೇಷನ್ ಪಡೆಯುತ್ತಿಲ್ಲ. ಅಕ್ಕಿ ಪಡೆದಿಲ್ಲದೇ ಇರುವ ಬಗ್ಗೆ ಆಹಾರ ಇಲಾಖೆ ಡೇಟಾ ಕಲೆಕ್ಟ್ ಮಾಡಿಕೊಂಡಿದ್ದು ಈ ಕಾರ್ಡ್ಗಳ ಅಮಾನತಿಗೆ ಆದೇಶಿಸಿದೆ. ಈ ವಾರದಲ್ಲಿ 3.26 ಲಕ್ಷ ಕಾರ್ಡ್ಗಳು ಸಸ್ಪೆಂಡ್ ಆಗಲಿವೆ. ಕಳೆದ ಎರಡು ತಿಂಗಳ ಹಿಂದೆ ಮೃತಪಟ್ಟ ಕಾರ್ಡ್ ಹೊಂದಿರುವ ಫಲಾನುಭವಿಗಳ ಹೆಸರು ಡಿಲೀಟ್ ಮಾಡಿ ರೇಷನ್ ಕಾರ್ಡ್ ಫಲಾನುಭವಿಗಳಿಗೆ ಆಹಾರ ಇಲಾಖೆ ಶಾಕ್ ಕೊಟ್ಟಿತ್ತು. ಇದೀಗ ಕಳೆದ ಆರು ತಿಂಗಳಿನಿಂದ ಅಕ್ಕಿ ಪಡೆಯದ ರೇಷನ್ ಕಾರ್ಡ್ಗಳನ್ನು ಸಸ್ಪೆಂಡ್ ಮಾಡಲು ಆದೇಶ ಹೊರಡಿಸಿದೆ. ಇದರಿಂದ ಆಹಾರ ಇಲಾಖೆಗೆ ಸಾಕಷ್ಟು ಅನುಕೂಲವಾಗಲಿದೆ.
ಸದ್ಯ ಅಂತ್ಯೋದಯ, ಪಿಹೆಚ್ಹೆಚ್ ಹಾಗೂ NPHH ನಲ್ಲಿ ಒಟ್ಟು 1,52,79,343 ರಷ್ಟು ಕಾರ್ಡ್ಗಳಿದ್ದು ಒಟ್ಟು 52,34,148 ರಷ್ಟು ಫಲಾನುಭವಿಗಳಿದ್ದಾರೆ. ಇನ್ನು ಬಿಪಿಎಲ್ನಲ್ಲಿ 1,27,82,893 ಕಾರ್ಡ್ಗಳಿದ್ದು ಒಟ್ಟು 4,37,65,128 ರಷ್ಟು ಫಲಾನುಭವಿಗಳಿದ್ದಾರೆ. ಇದರಲ್ಲಿ ಒಟ್ಟು 3 ಲಕ್ಷದ 26 ಸಾವಿರ ಕಾರ್ಡ್ ಗಳನ್ನ ಸಸ್ಪೆಂಡ್ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ. ಈ ಕಾರ್ಡ್ ಸಸ್ಪೆಂಡ್ ನಂತರ ಹೊಸ ಕಾರ್ಡ್ ಗಳಿಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಸದ್ಯ ಅಕ್ಕಿಪಡೆಯದ ಫಲಾನುಭವಿಗಳ ಕಾರ್ಡ್ಗಳನ್ನ ತನಿಖೆ ನಡೆಸಿ ಸಸ್ಪೆಂಡ್ ಮಾಡುವುದಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.
ಇದನ್ನೂ ಓದಿ: ಮೂರು ಹಂತಗಳಲ್ಲಿ ಬಿಪಿಎಲ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದ ಆಹಾರ ಇಲಾಖೆ; ಇಲ್ಲಿದೆ ಮಾಹಿತಿ
ಕಾಂಗ್ರೆಸ್ ಸರ್ಕಾರದ ಐದು ಸ್ಕೀಮ್ ಗಳ ಉಪಯೋಗ ಪಡೆದುಕೊಳ್ಳಲು ರೇಷನ್ ಕಾರ್ಡ್ ಕಡ್ಡಾಯವಾಗಿದೆ. ಹೀಗಾಗಿ ಬಿಪಿಎಲ್ ಕಾರ್ಡ್ ಗಳಲ್ಲಿ ಹೊಸದಾಗಿ ಹೆಸರುಗಳನ್ನ ಸೇರಿಸುವವರು ಹಾಗೂ ತಿದ್ದುಪಡಿ ಮಾಡಿಸುವವರ ಸಂಖ್ಯೆ ಜಾಸ್ತಿಯಾಗಿದೆ. ಹೀಗಾಗಿ ಆಹಾರ ಇಲಾಖೆ ಮೂರು ತಿಂಗಳಿನಿಂದ ರೇಷನ್ ಕಾರ್ಡ್ ಗಳ ತಿದ್ದಪಡಿಗೆ ಅವಕಾಶ ಮಾಡಿಕೊಟ್ಟಿದೆ. ಸದ್ಯ ಕಳೆದ ಎರಡು ತಿಂಗಳಲ್ಲಿ ಮೂರು ದಿನ ಎಲ್ಲಾ ಜಿಲ್ಲೆಗಳಲ್ಲಿ ತಿದ್ದಪಡಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದ್ರೆ ಸರ್ವಾರ್ ಬ್ಯುಸಿ ಬಂದ ಕಾರಣ ಸೂಕ್ತ ರೀತಿಯಲ್ಲಿ ತಿದ್ದುಪಡಿ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಜನರು ಗಂಟೆಗಟ್ಟಲೆ ಬೆಂಗಳೂರು ಒನ್ ಕೇಂದ್ರಗಳಲ್ಲಿ ಸುತ್ತಿ ಸುಸ್ತಾಗಿ ಹೋಗಿದ್ರು. ಹೀಗಾಗಿ ಆಹಾರ ಇಲಾಖೆಯ ಅಧಿಕಾರಿಗಳ ವಿರುದ್ದ ಆಕ್ರೋಶವನ್ನ ಕೂಡ ವ್ಯಕ್ತಪಡಿಸಿದ್ರು. ಇದೀಗಾ ಈ ತಿಂಗಳು ಮೊದಲ ವಾರದಲ್ಲಿ 3 ದಿನಗಳ ಕಾಲ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿತ್ತು. ಇದೀಗಾ ಮತ್ತೆ ಎರಡು ಸರ್ವರ್ ಗಳಲ್ಲಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ