ಬೆಂಗಳೂರು: ಮುಸ್ಲಿಂ ಧಾರ್ಮಿಕ ಶಿಕ್ಷಣ ಕೇಂದ್ರಗಳ ನಿಯಂತ್ರಣಕ್ಕೆ ಮಂಡಳಿ ರಚನೆ ಮಾಡಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಹೀಗಾಗಿ ರಾಜ್ಯದಲ್ಲಿ ಉತ್ತರ ಪ್ರದೇಶದ ಮಾದರಿಯಲ್ಲಿ ಕರ್ನಾಟಕ ಮದರಸಾ ಶಿಕ್ಷಣ ಮಂಡಳಿ ರಚಿನೆಯಾಗುತ್ತೆ ಎನ್ನಲಾಗುತ್ತಿದೆ. ಉತ್ತರ ಪ್ರದೇಶ, ಉತ್ತರಾಖಂಡ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮದರಸಾ ಶಿಕ್ಷಣ ಮಂಡಳಿ ರಚಿಸಿವೆ. ಅಲ್ಲಿನ ಮಂಡಳಿಗಳು ಈಗಾಗಲೇ ಮದರಸಾಗಳಲ್ಲಿನ ಶಿಕ್ಷಣ ಕೇಂದ್ರಗಳನ್ನು ನಿಯಂತ್ರಿಸುತ್ತಿವೆ. ಇದೇ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲೂ ಮದರಸಾ ಶಿಕ್ಷಣ ಮಂಡಳಿ ರಚನೆಗೆ ಸಿದ್ಧತೆಗಳು ನಡೆಯುತ್ತಿವೆ ಎನ್ನಲಾಗಿದೆ.
ಮಂಡಳಿ ರಚನೆ ಸಂಬಂಧ ಸಚಿವ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ಸಭೆ ನಡೆದಿದೆ. ಕೆ.ಆರ್.ಸರ್ಕಲ್ ಬಳಿಯ ಸಮಗ್ರ ಶಿಕ್ಷಣ ಇಲಾಖೆ ಕಟ್ಟಡದಲ್ಲಿ ಅಧಿಕಾರಿಗಳ ಜೊತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮದರಸಾಗಳಲ್ಲಿ ಪಠ್ಯ, ಬೋಧನೆ ಕುರಿತು ಗಂಭೀರ ಚರ್ಚೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಈಗಿನ ಪೈಪೋಟಿಗೆ ಮದರಸಾ ಮಕ್ಕಳು ಹೊಂದುಕೊಳ್ಳುತ್ತಿಲ್ಲ
ಇನ್ನು ಸಭೆ ಬಳಿಕ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಮದರಸಾಗಳ ಶಿಕ್ಷಣ ಸಂಬಂಧ ಹಲವು ದೂರುಗಳು ಬಂದಿವೆ. ಹಲವು ಮದರಸಾಗಳಿಗೆ ಇಲಾಖೆ ಅಧಿಕಾರಿಗಳನ್ನೇ ಒಳಬಿಡಲ್ಲ. ಮದರಸಾಗಳ ಶಿಕ್ಷಣದ ಬಗ್ಗೆ ಪರಿಶೀಲಿಸುತ್ತೇವೆ. ಮದರಸಾಗಳಲ್ಲಿ ಓದುತ್ತಿರುವ ಮಕ್ಕಳಿಗೆ ಈಗಿನ ಶಿಕ್ಷಣ ಸಿಗುತ್ತಿಲ್ಲ. ಈಗಿನ ಪೈಪೋಟಿಗೆ ಮದರಸಾ ಮಕ್ಕಳು ಹೊಂದುಕೊಳ್ಳುತ್ತಿಲ್ಲ. ಮದರಸಾಗಳ ವಿರುದ್ಧದ ಆರೋಪಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ ಎಂದರು.
ಎಷ್ಟು ಮದರಸಾಗಳಿವೆ, ಎಷ್ಟು ಅನುದಾನ ಪಡೆಯುತ್ತಿವೆ. ಆರ್ಟಿಇ ಶಿಕ್ಷಣ ಸಿಕ್ತಾ ಇದ್ಯೋ ಇಲ್ಲವೋ. ಫಾರ್ಮುಲ್ ಎಜುಕೇಷನ್ ಸಿಕ್ತಾ ಇದ್ಯೋ ಇಲ್ವೋ ಎಂಬ ಬಗ್ಗೆ ಸಭೆ ನಡೆಸಲಾಗಿದೆ. ಇನ್ನೂ ಪೂರ್ಣ ವಿವರ ತೆಗೆದುಕೊಳ್ಳಿ ಎಂದು ಹೇಳಿದ್ದೇನೆ. ಹೀಗಾಗಿ ಒಂದಿಷ್ಟು ಮಾಹಿತಿ ಬಂದ ಮೇಲೆ ಪೂರ್ಣ ವಿಚಾರ ಹೇಳಬೇಕಾಗುತ್ತದೆ. ಮುಂದೆ ಮದರಸಾ ನಡೆಸುವವರನ್ನು, ಅಧಿಕಾರಿಗಳ ಜೊತೆ ಸಭೆ ಮಾಡಲಾಗುತ್ತದೆ. ಅದಕ್ಕೂ ಮೊದಲು ವರದಿ ಬರಬೇಕು ಬಂದ ನಂತರ ಮುಂದಿನ ಸಭೆಯಲ್ಲಿ ತೀರ್ಮಾನ ಮಾಡಲಾಗುತ್ತದೆ. 15 ದಿನದಲ್ಲಿ ವರದಿ ನೀಡವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಹೇಳಲಾಗಿದೆ ಎಂದರು.
ಇದೇ ವೇಳೆ ಸಚಿವ ಬಿಸಿ ನಾಗೇಶ್, 3 ತಿಂಗಳಲ್ಲಿ ಶಾಲೆಗಳ ದಾಖಲೆಗಳ ಪರಿಶೀಲನೆ ಎಷ್ಟು ಆಗಿದೆ ಅನ್ನೋ ಚರ್ಚೆ ಆಗಿದೆ. 48 ಸಾವಿರ ಶಾಲೆಗಳಲ್ಲಿ 29 ಸಾವಿರ ಶಾಲೆಗಳ ದಾಖಲಾತಿ ಸರಿ ಇದೆ. 8 ಸಾವಿರ ಶಾಲೆಗಳದ್ದು ಇನ್ನೊಂದು ವಾರಗಳಲ್ಲಿ ದಾಖಲಾತಿ ಮುಗಿಯಲಿದೆ. ದಾನ ಕೊಟ್ಟಿರುವ, ಪ್ರೈವೇಟ್ ಶಾಲೆಗಳ ದಾಖಲೆ ಪರಿಶೀಲನೆ ಆಗ್ತಿದೆ.ಚಿಕ್ಕಪೇಟೆ ಶಾಲೆ ಈಗಲೂ ನಡಿತಿದೆ, ಸರ್ಕಾರ ಬಿಲ್ಡಿಂಗ್ ಲೀಸ್ ಗೆ ಕೊಟ್ಟಿತ್ತು. ಶಾಲೆಯ ದಾಖಲೆಗಳನ್ನು ಶಾಲೆ ಹೆಸರಿಗೆ ಮಾಡಿಸಲು ಡಿಸಿಗೆ ಪತ್ರ ಬರೆಯಲಾಗಿದೆ. ಬಿಲ್ಡಿಂಗ್ ಮಾಲೀಕರು ಅವರಿಗೇ ಮಾಡಿಕೊಡಲು ಪ್ರಪೋಸಲ್ ಇಟ್ಟಿದ್ದಾರೆ. ಕಂದಾಯ ಇಲಾಖೆ ಅಸ್ತಿತ್ವದಲ್ಲಿ ಪ್ರಾಪರ್ಟಿ ಇದೆ. ಅದು ಶಿಕ್ಷಣ ಇಲಾಖೆಯದ್ದೇ ಆಸ್ತಿ. ದಾನವಾಗಿ ಬಂದಿರೋ ಆಸ್ತಿ ಅದು, ನಮ್ಮತ್ರ ಸಾಕ್ಷಿ ಇದೆ ದಾಖಲೆ ಮಾಡಿಸಿಕೊಳ್ತೇವೆ ಎಂದರು.
Published On - 7:34 pm, Wed, 24 August 22