ಅತ್ಯಾಚಾರ ಸಂತ್ರಸ್ತೆಯನ್ನು ವಿವಾಹವಾದ ಪೋಕ್ಸೋ ಆರೋಪಿ; ಪ್ರಕರಣ ರದ್ದುಪಡಿಸಿ ಆದೇಶ ಹೊರಡಿಸಿದ ಹೈಕೋರ್ಟ್ ಏಕಸದಸ್ಯ ಪೀಠ
ಪೊಕ್ಸೊ ಕಾಯ್ದೆ ಆರೋಪಿ ಅತ್ಯಾಚಾರ ಸಂತ್ರಸ್ತೆಯನ್ನು ವಿವಾಹವಾಗಿದ್ದು, ಪ್ರಕರಣವನ್ನು ರದ್ದು ಪಡಿಸುವಂತೆ ಆರೋಪಿ ಹಾಗೂ ಸಂತ್ರಸ್ತೆ ಕೋರ್ಟಗೆ ಅರ್ಜಿ ಹಾಕಿದ್ದಾರೆ.
ಬೆಂಗಳೂರು: ಪೋಕ್ಸೋ ಕಾಯ್ದೆ (Pocso Act) ಆರೋಪಿ, ಅತ್ಯಾಚಾರ ಸಂತ್ರಸ್ತೆಯನ್ನು ವಿವಾಹವಾಗಿದ್ದು, ಈಗ ಪ್ರಕರಣವನ್ನು ರದ್ದು ಪಡಿಸುವಂತೆ ಆರೋಪಿ (Accused) ಹಾಗೂ ಸಂತ್ರಸ್ತೆ ಹೈಕೋರ್ಟಗೆ (Court) ಅರ್ಜಿ ಹಾಕಿದ್ದಾರೆ. 2019 ರಲ್ಲಿ ಯುವತಿಯ ತಂದೆ, ಆರೋಪಿ ವಿರುದ್ಧ ಅಪಹರಣ ಮತ್ತು ಪೊಕ್ಸೋ ಪ್ರಕರಣ ದಾಖಲಿಸಿದ್ದರು. ದೂರಿನ ಹಿನ್ನೆಲೆ ಆರೋಪಿ 18 ತಿಂಗಳು ಜೈಲಿನಲ್ಲಿದ್ದನು.
ಈಗ ಆರೋಪಿ ಮತ್ತು ಸಂತ್ರಸ್ತೆ ವಿವಾಹದ ಸರ್ಟಿಫಿಕೇಟ್ನ್ನು ಕೋರ್ಟಗೆ ಸಲ್ಲಿಸಿದ್ದಾರೆ. ಜೊತೆಗೆ ಆರೋಪಿಯನ್ನೇ ಮದುವೆಯಾಗಿ ಮಗುವಿಗೆ ಜನ್ಮ ನೀಡಿರುವುದಾಗಿ ಸಂತ್ರಸ್ತೆ ಪ್ರಮಾಣಪತ್ರವನ್ನು ಕೋರ್ಟಗೆ ಹಾಜರುಪಡಿಸಿದ್ದಾರೆ. ಹೀಗಾಗಿ ಪ್ರಕರಣವನ್ನು ರದ್ದು ಮಾಡುವಂತೆ ಕೋರ್ಟ್ಗೆ ಮನವಿ ಮಾಡಿದ್ದಾರೆ.
ಯುವತಿ ತಾನು ಅಪ್ರಾಪ್ತಳಾಗಿದ್ದಾಗ ಪ್ರೀತಿಸಿದ್ದಾಗಿ, ವಯಸ್ಕಳಾದ ನಂತರ ಆತನನ್ನೇ ವಿವಾಹವಾಗಿರುವುದಾಗಿ ಹೇಳಿಕೆ ನೀಡಿದ್ದಾಳೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಇಂಥ ಕೇಸ್ಗಳಲ್ಲಿ ಅತ್ಯಾಚಾರ ಆರೋಪ ಸಾಬೀತು ಪಡಿಸುವುದು ಕಷ್ಟ. ಪ್ರಕರಣ ಮುಂದುವರಿಸುವುದರಿಂದ ದಂಪತಿಗಳಿಗೆ ಅನ್ಯಾಯವಾಗಲಿದೆ. ಹೀಗಾಗಿ ಪ್ರಕರಣ ರದ್ದುಪಡಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ