ಕೃಷ್ಣಾ ನದಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನನ್ನು ಆಕಸ್ಮಿಕವಾಗಿ ರಕ್ಷಿಸಿದ ಸ್ಥಳೀಯರು
ನಾನು ಸೇತುವೆ ಮೇಲಿಂದ ಬಿದ್ದು ಸತ್ತರೆ ನನ್ನ ಶವ ಸಿಗುತ್ತದಾ ಎಂದು ಕೇಳಿ ಕಲ್ಲಪ್ಪ ನದಿಗೆ ಹಾರಲು ಮುಂದಾಗಿದ್ದ. ಈ ವೇಳೆ ಅಮೀನಸಾಬ್ ಇತರರು ಕಲ್ಲಪ್ಪನ ಕೈಕಾಲು ಕಟ್ಟಿ ನದಿಗೆ ಬೀಳದಂತೆ ತಡೆದಿದ್ದಾರೆ. ಬಳಿಕ, ಮಾಹಿತಿಯನ್ನು ಕೊಲ್ಹಾರ ಪೊಲೀಸರಿಗೆ ರವಾನಿಸಿದ್ದಾರೆ.
ವಿಜಯಪುರ: ಸೇತುವೆ ಮೇಲಿಂದ ಕೃಷ್ಣಾ ನದಿಗೆ ( krishna river) ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಯುವಕನನ್ನ (youth) ರಕ್ಷಿಸಲಾಗಿದೆ. ವಿಜಯಪುರ ಜಿಲ್ಲೆ ಕೊಲ್ಹಾರ ಬಳಿಯ ಕೃಷ್ಣಾ ನದಿಗೆ (kolhar in vijayapura) ಅಡ್ಡಲಾಗಿ ಕಟ್ಟಿರೋ ಮೂರು ಕಿಲೋ ಮೀಟರ್ ಉದ್ದದ ಸೇತುವೆ ಬಳಿ ಈ ಘಟನೆ ನಡೆದಿದೆ. ನದಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಕಲ್ಲಪ್ಪ ಪಾಟೀಲ್ ಎಂಬ ಯುವಕನನ್ನು ಅಮೀನಸಾಬ್ ಜಾಲಗಾರ ಹಾಗೂ ಇತರರು ಕಾಪಾಡಿದ್ದಾರೆ. ಕಲ್ಲಪ್ಪ, ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಗೌರಾ ಬಿ ಗ್ರಾಮದ ಯುವಕ.
ನಾನು ಸೇತುವೆ ಮೇಲಿಂದ ಬಿದ್ದು ಸತ್ತರೆ ನನ್ನ ಶವ ಸಿಗುತ್ತದಾ ಎಂದು ಕೇಳಿ ಕಲ್ಲಪ್ಪ ನದಿಗೆ ಹಾರಲು ಮುಂದಾಗಿದ್ದ. ಈ ವೇಳೆ ಅಮೀನಸಾಬ್ ಇತರರು ಕಲ್ಲಪ್ಪನ ಕೈಕಾಲು ಕಟ್ಟಿ ನದಿಗೆ ಬೀಳದಂತೆ ತಡೆದಿದ್ದಾರೆ. ಬಳಿಕ, ಮಾಹಿತಿಯನ್ನು ಕೊಲ್ಹಾರ ಪೊಲೀಸರಿಗೆ ರವಾನಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿ ಬಂದ ಕೊಲ್ಹಾರ ಪೊಲೀಸರು, ಕಾರ್ಯಾಚರಣೆ ನಡೆಸಿ ಕಲ್ಲಪ್ಪ ಪಾಟೀಲ್ ನನ್ನು ಕರೆದುಕೊಂಡು ಹೋದರು. ಆದರೆ ಪೊಲೀಸ್ ವಾಹನ ಹತ್ತಿಸೋ ವೇಳೆಯೂ ನಾ ಸಾಯಬೇಕು ಎಂದು ಯುವಕ ಕಣ್ಣೀರು ಹಾಕಿ ರಂಪಾಟ ಮಾಡಿದ್ದಾನೆ.
ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆಗೆ ಮುಂದಾಗಿದ್ದಾಗಿ ಕಲ್ಲಪ್ಪ ಪೊಲೀಸರ ಮುಂದೆ ಮಾಹಿತಿ ನೀಡಿದ್ದಾನೆ. ಕಲ್ಲಪ್ಪನ ರಕ್ಷಣೆ ಮಾಡಿದ ಅಮೀನಸಾಬ್ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ಸೂಚಿಸಿದ್ದಾರೆ. ಮುಂದೆ ಕೊಲ್ಹಾರ ಪೊಲೀಸರು ಕಲ್ಲಪ್ಪನ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಕುಟುಂಬದವರು ಬಂದ ಬಳಿಕ, ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಕುಟುಂಬದವರ ಜೊತೆಗೆ ಕಲ್ಲಪ್ಪನನ್ನು ಪೊಲೀಸರು ಕಳುಹಿಸಲಿದ್ದಾರೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕುಮಾರಧಾರಾ ನದಿಯಲ್ಲಿ ಮಳೆ ನೀರಿನಲ್ಲಿ ಸ್ನಾನಕ್ಕೆ ಇಳಿದು ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ:
ಮಂಗಳೂರು: ಕುಮಾರಧಾರಾ ನದಿಯಲ್ಲಿ ಮಳೆ ನೀರಿನಲ್ಲಿ ಸ್ನಾನಕ್ಕೆ ಇಳಿದು ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಸತತವಾಗಿ ನಾಲ್ಕು ದಿನದ ಕಾರ್ಯಚರಣೆ ಬಳಿಕ ಇಂದು ಬುಧವಾರ ಸಂಜೆ ಶವ ಪತ್ತೆಯಾಗಿದೆ. 25 ವರ್ಷದ ಮೃತ ಶಿವು ಮೂಲತಃ ಮಂಡ್ಯ ನಿವಾಸಿ. ಬೆಂಗಳೂರು ದೀಪಾಂಜಲಿ ನಗರದಲ್ಲಿ ವಾಸ ಮಾಡುತ್ತಿದ್ದ. ಶಿವು ತನ್ನ ಸ್ನೇಹಿತರ ಜೊತೆ ಕುಕ್ಕೆ ಸುಬ್ರಹ್ಮಣ್ಯ ಯಾತ್ರೆಗೆ ಬಂದಿದ್ದ. ಸುಮಾರು 15 ಜನ ನುರಿತ ಈಜುಗಾರರು, ಅಗ್ನಿಶಾಮಕ ದಳ, ಪೊಲೀಸರು, ಸ್ಥಳೀಯರು ಸೇರಿ ನಾಲ್ಕು ದಿನದಿಂದ ಹುಡುಕಾಟ ನಡೆಸಿದ್ದರು. ಶಿವು, ಆಗಸ್ 21 ರಂದು ನದಿ ನೀರಿನಲ್ಲಿ ಕೊಚ್ಚಿ ಕೊಂಡು ಹೋಗಿದ್ದ.
Published On - 8:34 pm, Wed, 24 August 22