ಸರ್ಕಾರದ ಸುಪರ್ದಿ ಸೇರುತ್ತಾ ಬಿಬಿಎಂಪಿ ಡಿಗ್ರಿ ಕಾಲೇಜ್​ಗಳು? ಪಾಲಿಕೆ ಆಯುಕ್ತರು ಕೊಟ್ರು ಸುಳಿವು

| Updated By: ಆಯೇಷಾ ಬಾನು

Updated on: Jan 10, 2024 | 3:16 PM

ಬಿಬಿಎಂಪಿ ವ್ಯಾಪ್ತಿಯ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರ ಕೊರತೆ, ನಿರ್ವಹಣೆಯ ನಿರ್ಲಕ್ಷ್ಯ ಸೇರಿ ವಿವಿಧ ಕಾರಣಗಳಿಂದ ಇತ್ತೀಚೆಗಷ್ಟೇ ಬಿಬಿಎಂಪಿ ಶಾಲೆ-ಪಿಯು ಕಾಲೇಜುಗಳನ್ನ ಸರ್ಕಾರದ ಸುಪರ್ದಿಗೆ ಪಡೆಯೋಕೆ ಡಿಸಿಎಂ ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ರು. ಅದರಂತೆ ಬಿಬಿಎಂಪಿ ನಿರ್ವಹಣೆಯಲ್ಲಿದ್ದ 142 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು, 17 ಪಿಯು ಕಾಲೇಜುಗಳನ್ನ ಸರ್ಕಾರ ಸುಪರ್ದಿಗೆ ಪಡೆಯೋ ನಿರ್ಧಾರವಾಗಿತ್ತು. ಇದೀಗ ಡಿಗ್ರಿ ಕಾಲೇಜುಗಳನ್ನ ಕೂಡ ತೆಕ್ಕೆಗೆ ಸೇರಿಸಿಕೊಳ್ಳೊ ಸುಳಿವು ಸಿಗ್ತಿದೆ.

ಸರ್ಕಾರದ ಸುಪರ್ದಿ ಸೇರುತ್ತಾ ಬಿಬಿಎಂಪಿ ಡಿಗ್ರಿ ಕಾಲೇಜ್​ಗಳು? ಪಾಲಿಕೆ ಆಯುಕ್ತರು ಕೊಟ್ರು ಸುಳಿವು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಜ.10: ಇತ್ತೀಚೆಗಷ್ಟೇ ಬಿಬಿಎಂಪಿಯ (BBMP) ಶಾಲಾ-ಕಾಲೇಜುಗಳನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದ ಸರ್ಕಾರ, ಮುಂದಿನ ಶೈಕ್ಷಣಿಕ ವರ್ಷದಿಂದ ಬಿಬಿಎಂಪಿಯ ಶಾಲೆ-ಪಿಯು ಕಾಲೇಜುಗಳನ್ನ ತನ್ನ ಸುಪರ್ದಿಗೆ ತೆಗೆದುಕೊಳ್ಳೋಕೆ ನಿರ್ಧರಿಸಿತ್ತು. ಇದೀಗ ಬಿಬಿಎಂಪಿ ವ್ಯಾಪ್ತಿಯ ಡಿಗ್ರಿ ಕಾಲೇಜುಗಳನ್ನ ಕೂಡ ಸರ್ಕಾರದ (Karnataka Government) ಸುಪರ್ದಿಗೆ ಒಪ್ಪಿಸೋಕೆ ಪಾಲಿಕೆ ತಯಾರಿ ನಡೆಸಿದೆ. ಸದ್ಯದಲ್ಲೇ ಉನ್ನತ ಶಿಕ್ಷಣ ಇಲಾಖೆ ಜೊತೆ ಚರ್ಚಿಸಲು ಸಜ್ಜಾಗಿರೋ ಪಾಲಿಕೆ, ಡಿಗ್ರಿ ಕಾಲೇಜುಗಳನ್ನ ಸೇರಿಸಿಕೊಳ್ಳಲು ಪ್ಲಾನ್ ಮಾಡಿದೆ.

ಬಿಬಿಎಂಪಿ ವ್ಯಾಪ್ತಿಯ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರ ಕೊರತೆ, ನಿರ್ವಹಣೆಯ ನಿರ್ಲಕ್ಷ್ಯ ಸೇರಿ ವಿವಿಧ ಕಾರಣಗಳಿಂದ ಇತ್ತೀಚೆಗಷ್ಟೇ ಬಿಬಿಎಂಪಿ ಶಾಲೆ-ಪಿಯು ಕಾಲೇಜುಗಳನ್ನ ಸರ್ಕಾರದ ಸುಪರ್ದಿಗೆ ಪಡೆಯೋಕೆ ಡಿಸಿಎಂ ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ರು. ಅದರಂತೆ ಬಿಬಿಎಂಪಿ ನಿರ್ವಹಣೆಯಲ್ಲಿದ್ದ 142 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು, 17 ಪಿಯು ಕಾಲೇಜುಗಳನ್ನ ಸರ್ಕಾರ ಸುಪರ್ದಿಗೆ ಪಡೆಯೋ ನಿರ್ಧಾರವಾಗಿತ್ತು. ಇದೀಗ ಡಿಗ್ರಿ ಕಾಲೇಜುಗಳನ್ನ ಕೂಡ ತೆಕ್ಕೆಗೆ ಸೇರಿಸಿಕೊಳ್ಳೊ ಸುಳಿವು ಸಿಗ್ತಿದೆ.

ಇದನ್ನೂ ಓದಿ:ಆದಾಯ ಹೆಚ್ಚಳಕ್ಕೆ ಬಿಬಿಎಂಪಿಯಿಂದ ಹೊಸ ಪ್ಲಾನ್; ತನ್ನ ವ್ಯಾಪ್ತಿಯ ಗುತ್ತಿಗೆ, ಲೀಜ್ ಆಸ್ತಿಗಳ ಮಾರಾಟಕ್ಕೆ ಪ್ಲಾನ್

ಸದ್ಯ ಬಿಬಿಎಂಪಿಯ ಶಾಲಾ-ಕಾಲೇಜುಗಳನ್ನ ಸರ್ಕಾರದ ಸುಪರ್ದಿಗೆ ನೀಡೋ ನಿರ್ಧಾರದಿಂದ ಈಗಾಗಲೇ ಬಿಬಿಎಂಪಿ ಶಾಲಾ-ಕಾಲೇಜುಗಳ ಹೊರಗುತ್ತಿಗೆ ಶಿಕ್ಷಕರು ಬೀದಿಗೆ ಬಿದ್ದಿದ್ದಾರೆ. ಇದರ ಮಧ್ಯೆ ಇದೀಗ ಉನ್ನತ ಶಿಕ್ಷಣ ಇಲಾಖೆಯ ಜೊತೆ ಚರ್ಚಿಸಿ ಬಿಬಿಎಂಪಿ ಡಿಗ್ರಿ ಕಾಲೇಜುಗಳನ್ನ ಕೂಡ ಸರ್ಕಾರದ ಸುಪರ್ದಿಗೆ ನೀಡೋಕೆ ಬಿಬಿಎಂಪಿ ಸಜ್ಜಾಗಿದೆ.

ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿರೋ 4 ಡಿಗ್ರಿ ಕಾಲೇಜುಗಳನ್ನ ಕೂಡ ಸರ್ಕಾರದ ಕೈಗೆ ನೀಡಲು ಪಾಲಿಕೆ ನಿರ್ಧಾರ ಮಾಡಿದೆ. ನಿರ್ವಹಣೆ, ಶೈಕ್ಷಣಿಕ ಗುಣಮಟ್ಟದ ಸುಧಾರಣೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಸಾಥ್ ನೀಡಲು ಪಾಲಿಕೆ ಕೂಡ ಸಜ್ಜಾಗಿದ್ದು, ಈ ಪ್ಲಾನ್ ಎಷ್ಟರಮಟ್ಟಿಗೆ ಫಲ ನೀಡುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ