ಸತ್ಯವತಿ ವರ್ಗಾವಣೆ, ಬಿಎಂಟಿಸಿ ಎಂಡಿಯಾಗಿ ಐಎಎಸ್‌ ಅಧಿಕಾರಿ ರಾಮಚಂದ್ರನ್ ನೇಮಕ

ಬಿಎಂಟಿಸಿ ಎಂಡಿ ಸತ್ಯವತಿ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಐಎಎಸ್‌ ಅಧಿಕಾರಿ ರಾಮಚಂದ್ರನ್ ಅವರನ್ನು ಬಿಎಂಟಿಸಿ ಎಂಡಿಯಾಗಿ ನೇಮಕ ಮಾಡಲಾಗಿದೆ.

ಸತ್ಯವತಿ ವರ್ಗಾವಣೆ,  ಬಿಎಂಟಿಸಿ ಎಂಡಿಯಾಗಿ ಐಎಎಸ್‌ ಅಧಿಕಾರಿ ರಾಮಚಂದ್ರನ್ ನೇಮಕ
ಜಿ. ಸತ್ಯವತಿ
Updated By: ರಮೇಶ್ ಬಿ. ಜವಳಗೇರಾ

Updated on: Jan 08, 2024 | 4:33 PM

ಬೆಂಗಳೂರು, (ಜನವರಿ. 8): ಬಿಎಂಟಿಸಿ ಎಂಡಿ (BMTC MD )ಸತ್ಯವತಿ ( G Satyavati)  ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಬಿಎಂಟಿಸಿ ಎಂಡಿಯಾಗಿ ಐಎಎಸ್‌ ಅಧಿಕಾರಿ ರಾಮಚಂದ್ರನ್ ಅವರನ್ನು ನೇಮಕ ಮಾಡಿದೆ. ಸತ್ಯವತಿ ವಿರುದ್ಧ ಸಾರಿಗೆ ಸಚಿವರಿಗೆ ಸಾಕಷ್ಟು ದೂರು ಬಂದಿತ್ತು. ಹೀಗಾಗಿ ಜಿ.ಸತ್ಯವತಿರನ್ನು ವರ್ಗಾವಣೆ ಮಾಡುವಂತೆ ಸಚಿವರಿಗೆ ಕೆಎಸ್‌ಆರ್‌ಟಿಸಿ ಸ್ಟಾಪ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ಮನವಿ ಮಾಡಿತ್ತು. ಈ ಆಧಾರದ ಮೇಲೆ ರಾಜ್ಯ ಸರ್ಕಾರ ಸತ್ಯವತಿ ಅವರಿಗೆ ಯಾವುದೇ ಹುದ್ದೆ ನೀಡದೆ ವರ್ಗಾವಣೆ ಮಾಡಿದೆ.

ಬಿಎಂಟಿಸಿ ಎಂಡಿ ಸತ್ಯವತಿ ವಿರುದ್ಧ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರಿಗೆ ಸಾಕಷ್ಟು ದೂರುಗಳು ಬಂದಿದ್ದವು. ಅಲ್ಲದೇ ಜಿ.ಸತ್ಯವತಿ ಅವರನ್ನು ವರ್ಗಾವಣೆ ಮಾಡುವಂತೆ ಕೆಎಸ್‌ಆರ್‌ಟಿಸಿ ಸ್ಟಾಪ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ಸಚಿವರಿಗೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ಸತ್ಯವತಿ ಅವರನ್ನು ಯಾವುದೇ ಹುದ್ದೆ ನೀಡದೇ ವರ್ಗಾವಣೆ ಮಾಡಿ ಆದೇಶಿಸಿದೆ. ಯಾವುದೇ ಹುದ್ದೆ ನೀಡದೇ ಸತ್ಯವತಿಯನ್ನ ವರ್ಗಾವಣೆ ಮಾಡಿದ ಸರ್ಕಾರ ಬಿಎಂಟಿಸಿಯ ನೂತನ ಎಂಡಿಯಾಗಿ ನೇಮಕವಾಗಿರುವ ರಾಮಚಂದ್ರನ್ ಆರ್ ಅವರು ಈ ಹಿಂದೆ ಬಿಬಿಎಂಪಿ ಸ್ಪೆಷಲ್ ಕಮೀಷನರ್ (ಚುನಾವಣಾ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

Published On - 4:08 pm, Mon, 8 January 24