ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಅಂತಿಮ ಪಟ್ಟಿ ಪ್ರಕಟ, 225 ವಾರ್ಡಗಳನ್ನು ಅಧಿಕೃತಗೊಳಿಸಿದ ಸರ್ಕಾರ
BBMP Wards Liist ರಾಜ್ಯ ಸರ್ಕಾರ ಕೊನೆಗೂ ಬಿಬಿಎಂಪಿಯ ಅಂತಿಮ ವಾರ್ಡ್ ಪಟ್ಟಿಯನ್ನು ಪ್ರಕಟಿಸಿದೆ. ಸಾರ್ವಜನಿಕರ ಆಕ್ಷೇಪಣೆ ಬಳಿಕ 225 ವಾರ್ಡಗಳನ್ನು ಅಂತಿಮಗೊಳಿಸಿ ಅಂತಿಮ ಅಧಿಸೂಚನೆ ಹೊರಡಿಸಿದೆ.
ಬೆಂಗಳೂರು, (ಸೆಪ್ಟೆಂಬರ್ 25): ಬಿಬಿಎಂಪಿ ಚುನಾವಣೆಗೆ(BBM Elections) ಕಾಂಗ್ರೆಸ್ ಸರ್ಕಾರ ತಯಾರಿ ನಡೆಸಿದ್ದು, ಇದೀಗ ವಾರ್ಡ್ ಪುನರ್ ವಿಂಗಡಣೆಯ ಅಂತಿಮ ಅಧಿಸೂಚನೆ ಹೊರಡಿಸಿದೆ. ಸಾರ್ವಜನಿಕ ಆಕ್ಷೇಪಣೆ ಬಳಿಕ 225 ವಾರ್ಡಗಳನ್ನು (BBMP Wards) ಅಧಿಕೃತಗೊಳಿಸಿ ಇಂದು (ಸೆಪ್ಟೆಂಬರ್ 25) ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ ಈ ಹಿಂದೆ ಬಿಜೆಪಿ(BJP) ಸರ್ಕಾರ ಮಾಡಿದ್ದ 243 ವಾರ್ಡ್ಗಳನ್ನು ಕಾಂಗ್ರೆಸ್ (Congress) ಸರ್ಕಾರ ಇದೀಗ 225ಕ್ಕೆ ಇಳಿಸಿದೆ. ಇದರೊಂದಿಗೆ 224 ವಾರ್ಡ್ಗಳಿಗೆ ಚುನಾವಣೆ ನಡೆಯಲಿದೆ.
ಅಂತಿಮಗೊಂಡ ಬಿಬಿಎಂಪಿ ವಾರ್ಡ್ಗಳು ಇಂತಿವೆ:
- ಕೆಂಪೇಗೌಡ ವಾರ್ಡ್ , ಚೌಡೇಶ್ವರಿ, ಅಟ್ಟೂರು. ಯಲಹಂಕ ಸ್ಯಾಟಲೈಟ್ ಟೌನ್, ಕೋಗಿಲು. ಜಕ್ಕೂರು
ಥಣಿಸಂದ್ರ. ಅಮೃತಹಳ್ಳಿ, ಹೆಬ್ಬಾಳ ಕೆಂಪಾಪುರ. ಬ್ಯಾಟರಾಯನಪುರ, ಕೊಡಿಗೇಹಳ್ಳಿ, ದೊಡ್ಡ, ಬೊಮ್ಮಸಂದ್ರ, ವಿದ್ಯಾರಣ್ಯಪುರ, ಕುವೆಂಪು ನಗರ, ಕಮ್ಮಗೊಂಡನಹಳ್ಳಿ, ಮಲ್ಲಸಂದ್ರ, ಚಿಕ್ಕಸಂದ್ರ, ಬಾಗಲಗುಂಟೆ, ಟಿ ದಾಸರಹಳ್ಳಿ, ನೆಲಗದರನಹಳ್ಳಿ. ಚೊಕ್ಕಸಂದ್ರ, ಪೀಣ್ಯ ಕೈಗಾರಿಕಾ ಪ್ರದೇಶ. ರಾಜಗೋಪಾಲನಗರ, ಹೆಗ್ಗನಹಳ್ಳಿ, ಸುಂಕದಕಟ್ಟೆ, ದೊಡ್ಡಬಿದರಕಲ್ಲು, ಲಿಂಗದೀರನಹಳ್ಳಿ, ಹೇರೋಹಳ್ಳಿ, ಉಲ್ಲಾಳು, ನಾಗದೇವನಹಳ್ಳಿ. ಬಂಡೆಮಠಕೆಂಗೇರಿ, ಹೆಮ್ಮಿಗೆಪುರ, ಜೆ.ಪಿ.ಪಾರ್ಕ್, ಯಶವಂತಪುರ., ಜಾಲಹಳ್ಳಿ, ಪೀಣ್ಯ, ಲಕ್ಷ್ಮೀದೇವಿ ನಗರ
ಲಗ್ಗೆರೆ, ಚೌಡೇಶ್ವರಿ ನಗರ, ಕೊಟ್ಟಿಗೆಪಾಳ್ಯ, ಶ್ರೀಗಂಧದ ಕಾವಲ್, ಮಲ್ಲತ್ತಹಳ್ಳಿ. ಜ್ಞಾನಭಾರತಿ, ರಾಜರಾಜೇಶ್ವರಿನಗರ, ರಾಜೀವ್ ನಗರ, ಡಾ,ಪುನೀತ್ ರಾಜ್ ಕುಮಾರ್, ಮಹಾಲಕ್ಷ್ಮೀ ಪುರಂ
ನಾಗಪುರ, ನಾಲ್ವಡಿ ಕೃಷ್ಣರಾಜ ಒಡೆಯರ್
ಶಂಕರಮಠ, ಶಕ್ತಿಗಣಪತಿ ನಗರ, ವೃಷಭಾವತಿನಗರ. ಮತ್ತಿಕೆರೆ, ಮಲ್ಲೇಶ್ವರಂ ಅರಮನೆ ನಗರ, ರಾಜಮಹಲ್ ಗುಟ್ಟಹಳ್ಳಿ ಕಾಡು ಮಲ್ಲೇಶ್ವರ. ಸುಬ್ರಹ್ಮಣ್ಯನಗರ, ಗಾಯಿತ್ರಿ ನಗರ, ರಾಧಾಕೃಷ್ಣ ದೇವಸ್ಥಾನ, ಸಂಜಯ ನಗರ, ಹೆಬ್ಬಾಳ, ವಿಶ್ವನಾಥ್ ನಾಗೇನಹಳ್ಳಿ,, ಮನೋರಾಯನಪಾಳ್ಯ, ಚಾಮುಂಡಿ ನಗರ, ಗಂಗಾ ನಗರ, ಜಯಚಾಮರಾಜೇಂದ್ರ ನಗರ, ಕಾವಲ್, ಬೈರಸಂದ್ರ, ಕುಶಾಲ್ ನಗರ, ಮುನೇಶ್ವರನಗರ, ದೇವರ ಜೀವನಹಳ್ಳಿ, ಎಸ್‌ಕೆ ಗಾರ್ಡನ್. ಸಗಾಯಪುರ ಪುಲಿಕೇಶಿ ನಗರ, ಹೆಣ್ಣೂರು, ನಾಗವಾರ, ಎಚ್‌ಬಿಆರ್ ಲೇಔಟ್, ಕಾಡುಗೊಂಡನಹಳ್ಳಿ, ಕಾಚರಕನಹಳ್ಳಿ, ಕಮ್ಮನಹಳ್ಳಿ., ಬಾಣಸವಾಡಿ. ಸುಬ್ಬಯ್ಯನಪಾಳ್ಯ, ಲಿಂಗರಾಜಪುರ, ಮಾರುತಿಸೇವಾ ನಗರ
ಚಳ್ಳಕೆರೆ, ಹೊರಮಾವು, ಕಲ್ಕೆರೆ., ವಿಜಿನಾಪುರ, ರಾಮಮೂರ್ತಿನಗರ, ಕೆಆರ್ ಪುರ, ಬಸವನಪುರ ದೇವಸಂದ್ರ, ಎ ನಾರಾಯಣಪುರ, ವಿಜ್ಞಾನ ನಗರ, ಎಚ್‌ಎಎಲ್ ವಿಮಾನ ನಿಲ್ದಾಣ, ಕಾಡುಗೋಡಿ ಬೆಳತ್ತೂರು, ಹೂಡಿ, ಬೈರತಿ, ಗರುಡಾಚಾರ್ ಪಾಳ್ಯ, ದೊಡ್ಡ ನೆಕ್ಕುಂಡಿ, ಎಇಸಿಎಸ್ ಲೇಔಟ್ , ವೈಟ್‌ಫೀಲ್ಡ್, ವರ್ತೂರು, ಮುನ್ನೆಕೊಳಲು,, ಮಾರತ್ತಹಳ್ಳಿ, ಬೆಳ್ಳಂದೂರು, ಕಾಕ್ಸ್ ಟೌನ್. ಬೆನ್ನಿಗಾನಹಳ್ಳಿ. ಸಿ ವಿ ರಾಮನ್ ನಗರ, ಕಗ್ಗದಾಸನಪುರ, ಹೊಸ ತಿಪ್ಪಸಂದ್ರ. ಹೊಯ್ಸಳ ನಗರ ಜೀವನಭೀಮ ನಗರ, ಕೊನೇನ ಅಗ್ರಹಾರ, ರಾಮಸ್ವಾಮಿ ಪಾಳ್ಯ ವಸಂತ ನಗರ ಸಂಪಂಗಿರಾಮನಗರ ಶಿವಾಜಿ ನಗರ ಭಾರತಿ ನಗರ ಹಲಸೂರು ದತ್ತಾತ್ರೇಯ ದೇವಸ್ಥಾನ ಗಾಂಧಿ ನಗರ ಸುಭಾಷ್ ನಗರ ಓಕಳೀಪುರಂ ಬಿನ್ನಿಪೇಟೆ ಕಾಟನ್‌ಪೇಟೆ ಚಿಕ್ಕಪೇಟೆ ದಯಾನಂದ ನಗರ ಪ್ರಕಾಶ ನಗರ ಶ್ರೀರಾಮ ಮಂದಿರ ಶಿವನಗರ ರಾಜಾಜಿನಗರ ಬಸವೇಶ್ವರ ನಗರ ಕಾಮಾಕ್ಷಿಪಾಳ್ಯ ಡಾ. ರಾಜ್ ಕುಮಾರ್ ಅಗ್ರಹಾರ ದಾಸರಹಳ್ಳಿ ಗೋವಿಂದರಾಜ ನಗರ ಮಾರೇನಹಳ್ಳಿ ಕಾವೇರಿ ಪುರ ಮೂಡಲಪಾಳ್ಯ ಮಾರುತಿ ಮಂದಿರ ವಾರ್ಡ್ ನಾಗರಬಾವಿ ಚಂದ್ರಾ ಲೇಔಟ್ ನಾಯಂಡಹಳ್ಳಿ ಕೆಂಪಾಪುರ ಅಗ್ರಹಾರ ವಿಜಯನಗರ ಹೊಸಹಳ್ಳಿ ಹಂಪಿ ನಗರ ಹೊಸ ಗುಡ್ಡದಹಳ್ಳಿ ಗಾಳಿ ಆಂಜನೇಯ ದೇವಸ್ಥಾನ ವಾರ್ಡ್ ಅತ್ತಿಗುಪ್ಪೆ ದೀಪಾಂಜಲಿ ನಗರ ಅವಲಹಳ್ಳಿ ಪಾದರಾಯನಪುರ ರಾಯಪುರಂ ದೇವರಾಜ ಅರಸು ನಗರ ಚಲವಾದಿಪಾಳ್ಯ ಕೆ ಆರ್ ಮಾರುಕಟ್ಟೆ ಚಾಮರಾಜಪೇಟೆ ಅಜಾದ್‌ನಗರ ಧರ್ಮರಾಯಸ್ವಾಮಿ ದೇವಸ್ಥಾನ ಸಿಲ್ವರ್ ಜ್ಯೂಬಿಲಿ ಪಾರ್ಕ್ ಸುಂಕೇನಹಳ್ಳಿ ವಿಶ್ವೇಶ್ವರಪುರಂ ಹೊಂಬೇಗೌಡನಗರ ಬಿ ವೆಂಕಟರೆಡ್ಡಿ ನಗರ ಶಾಂತಿನಗರ ಅಶೋಕ್ ನಗರ ನೀಲಸಂದ್ರ ವನ್ನಾರ್‌ಪೇಟ್ ಜೋಗುಪಾಳ್ಯ ದೊಮ್ಮಲೂರು ಅಗರಂ ಈಜಿಪುರ ಕೋರಮಂಗಲ ಜಕ್ಕಸಂದ್ರ ಆಡುಗೋಡಿ ಲಕ್ಕಸಂದ್ರ ಸುದ್ದಗುಂಟೆಪಾಳ್ಯ ಮಡಿವಾಳ ಸೋಮೇಶ್ವರ ದೇವಸ್ಥಾನ ಬಿಟಿಎಂ ಲೇಔಟ್ ಭೈರಸಂದ್ರ ಗುರಪ್ಪನಪಾಳ್ಯ ಜಯನಗರ ಪೂರ್ವ ಜೆ.ಪಿ.ನಗರ ಶಾಕಾಂಬರಿನಗರ ಸಾರಕ್ಕಿ ಯಡಿಯೂರು ಗಣೇಶ ಮಂದಿರ ದೇವಗಿರಿ ದೇವಸ್ಥಾನ ಬನಶಂಕರಿ ದೇವಸ್ಥಾನ ಕುಮಾರಸ್ವಾಮಿ ಲೇಔಟ್ ಪದ್ಮನಾಭನಗರ ಚಿಕ್ಕಕಲ್ಲಸಂದ್ರ ಹೊಸಕೆರೆಹಳ್ಳಿ ಗವಿಗಂಗಾಧರೇಶ್ವರ ಶ್ರೀನಗರ ದೊಡ್ಡ ಗಣಪತಿ ವಿದ್ಯಾಪೀಠ ಸ್ವಾಮಿ ವಿವೇಕಾನಂದ ಕತ್ರಿಗುಪ್ಪೆ ಉತ್ತರಹಳ್ಳಿ ಸುಬ್ರಮಣ್ಯಪುರ ವಸಂತಪುರ ಯಲಚೇನಹಳ್ಳಿ ಕೋಣನಕುಂಟೆ ಆರ್‌ಬಿಐ ಲೇಔಟ್ ಅಂಜನಾಪುರ ಗೊಟ್ಟಿಗೆರೆ ಕಾಳೇನ ಅಗ್ರಹಾರ ಬೇಗೂರು ನಾಗನಾಥಪುರ ಜರಗನಹಳ್ಳಿ ಪುಟ್ಟೇನಹಳ್ಳಿ ಬಿಳೇಕಹಳ್ಳಿ ಹುಳಿಮಾವು ಕೋಡಿಚಿಕ್ಕನಹಳ್ಳಿ ಬೊಮ್ಮನಹಳ್ಳಿ ಹೊಂಗಸಂದ್ರ ಗಾರೆಬಾವಿಪಾಳ್ಯ ಎಚ್‌ಎಸ್‌ಆರ್ ಲೇಔಟ್ ಇಬ್ಲೂರು ಮಂಗಮ್ಮನಪಾಳ್ಯ ಹೊಸ ರಸ್ತೆ ಕೂಡ್ಲು.
ಇದನ್ನೂ ಓದಿ: ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 243 ರಿಂದ 225ಕ್ಕೆ ಇಳಿಸಿದ ರಾಜ್ಯ ಸರ್ಕಾರ
ವಾರ್ಡ್‌ಗಳ ಸಂಖ್ಯೆಯನ್ನು 243ರಿಂದ 225ಕ್ಕೆ ಇಳಿಸಿ ಸರ್ಕಾರ ಆಗಸ್ಟ್ 4ರಂದು ಅಧಿಸೂಚನೆ ಹೊರಡಿಸಿತ್ತು. ಇದಾದ ಬಳಿಕ ಆಯೋಗ ವಾರ್ಡ್‌ಗಳ ಪುನರ್ ರಚಿಸಿ, ಗಡಿ ಗುರುತಿಸಿ ಕರಡು ವರದಿಯನ್ನು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿತ್ತು. ಬಳಿಕ ವಾರ್ಡ್ ವಿಂಗಡಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಆಕ್ಷೇಪಗಳಿದ್ದರೆ 15 ದಿನದೊಳಗೆ ಲಿಖಿತ ರೂಪದಲ್ಲಿ ನಗರಾಭಿವೃದ್ಧಿ ಇಲಾಖೆಯ ಮುಖ್ಯಕಾರ್ಯದರ್ಶಿಗೆ ಸಲ್ಲಿಸಲು ಕೋರಲಾಗಿತ್ತು.
243 ವಾರ್ಡ್ಗಳಿಂದ 225 ವಾರ್ಡ್ಗಳಿಗೆ ವಾಪ್ತಿ ಕಡಿತಗೊಳಿಸಿದ್ದು, ವಿಧಾನಸಭೆ ಕ್ಷೇತ್ರ ಲೆಕ್ಕಾದಲ್ಲಿ ಬಿಜೆಪಿ ಶಾಸಕರಿರುವ ಕ್ಷೇತ್ರದಲ್ಲಿ ವಾರ್ಡ್‌ಗಳ ಸಂಖ್ಯೆ ಕಡಿಮೆಯಾಗಿವೆ. ದಾಸರಹಳ್ಳಿ, ಯಲಹಂಕ,ಜಯನಗರ, ವಿಧಾನಸಭೆ ಕ್ಷೇತ್ರ ಹೊರತುಪಡಿಸಿದರೆ ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆ ಕಡಿತಗೊಳಿಸಲಾಗಿದೆ.
2021ರ ಜನವರಿ 29ರಂದು ಅಂದಿನ ಬಿಜೆಪಿ (BJP) ಸರ್ಕಾರ ಬಿಬಿಎಂಪಿಯ ವಾರ್ಡ್ (Ward) ಸಂಖ್ಯೆಯನ್ನು 198ರಿಂದ 243ಕ್ಕೆ ಏರಿಸಿ ಅಧಿಸೂಚನೆ ಹೊರಡಿಸಿತ್ತು. ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಅಧಿಸೂಚನೆಯನ್ನು ತಕ್ಷಣ ಜಾರಿಗೆ ಬರುವಂತೆ ಹಿಂಪಡೆದುಕೊಂಡಿತ್ತು.
Published On - 2:09 pm, Mon, 25 September 23