ನನ್ನ 91 ನೇ ಇಳಿವಯಸ್ಸಿನಲ್ಲಿ ಕರ್ನಾಟಕದ ಜನತೆಯನ್ನು ಉಳಿಸಲು ಹೋರಾಡುತ್ತಿದ್ದೇನೆ: ಹೆಚ್ ಡಿ ದೇವೇಗೌಡ

ನನ್ನ 91 ನೇ ಇಳಿವಯಸ್ಸಿನಲ್ಲಿ ಕರ್ನಾಟಕದ ಜನತೆಯನ್ನು ಉಳಿಸಲು ಹೋರಾಡುತ್ತಿದ್ದೇನೆ: ಹೆಚ್ ಡಿ ದೇವೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 25, 2023 | 3:04 PM

ಪತ್ರದ ಪ್ರತಿಯೊಂದನ್ನು ಹಿಡಿದು ನಗರದಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿದ ಹಿರಿಯ ಮುತ್ಸದ್ದಿ ತಾವು ಕಾವೇರಿ ಮಾತ್ರವಲ್ಲ ಮಹಾದಾಯಿ ನೀರಿಗಾಗಿ ಸಂಸತ್ತಿನ ಒಳಗೆ ಮತ್ತು ಹೊರಗಡೆ ನಡೆಸಿದ ಹೋರಾಟವನ್ನು ಪತ್ರಕರ್ತರಿಗೆ ಹೇಳುವಾಗ ತೀವ್ರ ಭಾವುಕರಾದರು. ಜೆಡಿಎಸ್ ಪಕ್ಷದ ಉದ್ದೇಶ ಅಧಿಕಾರಕ್ಕೆ ಬರೋದು, ಸರ್ಕಾರ ರಚಿಸೋದು ಅಲ್ಲ ಎಂದು ಅವರು ಹೇಳಿದರು.

ದಾವಣಗೆರೆ: ಕಾವೇರಿ ನದಿ ನೀರು ಹಂಚಿಕೆ (Cauvery River water distribution) ಬಿಕ್ಕಟ್ಟು ಪರಾಕಷ್ಠೆ ತಲುಪಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ (former PM HD Devegowda) ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ (PM Narendra Modi) ಪತ್ರವೊಂದನ್ನು ಬರೆದು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸುವಂತೆ ಕೋರಿದ್ದಾರೆ. ಪತ್ರದ ಪ್ರತಿಯೊಂದನ್ನು ಹಿಡಿದು ನಗರದಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿದ ಹಿರಿಯ ಮುತ್ಸದ್ದಿ ತಾವು ಕಾವೇರಿ ಮಾತ್ರವಲ್ಲ ಮಹಾದಾಯಿ ನೀರಿಗಾಗಿ ಸಂಸತ್ತಿನ ಒಳಗೆ ಮತ್ತು ಹೊರಗಡೆ ನಡೆಸಿದ ಹೋರಾಟವನ್ನು ಪತ್ರಕರ್ತರಿಗೆ ಹೇಳುವಾಗ ತೀವ್ರ ಭಾವುಕರಾದರು. ಜೆಡಿಎಸ್ ಪಕ್ಷದ ಉದ್ದೇಶ ಅಧಿಕಾರಕ್ಕೆ ಬರೋದು, ಸರ್ಕಾರ ರಚಿಸೋದು ಅಲ್ಲ, ತಾನು 91 ನೇ ವಯಸ್ಸಿನಲ್ಲಿ ಹೋರಾಟ ಮಾಡುತ್ತಿರೋದು ಕರ್ನಾಟಕದ ಜನತೆಯನ್ನು ಉಳಿಸಲು ಎಂದು ಹೇಳುವಾಗ ಗೌಡರು ಭಾವೋದ್ರಿಕ್ತರಾದರು. ತಮಿಳುನಾಡು ರಾಜ್ಯದ ರೈತರು ವರ್ಷಕ್ಕೆ ಮೂರು ಬೆಳೆಗಳನ್ನು ಬೆಳೆಯುತ್ತಾರೆ, ಅದರೆ ಕನ್ನಡದ ರೈತರು ಕೇವಲ ಒಂದು ಬೆಳೆಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೇವೇಗೌಡ ಹೇಳಿದರು. ಅವರ ಧ್ವನಿ ಗದ್ಗದಿತಗೊಂಡಿದ್ದರಿಂದ ಕೆಲ ಮಾತುಗಳು ಬಾಯಲ್ಲೇ ಉಳಿದುಬಿಟ್ಟವು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ