‘ಮುಂಡರಗಿ ಬರಪೀಡಿತ’ ಎಂದು ಘೋಷಿಸುವಂತೆ ಆಗ್ರಹಿಸಿ ಬಂದ್, ಎಪಿಎಂಸಿ ದಲ್ಲಾಳಿಗಳನ್ನು ತರಾಟೆಗೆ ತೆಗೆದುಕೊಂಡ ರೈತರು, ತಹಶೀಲ್ದಾರ ಕಚೇರಿಗೆ ಮುತ್ತಿಗೆ
Mundaragi Drought prone: ಸರ್ಕಾರ ಬರಪೀಡಿತ ಪಟ್ಟಿಯಿಂದ ಮುಂಡರಗಿ ತಾಲೂಕು ಕೈ ಬಿಟ್ಟ ಹಿನ್ನೆಲೆ ರಸ್ತೆಗಿಳಿದ ರೈತರು ತರಕಾರಿ ವ್ಯಾಪಾರಸ್ಥರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂದ್ ನಡುವೆ ಹಳೆ ಎಪಿಎಂಸಿ ತರಕಾರಿ ಮಾರ್ಕೆಟ್ ನಲ್ಲಿ ಭರ್ಜರಿ ವ್ಯಾಪಾರ ನಡೆದಿತ್ತು. ಆ ವೇಳೆ ದಲ್ಲಾಳಿಗಳು ರೈತರ ನಡುವೆ ತೀವ್ರ ವಾಗ್ವಾದ ನಡೆದಿದೆ. ಒಂದು ವಾರ ಮುಂಚೆಯೇ ಬಂದ್ ಘೋಷಣೆ ಮಾಡಿದ್ರೂ ಯಾಕೇ ಬಂದ್ ಮಾಡಿಲ್ಲ ಅಂತ ದಲ್ಲಾಳಿಗಳನ್ನು ರೈತರು ತರಾಟೆಗೆ ತೆಗೆದುಕೊಂಡಿದ್ದಾರೆ.
ಗದಗ, ಸೆಪ್ಟೆಂಬರ್ 25: ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಮುಂಡರಗಿ ತಾಲೂಕು ಕೈ ಬಿಟ್ಟ ಹಿನ್ನೆಲೆ ರೈತರು ಮುಂಡರಗಿ ಬಂದ್ ಕರೆಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಗದಗ ಜಿಲ್ಲೆ ಮುಂಡರಗಿ ಪಟ್ಟಣ ಸಂಪೂರ್ಣ ಸ್ತಬ್ಧವಾಗಿದೆ. ಬಂದ್ ಹಿನ್ನೆಲೆ ಬಸ್ ಗಳಿಲ್ಲದೇ ಬಿಕೋ ಅನ್ನುತ್ತಿದೆ ಬಸ್ ನಿಲ್ದಾಣ. ಬಸ್ ಗಳ ಸಂಚಾರವಿಲ್ಲದ ಪ್ರಯಾಣಿಕರು ಪರದಾಡುತ್ತಿದ್ದಾರೆ. ಕೊಪ್ಪಳ ಸೇರಿ ವಿವಿಧ ಊರುಗಳಿಗೆ ಹೋಗುವ ಮಹಿಳೆಯರು, ವೃದ್ಧರು, ಮಕ್ಕಳು ಪರದಾಡುತ್ತಿದ್ದಾರೆ. ಶಾಲೆ ಕಾಲೇಜುಗಳಿಗೆ ದಿಢೀರ ರಜೆ ಘೋಷಣೆ ಕಾರಣ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪರದಾಡುತ್ತಿದ್ದಾರೆ. ಬೆಳಗ್ಗೆ ಕಾಲೇಜ್ ಗೆ ಬಂದ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ವಾಪಸ್ ಹೋಗಲು ಬಸ್ ನಿಲ್ದಾಣದಲ್ಲಿ ನಿಂತಿದ್ದಾರೆ. ರಸ್ತೆಗಳು ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿವೆ. ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ವಿರುದ್ಧ ಆಕ್ರೋಶಗೊಂಡಿರುವ ರೈತರು ಕೂಡಲೇ ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
ಸರ್ಕಾರ ಬರಪೀಡಿತ ಪಟ್ಟಿಯಿಂದ ಮುಂಡರಗಿ ತಾಲೂಕು ಕೈ ಬಿಟ್ಟ ಹಿನ್ನೆಲೆ ರಸ್ತೆಗಿಳಿದ ರೈತರು ತರಕಾರಿ ವ್ಯಾಪಾರಸ್ಥರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂದ್ ನಡುವೆ ಹಳೆ ಎಪಿಎಂಸಿ ತರಕಾರಿ ಮಾರ್ಕೆಟ್ ನಲ್ಲಿ ಭರ್ಜರಿ ವ್ಯಾಪಾರ ನಡೆದಿತ್ತು. ಆ ವೇಳೆ ದಲ್ಲಾಳಿಗಳು ರೈತರ ನಡುವೆ ತೀವ್ರ ವಾಗ್ವಾದ ನಡೆದಿದೆ. ಒಂದು ವಾರ ಮುಂಚೆಯೇ ಬಂದ್ ಘೋಷಣೆ ಮಾಡಿದ್ರೂ ಯಾಕೇ ಬಂದ್ ಮಾಡಿಲ್ಲ ಅಂತ ದಲ್ಲಾಳಿಗಳನ್ನು ರೈತರು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಕೆಸಿಸಿ ಬ್ಯಾಂಕ್ ಗೆ ನುಗ್ಗಿದ ರೈತರು ಬಂದ್ ಮಾಡದ ಅಧಿಕಾರಿಗಳ ವಿರುದ್ಧವೂ ಆಕ್ರೋಶ ಹೊರಹಾಕಿದರು. ರೈತರ ಕೋಪಕ್ಕೆ ಅಧಿಕಾರಿಗಳು ಬ್ಯಾಂಕ್ ಬಂದ್ ಮಾಡಿದ್ದಾರೆ. ಮುಂಡರಗಿ ಪಟ್ಟಣದಲ್ಲಿ ರೈತರು ಬೈಕ್ ರಾಲಿ ಮೂಲಕ ಬಂದ್ ಮಾಡಿಸುತ್ತಿದ್ದಾರೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕನ್ನು ಬರ ಪೀಡಿತ ತಾಲೂಕು ಅಂತ ಘೋಷಣೆಗೆ ಒತ್ತಾಯಿಸಿ ಮುಂಡರಗಿ ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಲು ರೈತರು ಯತ್ನಿಸಿದ್ದಾರೆ. ಕೋಟೆ ಆಂಜನೇಯ ದೇವಸ್ಥಾನದಿಂದ ಬೃಹತ್ ಮೆರವಣಿಗೆ ನಡೆದಿದೆ. ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆದಿದೆ. ತಹಶೀಲ್ದಾರ ಕಚೇರಿ ಆವರಣಕ್ಕೆ ಎತ್ತುಗಳ ಸಮೇತ ನುಗ್ಗಿ ರೈತರು ಅಕ್ರೋಶ ಹೊರಹಾಕಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ