Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏನೇನೊ ‌ಭಾಗ್ಯ ಕೊಟ್ಟಿರಿ, ನೀರಿನ ಭಾಗ್ಯ ಬೇಡವೇ? ಹಾಸನ ಉಸ್ತುವಾರಿ ಸಚಿವ ರಾಜಣ್ಣ ವಿರುದ್ಧ ಮಾಜಿ ಶಾಸಕ ಲಿಂಗೇಶ್ ವಾಗ್ದಾಳಿ

ಏನೇನೊ ‌ಭಾಗ್ಯ ಕೊಟ್ಟಿರಿ, ನೀರಿನ ಭಾಗ್ಯ ಬೇಡವೇ? ಹಾಸನ ಉಸ್ತುವಾರಿ ಸಚಿವ ರಾಜಣ್ಣ ವಿರುದ್ಧ ಮಾಜಿ ಶಾಸಕ ಲಿಂಗೇಶ್ ವಾಗ್ದಾಳಿ

TV9 Web
| Updated By: ಸಾಧು ಶ್ರೀನಾಥ್​

Updated on: Sep 25, 2023 | 1:24 PM

ಹಾಸನ‌ ಜಿಲ್ಲೆಯ ಜನರಿಗೆ ಅನ್ಯಾಯ ಮಾಡಿ ನೀರು ಹರಿಸಲಾಗಿದೆ. ಏನೇನೊ ‌ಭಾಗ್ಯ ಕೊಟ್ಟಿರಿ, ನೀರಿನ ಭಾಗ್ಯ ಬೇಡವೇ? ಎಂದು ಸರ್ಕಾರದ ವಿರುದ್ಧ ಮತ್ತು ಹಾಸನ ಉಸ್ತುವಾರಿ ಸಚಿವ ರಾಜಣ್ಣ ವಿರುದ್ಧ ಮಾಜಿ ಶಾಸಕ ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ವಾಗ್ದಾಳಿ ನಡೆಸಿದ್ದಾರೆ.

ಹಾಸನ ತಾಲ್ಲೂಕಿನ ಹೇಮಾವತಿ ಜಲಾಶಯದ ಎದುರು ನಡೆಯುತ್ತಿರೊ ಪ್ರತಿಭಟನೆಯಲ್ಲಿ ಹಾಸನ ಉಸ್ತುವಾರಿ ಸಚಿವ ಎಲ್ಲಿದಿಯಪ್ಪಾ? ನೀರಾವರಿ ಸಲಹಾ ಸಮಿತಿ ಸಭೆ ಕರೆಯದೆ ಹೇಗಪ್ಪಾ ನೀರು ಬಿಟ್ರಿ? ನಿಮ್ಮ ಜಿಲ್ಲೆಗೆ ಹನ್ನೊಂದು ಟಿಎಂಸಿ ನೀರು ಬಿಟ್ಕೊಂಡ್ರಿ. ಹಾಸನ‌ ಜಿಲ್ಲೆಯ ಜನರಿಗೆ ಅನ್ಯಾಯ ಮಾಡಿ ನೀರು ಹರಿಸಲಾಗಿದೆ. ಏನೇನೊ ‌ಭಾಗ್ಯ ಕೊಟ್ಟಿರಿ, ನೀರಿನ ಭಾಗ್ಯ ಬೇಡವೇ? ಎಂದು ಸರ್ಕಾರದ ವಿರುದ್ಧ ಮತ್ತು ಹಾಸನ ಉಸ್ತುವಾರಿ ಸಚಿವ ರಾಜಣ್ಣ (Minister in charge of Hassan KN Rajanna) ವಿರುದ್ಧ ಮಾಜಿ ಶಾಸಕ ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ( Former MLA KS Lingesh) ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯಲ್ಲಿ ವರ್ಗಾವಣೆಯಲ್ಲಿ ಗೆಬರಿಕೊಂಡು ಆಯ್ತಲ್ಲ ಎಂದು ಕಾವೇರಿ ನೀರು ತಮಿಳುನಾಡಿಗೆ ಬಿಡದಂತೆ ಆಗ್ರಹಿಸಿ ಹೋರಾಟದಲ್ಲಿ ಮಾಜಿ ಶಾಸಕ ಲಿಂಗೇಶ್ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ