ಸಿದ್ದರಾಮಯ್ಯಗೆ ಜೀವಬೆದರಿಕೆ ಆರೋಪ: ಶಾಸಕ ಅಶ್ವತ್ಥ್​​ ನಾರಾಯಣ​​​​ಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್

|

Updated on: May 30, 2023 | 1:24 PM

ಸಿದ್ದರಾಮಯ್ಯಗೆ ಜೀವಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಬಿಜೆಪಿ ಶಾಸಕ ಅಶ್ವತ್ಥ್​​ ನಾರಾಯಣ​​​​ಗೆ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.

ಸಿದ್ದರಾಮಯ್ಯಗೆ ಜೀವಬೆದರಿಕೆ ಆರೋಪ: ಶಾಸಕ ಅಶ್ವತ್ಥ್​​ ನಾರಾಯಣ​​​​ಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್
Follow us on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜೀವಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಬಿಜೆಪಿ ಶಾಸಕ ಅಶ್ವತ್ಥ್​​ ನಾರಾಯಣ​​​​ಗೆ(BJP MLA CN Ashwath Narayan)  ಕರ್ನಾಟಕ ಹೈಕೋರ್ಟ್(Karnataka High Court)ಬಿಗ್ ರಿಲೀಫ್ ನೀಡಿದೆ. ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಅಶ್ವತ್ಥ್ ನಾರಾಯಣ ವಿರುದ್ಧ ಎಫ್ಐಆರ್​​​ಗೆ ತಡೆ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ಎಫ್ಐಆರ್ ರದ್ದು ಕೋರಿ ಬಿಜೆಪಿ ಶಾಸಕ ಅಶ್ವತ್ಥ್​​ ನಾರಾಯಣ ಅವರು ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು. ಇಂದು(ಮೇ,30) ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅಶ್ವತ್ಥ್ ನಾರಾಯಣ ವಿರುದ್ಧ ಎಫ್​ಐಆರ್​ಗೆ ತಡೆಯಾಜ್ಞೆ ನೀಡಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಸಿದ್ದರಾಮಯ್ಯಗೆ ಜೀವಬೆದರಿಕೆ ಆರೋಪ: FIR ರದ್ದು ಕೋರಿ ಹೈಕೋರ್ಟ್‌ ಮೊರೆ ಹೋದ ಅಶ್ವತ್ಥ್‌ ನಾರಾಯಣ

ಚುನಾವಣೆಯಲ್ಲಿ ಸೋಲಿಸಬೇಕೆಂಬ ರೀತಿಯಲ್ಲಿ ನೀಡಿದ ಹೇಳಿಕೆ ನೀಡಲಾಗಿತ್ತು. ಫೆಬ್ರವರಿ ತಿಂಗಳ ದೂರು ಸಂಬಂಧ ಎನ್​​​ಸಿಆರ್ ದಾಖಲಾಗಿತ್ತು. ಸರ್ಕಾರ ಬದಲಾದ ನಂತರ ಹೊಸ ದೂರು ನೀಡಲಾಗಿದೆ. ದುರುದ್ದೇಶ ಪೂರ್ವಕವಾಗಿ ಎಫ್ಐಆರ್ ದಾಖಲಿಸಲಾಗಿದೆ. ಮೇಲ್ನೋಟಕ್ಕೆ ಐಪಿಸಿ ಸೆಕ್ಷನ್153 ರಂತೆ ಅಪರಾಧವಾಗುವ ಅಂಶಗಳಿಲ್ಲ ಹೀಗಾಗಿ ಎಫ್​ಐಆರ್​ಗೆ ತಡೆ ನೀಡುವಂತೆ ಅಶ್ವತ್ಥ್ ನರಾಯಣ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದರು. ಇನ್ನು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲ, ಜಾಮೀನು ನೀಡಬಹುದಾದ ಪ್ರಕರಣವಾದ್ದರಿಂದ ತಡೆ ಬೇಡ ಎಂದು ವಾದಿಸಿದರು. ಈ ವಾದ ವಿವಾದ ಆಲಿಸಿದ ನ್ಯಾ.ಎಂ.ನಾಗಪ್ರಸನ್ನ ಅವರ ಪೀಠ ಎಫ್​ಐಆರ್​ಗೆ​ ತಡೆಯಾಜ್ಞೆ ನೀಡಿ ಆದೇಶಿಸಿದೆ.

ಇದನ್ನೂ ಓದಿ: ಅಶ್ವತ್ಥ ನಾರಾಯಣ ವಿರುದ್ಧದ ಪ್ರಕರಣ ಮೈಸೂರಿನಿಂದ ಮಂಡ್ಯಕ್ಕೆ ವರ್ಗಾವಣೆ

ಏನಿದು ಪ್ರಕರಣ?:

2023ರ ಫೆ.15ರಂದು ಮಂಡ್ಯದ ಸಾತನೂರಿನ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅಂದು ಸಚಿವರಾಗಿದ್ದ ಅಶ್ವತ್ಥನಾರಾಯಣ ((Dr CN ashwath naryana)) ಅವರು, ಟಿಪ್ಪುವನ್ನು ಉರಿಗೌಡ-ನಂಜೇಗೌಡರು(Urigowda Nanjegowda) ಮುಗಿಸಿದಂತೆ ಸಿದ್ದರಾಮಯ್ಯ(Siddaramaiah) ಅವರನ್ನು ಹೊಡೆದುಹಾಕಿ ಎಂದು ಹೇಳಿಕೆ ನೀಡಿದ್ದರು. ಈ ಸಂಬಂಧ ಮೈಸೂರಿನ ಕೆಪಿಸಿಸಿ ವಕ್ತಾರ ಲಕ್ಷ್ಮಣ್‌ ಅವರು ಫೆ.17ರಂದು ದೂರು ನೀಡಿದ್ದರು. ಆ ದೂರು ಆಧರಿಸಿ ಮ. 24ರಂದು ಮೈಸೂರಿನ ದೇವರಾಜ ಠಾಣಾ ಪೊಲೀಸರು, ಕ್ರಿಮಿನಲ್‌ ಬೆದರಿಕೆ ಹಾಗೂ ಗಲಭೆಗೆ ಪ್ರಚೋದನೆ ನೀಡಿದ ಅಪರಾಧ ಸಂಬಂಧ ಎಫ್‌ಐಆರ್‌ ದಾಖಲಿಸಿದ್ದರು. ಆ ನಂತರ ಪ್ರಕರಣವನ್ನು ಮಂಡ್ಯ ಠಾಣೆಗೆ ವರ್ಗಾಯಿಸಲಾಗಿತ್ತು.

Published On - 1:04 pm, Tue, 30 May 23