AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಲಿಂಡರ್​​ ಸಮಸ್ಯೆ: ಸಂಕಷ್ಟಕ್ಕೆ ಸಿಲುಕಿ ಹೋಟೆಲ್​​ಗಳನ್ನೇ ಮಾರಲು ಮುಂದಾದ ಮಾಲೀಕರು!

ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದಾಗಿ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆ ಕರ್ನಾಟಕದ ಹೋಟೆಲ್ ಉದ್ಯಮಕ್ಕೆ ಭಾರಿ ಸಂಕಷ್ಟ ತಂದಿದೆ. ವಾಣಿಜ್ಯ ಸಿಲಿಂಡರ್‌ಗಳ ಅಭಾವದಿಂದ ಹೋಟೆಲ್‌ಗಳು ಮೆನು ಕಡಿತಗೊಳಿಸಿ, ಗ್ರಾಹಕರು ಮತ್ತು ಸಿಬ್ಬಂದಿಯನ್ನು ಕಳೆದುಕೊಂಡಿವೆ. ಬೆಂಗಳೂರಿನಲ್ಲಿ ಮಾಲೀಕರು 20-25 ಹೋಟೆಲ್​​ಳನ್ನು ಮಾರಾಟ ಮಾಡಲು ಮುಂದಾಗಿದ್ದು, ರಾಜ್ಯದಾದ್ಯಂತ ಹಲವು ಹೋಟೆಲ್‌ಗಳು ಭಾರಿ ನಷ್ಟ ಅನುಭವಿಸುತ್ತಿವೆ.

ಸಿಲಿಂಡರ್​​ ಸಮಸ್ಯೆ: ಸಂಕಷ್ಟಕ್ಕೆ ಸಿಲುಕಿ ಹೋಟೆಲ್​​ಗಳನ್ನೇ ಮಾರಲು ಮುಂದಾದ ಮಾಲೀಕರು!
ಸಾಂದರ್ಭಿಕ ಚಿತ್ರImage Credit source: livemint.com
ವಿನಯ್​ ಕಾಶಪ್ಪನವರ್​
| Edited By: |

Updated on: Mar 30, 2026 | 1:35 PM

Share

ಬೆಂಗಳೂರು, ಮಾರ್ಚ್​​ 30: ಮಧ್ಯಪ್ರಾಚ್ಯದಲ್ಲಿ ಯುದ್ಧ ಭಾರತ ಸೇರಿ ಜಗತ್ತಿನ ಬಹುತೇಕ ರಾಷ್ಟ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಕಮರ್ಷಿಯಲ್​​ ಸಿಲಿಂಡರ್​​ಗಳ ಅಭಾವದಿಂದಾಗಿ ಕರ್ನಾಟಕವೂ ಸೇರಿ ನಾನಾ ರಾಜ್ಯಗಳು ಹೆಚ್ಚಿನ ಪ್ರಮಾಣದ ತೊಂದರೆಯನ್ನು ಅನುಭವಿಸುತ್ತಿವೆ. ಇದರ ನೇರ ಎಫೆಕ್ಟ್​​ ಹೋಟೆಲ್​​ ಉದ್ಯಮಕ್ಕೆ ಆಗಿದ್ದು, ರಾಜ್ಯದ ಬಹುತೇಕ ಹೋಟೆಲ್​​ಗಳ ಮಾಲಕರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಕೆಲವರು ಹೋಟೆಲ್​​ಗಳ ಬಾಗಿಲು ಕ್ಲೋಸ್​​ ಮಾಡಿದ್ದರೆ, ಇನ್ನು ಕೆಲವರು ಕೆಲ ಸಮಯ ಅಥವಾ ಮೆನು ಕಡಿತ ಮಾಡಿ ಗ್ರಾಹಕರಿಗೆ ಸೇವೆ ನೀಡುತ್ತಿದ್ದಾರೆ. ಸಿಲಿಂಡರ್​​ ಸಮಸ್ಯೆ ಬಗೆಯರಿಯಬಹುದೆಂಬ ನಿರೀಕ್ಷೆ ಸದ್ಯಕ್ಕೆ ಬಹುತೇಕ ಹುಸಿಯಾಗಿರುವ ಕಾರಣ, ಕೆಲ ಮಾಲಕರು ಅನ್ನ ನೀಡುತ್ತಿದ್ದ ಹೋಟೆಲ್​​ಗಳನ್ನೇ ಮಾರಲು ಮುಂದಾಗಿದ್ದಾರೆ.

ಎಲ್​ಪಿಜಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊರತೆ ಹಿನ್ನೆಲೆ ಹೋಟೆಲ್​​ ನಡೆಸಲು ಸಾಧ್ಯವಾಗದ ಕಾರಣ ಬೆಂಗಳೂರಿನ 20ರಿಂದ 25 ಹೋಟೆಲ್​ಗಳ ಮಾಲೀಕರು ಅವುಗಳನ್ನು ಮಾರಲು ಮುಂದಾಗಿದ್ದಾರೆ ಎಂದು ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ. ಸಣ್ಣ ಮತ್ತು ಮಧ್ಯಮ ಹೋಟೆಲ್ ಮಾಲೀಕರಿಗೆ ಭಾರಿ ಸಂಕಷ್ಟಕ್ಕೆ ಸಿಲುಕಿದ್ದು, ಬೆಂಗಳೂರಲ್ಲೇ ಶೇ.25ರಷ್ಟು ಹೋಟೆಲ್​ಗಳ ಮಾರಾಟಕ್ಕೆ ಚಿಂತನೆ ನಡೆದಿದೆ. ಸಿಲಿಂಡರ್ ಸಿಗದೆ ಹೋಟೆಲ್ ಮಾಲೀಕರು ಮೆನು ಕಡಿತಗೊಳಿಸಿದ ಕಾರಣಕ್ಕೆ ಗ್ರಾಹಕರ ಸಂಖ್ಯೆ ಇಳಿಕೆಯಾಗಿದೆ. ದೋಸೆ ಕೌಂಟರ್ ಕೂಡ ಬಂದ್ ಆಗಿದ್ದರಿಂದ ಗ್ರಾಹಕರು ಬರ್ತಿಲ್ಲ. ಮತ್ತೊಂದೆಡೆ ಹೋಟೆಲ್​ ಉದ್ಯಮ ಕುಸಿತ ಹಾಗೂ ಕೆಲಸ ಕಡಿಮೆ ಇರುವ ಹಿನ್ನೆಲೆ ಸಿಬ್ಬಂದಿಯೂ ತಮ್ಮ ಊರುಗಳಿಗೆ ತೆರಳಿದ್ದಾರೆ. ಈ ಎಲ್ಲ ಕಾರಣಗಳಿಂದ ಕೆಲವರು ಹೋಟೆಲ್​​ ಮುಚ್ಚುವ ನಿರ್ಧಾರ ಮಾಡರೋದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್​​; ಏರಿಕೆಯಾಗುತ್ತಾ ನಂದಿನಿ ಉತ್ಪನ್ನಗಳ ಬೆಲೆ?

ಕಾಳ ಸಂತೆಯಲಿ ಗ್ಯಾಸ್ ಸಿಲಿಂಡರ್ ಮಾರಾಟಕ್ಕೆ ಕಿಡಿ

ಸಿಲಿಂಡರ್​​ಗಳ ಅಭಾವದಿಂದಾಗಿ ಕಲಬುರಗಿಯಲ್ಲಿ ಹೋಟೆಲ್​​ ನಡೆಸೋದು ಕಷ್ಟ ಎಂಬ ಸ್ಥಿತಿ ಉದ್ಭವಿಸಿದೆ. ಹೀಗಿದ್ದರೂ ಗ್ಯಾಸ್​​ ಏಜೆನ್ಸಿಗಳು ದುಬಾರಿ ಹಣ ಪಡೆದುಕೊಂಡು ಕಾಳ ಸಂತೆಯಲ್ಲಿ ಅವುಗಳನ್ನು ಮಾರುತ್ತಿದ್ದಾರೆ ಎಂದು ಹೋಟೆಲ್, ಬೇಕರಿ ಮತ್ತು ವಸತಿಗೃಹ ಮಾಲೀಕರ ಸಂಘ ಅಲವತ್ತುಕೊಂಡಿದೆ. ಹೋಟೆಲ್​​ಗಳಿಗೆ ಮೀಸಲಿಟ್ಟ ಸಿಲಿಂಡರ್​​ಗಳನ್ನು ಈ ರೀತಿ ಮಾರಾಟ ಮಾಡಿದರೆ ನಮ್ಮ ಕತೆ ಏನು ಎಂದು ಪ್ರಶ್ನಿಸಿರುವ ಸಂಘ, ಜಿಲ್ಲಾಡಳಿತ ಕೂಡಲೇ ಸಮಸ್ಯೆ ಪರಿಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ವಿನಯ್​ ಕಾಶಪ್ಪನವರ್​
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
ಹುಚ್ಚರನ್ನು ಜೈಲಿಗೆ ಹಾಕ್ತಾರಾ? ಪ್ರಕಾಶ್ ರಾಜ್​ಗೆ ಪ್ರತಾಪ್ ಸಿಂಹ ತಿರುಗೇಟು
ಹುಚ್ಚರನ್ನು ಜೈಲಿಗೆ ಹಾಕ್ತಾರಾ? ಪ್ರಕಾಶ್ ರಾಜ್​ಗೆ ಪ್ರತಾಪ್ ಸಿಂಹ ತಿರುಗೇಟು
ಬಡ ರೋಗಿಗಳಿಗೆ ಸಿಗಬೇಕಿದ್ದ ಸರ್ಕಾರಿ ಮಾತ್ರೆಗಳು ಅರಣ್ಯ ಪಾಲು
ಬಡ ರೋಗಿಗಳಿಗೆ ಸಿಗಬೇಕಿದ್ದ ಸರ್ಕಾರಿ ಮಾತ್ರೆಗಳು ಅರಣ್ಯ ಪಾಲು
ಸಾಲ ಮಂಜೂರಾಗುವ ಯೋಗವಿದೆ ಈ ರಾಶಿಗೆ
ಸಾಲ ಮಂಜೂರಾಗುವ ಯೋಗವಿದೆ ಈ ರಾಶಿಗೆ
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ