ಬೆಂಗಳೂರು, ಅ.08: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ‘ಪಲ್ಲಕಿ’ (ಸಂತೋಷವು ಪ್ರಯಾಣಿಸುತ್ತಿದೆ) ಹೆಸರಿನ ಹೊಸ ಬಸ್ ಸೇವೆಯನ್ನು ಹೊರತಂದಿದೆ. ಕೆಎಸ್ಆರ್ಟಿಸಿ ನಿಗಮ ಹೊಸದಾಗಿ 40 ನಾನ್ ಏಸಿ ಸ್ಲೀಪರ್ ಬಸ್ ಗಳನ್ನ ಖರೀದಿ ಮಾಡಿದ್ದು , ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೂತನ ಬಸ್ ಗಳಿಗೆ ಚಾಲನೆ ನೀಡಿದ್ದಾರೆ. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಗಳ ಮೇಲೆ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಕೆಎಸ್ಆರ್ಟಿಸಿ ಎಂಡಿ ಅನ್ಬು ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ರು.
ಕೆಎಸ್ಆರ್ಟಿಸಿ ಹೊಸದಾಗಿ ಖರೀದಿ ಮಾಡಿರುವ ನಾನ್ ಏಸಿ ಸ್ಲೀಪರ್ ಬಸ್ ಗಳಿಗೆ ಪಲ್ಲಕ್ಕಿ ಎಂದು ಹೆಸರಿಡಲಾಗಿದ್ದು ದೂರದ ಜಿಲ್ಲೆಗಳಿಗೆ ಸಂಚರಿಸಲಿವೆ. 6 ರಿಂದ 8 ಗಂಟೆಗಳ ಜರ್ನಿ ಇರುವ ಜಿಲ್ಲೆಗಳಿಗೆ 30 ಬಸ್ ಗಳು ಹಾಗೂ ಹೊರ ರಾಜ್ಯಕ್ಕೆ 10 ಬಸ್ ಗಳನ್ನ ಕಾರ್ಯಾಚರಣೆ ಮಾಡಲಾಗುತ್ತದೆ. ಇಲ್ಲಿಯವರೆಗೂ ಕೆಎಸ್ಆರ್ಟಿಸಿ ಸ್ಲೀಪರ್ ಬಸ್ ಗಳಿಗೆ ಯಾವುದೇ ಬ್ರ್ಯಾಂಡ್ ಇರಲಿಲ್ಲ. ಸದ್ಯ ನಿಗಮ ಖರೀದಿ ಮಾಡಿರುವ ಹೊಸ ಬಸ್‌ಗಳಿಗೆ ಪಲ್ಲಕ್ಕಿ ಎಂದು ಹೆಸರಿಟ್ಟು ನಾಮಕರಣ ಮಾಡಲಾಗಿದೆ. ಪಲ್ಲಕ್ಕಿ ಬ್ರ್ಯಾಂಡ್ ಬಸ್‌ಗಳು ರಾಜ್ಯದ ಜನರಿಗೆ ಸೇವೆ ನೀಡಲು ರಸ್ತೆಗಿಳಿದಿವೆ.
“Pallakki”
KSRTC’s new non-AC sleeper bus😍😍pic.twitter.com/vBfswJE5MG
— Karnataka Development Index (@IndexKarnataka) October 5, 2023
ಸಾರಿಗೆ ಇಲಾಖೆ 40 ಪಲ್ಲಕ್ಕಿ ಸ್ಲೀಪರ್ ಬಸ್ ಗಳು ಸೇರಿ ಒಟ್ಟು 140 ಬಸ್ ಗಳನ್ನ ಖರೀದಿ ಮಾಡಿದ್ದು ನೂರು ಕರ್ನಾಟಕ ಸಾರಿಗೆ ಸಾಮಾನ್ಯ ಬಸ್ ಗಳು ಹಾಗೂ 40 ಪಲ್ಲಕ್ಕಿ ಬಸ್ ಗಳು ಕಾರ್ಯಾಚರಣೆ ಆರಂಭಿಸಿವೆ. ಉಳಿದ ಬಸ್ ಗಳನ್ನ ಪರೀಕ್ಷಾರ್ಥ ಸಂಚಾರ ನಡೆಸಿ ನಂತರ ಪ್ರಯಾಣಿಕರ ಸೇವೆಗೆ ನೀಡಲಾಗುತ್ತದೆ. ಒಟ್ನಲ್ಲಿ ಶಕ್ತಿ ಯೋಜನೆಯಿಂದ ಗೆದ್ದು ಬೀಗುತ್ತಿರುವ ಸಾರಿಗೆ ಇಲಾಖೆ , ಮತ್ತಷ್ಟು ಸ್ಟ್ರಾಂಗ್ ಆಗಲು ಹೊಸ ಹೊಸ ಬಸ್ ಗಳ ಖರೀದಿಗೆ ಮುಂದಾಗಿದ್ದು, ಈ ಮೂಲಕ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ಮುಂದಾಗಿದೆ. ಒಂದು ಪಲ್ಲಕ್ಕಿ ಬಸ್ ಬೆಲೆ 45 ಲಕ್ಷ ರುಪಾಯಿ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:56 pm, Sun, 8 October 23