ಜಾತಿ ಗಣತಿ ವರದಿ ಸ್ವೀಕರಿಸಿರಲಿಲ್ಲ ಎನ್ನುವ ಸಿದ್ದರಾಮಯ್ಯ ಆರೋಪಕ್ಕೆ ಕುಮಾರಸ್ವಾಮಿ ತಿರುಗೇಟು!

ಬಿಹಾರದಲ್ಲಿ ಜಾತಿಗಣತಿ ವರದಿ ಬಹಿರಂಗವಾಗಿದ್ದೇ ಆಗಿದ್ದು, ದೇಶದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ದೇಶವ್ಯಾಪಿ ಜಾತಿಗಣತಿಗೆ ಆಗ್ರಹ ಶುರುವಾಗುವ ಸಾಧ್ಯತೆಗಳು ದಟ್ಟವಾಗುತ್ತಿದ್ದು, ಈ ಮಧ್ಯೆ ಕರ್ನಾಟಕದಲ್ಲೇ ಭಾರಿ ಜಾತಿಗಣತಿ ವರದಿ ಬಹಿರಂಗಕ್ಕೆ ಭಾರಿ ಒತ್ತಾಯಗಳು ಕೇಳಿಬರುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಪ್ರತಿಕ್ರಿಯಿಸಿ, ಮಾಜಿ ಸಿಎಂ ಕುಮಾರಸ್ವಾಮಿಯತ್ತ ಬಾಣಬಿಟ್ಟಿದ್ದರು. ಇದೀಗ ಸಿಎಂ ಬಾಣಕ್ಕೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಜಾತಿ ಗಣತಿ ವರದಿ ಸ್ವೀಕರಿಸಿರಲಿಲ್ಲ ಎನ್ನುವ ಸಿದ್ದರಾಮಯ್ಯ ಆರೋಪಕ್ಕೆ ಕುಮಾರಸ್ವಾಮಿ ತಿರುಗೇಟು!
ಸಿದ್ದರಾಮಯ್ಯ-ಕುಮಾರಸ್ವಾಮಿ
Follow us
Sunil MH
| Updated By: ರಮೇಶ್ ಬಿ. ಜವಳಗೇರಾ

Updated on: Oct 08, 2023 | 4:46 PM

ಬೆಂಗಳೂರು, (ಅಕ್ಟೋಬರ್ 8): ಈ ಹಿಂದೆ ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಕಾಂತರಾಜು ಅವರ ಜಾತಿ ಗಣತಿ ವರದಿಯನ್ನು(Karnataka caste census repor)  ಸ್ವೀಕರಿಸಿಲ್ಲ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಆರೋಪಕ್ಕೆ ಹೆಚ್​ಡಿ ಕುಮಾರಸ್ವಾಮಿ(HD Kumaraswamy) ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಇಂದು(ಭಾನುವಾರ) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಕಾಂತರಾಜು ವರದಿ ಕೊಡಿಸಿದ್ವಿ ಕುಮಾರ ಸ್ವಾಮಿ ಒಪ್ಪಿಲ್ಲ ಎಂದು ಹೇಳುತ್ತಾರೆ. ಕಾಂತರಾಜು ವರದಿಯನ್ನ ಸದಸ್ಯರು, ಕಾರ್ಯದರ್ಶಿ ಸಹಿಯಾಗದೆ ನಾನೇಗೆ ವರದಿ ಒಪ್ಪಲಿ ಎಂದು ಟಾಂಗ್ ಕೊಟ್ಟರು. ಅಲ್ಲದೇ ಸಮನ್ವಯ ಸಮಿತಿಯ ಅಧ್ಯಕ್ಷರು 14 ತಿಂಗಳಲ್ಲಿ ಯಾವತ್ತಾದ್ರು ಈ ಬಗ್ಗೆ ಮಾತಾಡುತ್ತಿದ್ರಾ? ಜಾತಿಗಣತಿ ಮುಖ್ಯವಲ್ಲ, ಎಲ್ಲ ಜಾತಿಯಲ್ಲಿರುವ ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ಜಾತ್ಯಾತೀತ ಪದ ತೆಗೆದುಹಾಕಿ ಎಂದು ಹೇಳುತ್ತಾರೆ. ಅದರ ಅರ್ಥವೇನು? ಜಾತ್ಯಾತೀತ ಅಂದರೆ ಜಾತಿಯ ವ್ಯವಸ್ಥೆ ತೆಗೆದುಹಾಕಬೇಕೆಂದು ಅಲ್ವಾ ? ಇವರು ಜಾತಿಗಣತಿ ಮಾಡಿ ಯಾವ ಪುರುಷಾರ್ಥ ಸಾಧನೆ ಮಾಡುತ್ತಾರೆ. ಇದರ ಉಪಯೋಗ ಏನು..? ಸಮಾಜ ಹೊಡೆಯಲು ಮಾಡುತ್ತಾರೋ? ಸಮಾಜದಲ್ಲಿ ವಿಶ್ವಾಸಕ್ಕೆ ಧಕ್ಕೆ ತರಲು ಮಾಡುತ್ತಾರೋ ? ಒಗ್ಗಟ್ಟು ತರಲು ಮಾಡುತ್ತೀರೋ ಮೊದಲು ಅದನ್ನ ತಿಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ನವೆಂಬರ್​ನಲ್ಲಿ ಜಾತಿ ಜನಗಣತಿ ವರದಿ ನನ್ನ ಕೈ ಸೇರಬಹುದು: ಸಿದ್ದರಾಮಯ್ಯ

ಅಷ್ಟಕ್ಕೂ ಸಿದ್ದರಾಮಯ್ಯ ಹೇಳಿದ್ದೇನು?

ಕರ್ನಾಟಕದಲ್ಲೂ ಜಾತಿಗಣತಿ ವರದಿ ಬಿಡುಗಡೆಗೆ ಒತ್ತಾಯ ಕುರಿತು ಬೆಳಗಾವಿಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಕಾಂತರಾಜು ವರದಿ ಸಿದ್ಧಪಡಿಸಿದ್ದರು. ಆದ್ರೆ ಆಗ ಸಿಎಂ ಆಗಿದ್ದ ಹೆಚ್​ಡಿಕೆಗೆ ವರದಿ ಕೊಡಲು ಹೋದ್ರೆ ಸ್ವೀಕರಿಸಲಿಲ್ಲ. ಆಗ ಸರ್ಕಾರದ ಕಾರ್ಯದರ್ಶಿ ಜಾತಿ ಗಣತಿ ವರದಿಗೆ ಸಹಿ ಮಾಡಲಿಲ್ಲ. ಈಗ ಇರುವ ಅಧ್ಯಕ್ಷರು ಆ ವರದಿಯನ್ನು ತಂದು ಕೊಡಬೇಕು ಎಂದು ಹೇಳಿದ್ದರು

ಜಾತಿ ಗಣತಿ, ಸಾಮಾಜಿಕ, ಆರ್ಥಿಕ ಸಮೀಕ್ಷೆಗೆ ನಾನೇ ಆದೇಶಿಸಿದ್ದೆ. ಕಾಂತರಾಜು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ರು. ನಮ್ಮ ಸರ್ಕಾರದ ಅವಧಿಯಲ್ಲಿ ವರದಿ ಪೂರ್ಣವಾಗಿರಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಹೆಚ್​.ಡಿ.ಕುಮಾರಸ್ವಾಮಿ ಆ ವರದಿ ಪಡೆಯಲಿಲ್ಲ. ನಂತರ ಬಿಜೆಪಿ ಸರ್ಕಾರ ಜಯಪ್ರಕಾಶ್ ಹೆಗಡೆರನ್ನು ನೇಮಿಸಿದ್ದು ಅವರು ವರದಿ ನೀಡಿಲ್ಲ, ಕಾರ್ಯದರ್ಶಿ ಸಹಿ ಮಾಡಿಲ್ವಂತೆ. ನಾನು ಒಂದು ಬಾರಿ ವರದಿ ಕೇಳಿದ್ದೆ, ಕೊಡ್ತೀನಿ ಅಂತೇಳಿ ಕೊಡಲಿಲ್ಲ. ಜಾತಿಗಣತಿಯ ವರದಿ ಕೊಟ್ಟರೆ ನೋಡೋಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ