ಬಿಜೆಪಿ, ಕಾಂಗ್ರೆಸ್ ಮಧ್ಯೆ ಶೀತಲ ಸಮರಕ್ಕೆ ಕಾರಣವಾಯ್ತಾ ನೇರಳೆ ಮಾರ್ಗ ಮೆಟ್ರೋ ಸಂಚಾರ?

ನಮ್ಮ ಮೆಟ್ರೋದ ನೇರಳೆ ಬಣ್ಣದ ಬಹು ನಿರೀಕ್ಷಿತ ಕೆಆರ್​ಪುರಂ-ಬೈಯಪ್ಪನಹಳ್ಳಿ ಮತ್ತು ಕೆಂಗೇರಿ-ಚಲ್ಲಘಟ್ಟ ಎರಡು ಮಾರ್ಗಗಳು ಅ. 09ರಿಂದ ಸಂಚಾರ ಆರಂಭಿಸಲಿವೆ. ಡಿಸಿಎಂ ಡಿಕೆ ಶಿವಕುಮಾರ್​ ನಾವು ಉದ್ಘಾಟನೆ ಮಾಡಲು ಸಿದ್ದರಿದ್ದೇವೆ ಎಂದಿದ್ದರೆ, ಆದರೆ ಬಿಜೆಪಿ ಸಂಸದರು ಬೇರೆಯದ್ದೇ ರಾಗ ಹೇಳುತ್ತಿದ್ದಾರೆ. ಹಾಗಾಗಿ ಇದು ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ತಿಕ್ಕಾಟಕ್ಕೆ ಕಾರಣವಾದಂತಿದೆ.

ಬಿಜೆಪಿ, ಕಾಂಗ್ರೆಸ್ ಮಧ್ಯೆ ಶೀತಲ ಸಮರಕ್ಕೆ ಕಾರಣವಾಯ್ತಾ ನೇರಳೆ ಮಾರ್ಗ ಮೆಟ್ರೋ ಸಂಚಾರ?
ನಮ್ಮ ಮೆಟ್ರೋImage Credit source: ANI
Follow us
Kiran Surya
| Updated By: ರಮೇಶ್ ಬಿ. ಜವಳಗೇರಾ

Updated on:Oct 09, 2023 | 11:28 AM

ಬೆಂಗಳೂರು, ಅಕ್ಟೋಬರ್​ 08: ನಮ್ಮ ಮೆಟ್ರೋದ ನೇರಳೆ ಬಣ್ಣ (Purple Line Metro) ದ ಬಹು ನಿರೀಕ್ಷಿತ ಕೆಆರ್​ಪುರಂ-ಬೈಯಪ್ಪನಹಳ್ಳಿ ಮತ್ತು ಕೆಂಗೇರಿ-ಚಲ್ಲಘಟ್ಟ ಎರಡು ಮಾರ್ಗಗಳು ಅ. 09ರಿಂದ ಸಂಚಾರ ಆರಂಭಿಸಲಿವೆ. ನಾಳೆಯಿಂದ ಸೇವೆಗಳನ್ನು ಆರಂಭಿಸುವಂತೆ ಕೇಂದ್ರ ಸರ್ಕಾರ ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಿದೆ. ಡಿಸಿಎಂ ಡಿಕೆ ಶಿವಕುಮಾರ್​ ನಾವು ಉದ್ಘಾಟನೆ ಮಾಡಲು ಸಿದ್ದರಿದ್ದೇವೆ ಎಂದಿದ್ದಾರೆ. ಆದರೆ ಯಾವುದೇ ಔಪಚಾರಿಕ ಹಾಗೂ ಅನೌಪಚಾರಿಕ ಕಾರ್ಯಕ್ರಮಗಳಿಗೆ ಕಾಯದೇ ಸೇವೆ ಆರಂಭಿಸುವಂತೆ ಬಿಜೆಪಿ ಸಂಸದರು ಪಟ್ಟುಹಿಡಿದಿದ್ದಾರೆ. ಆ ಮೂಲಕ ನಮ್ಮ ಮೆಟ್ರೋದ ನೇರಳೆ ಮಾರ್ಗ ಸಂಚಾರ ಒಂದು ರೀತಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ತಿಕ್ಕಾಟಕ್ಕೆ ಕಾರಣವಾದಂತಿದೆ.

ಈ ಕುರಿತಾಗಿ ಟ್ವೀಟ್​ ಮಾಡಿರುವ ಡಿಕೆ ಶಿವಕುಮಾರ್​ ಕೆ.ಆರ್.ಪುರಂನಿಂದ ಬೈಯಪ್ಪನಹಳ್ಳಿ ಮತ್ತು ಕೆಂಗೇರಿಯಿಂದ ಚಲ್ಲಘಟ್ಟದವರೆಗೆ ಎರಡು ಮೆಟ್ರೋ ಮಾರ್ಗ ಸಂಚಾರ ಆರಂಭಿಸಲು ನಾನು 2023 ರ ಅಕ್ಟೋಬರ್ 5 ರಂದು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದೆ. ಆ ಮೂಲಕ ಪ್ರಧಾನ ಮಂತ್ರಿಗಳು ಮತ್ತು ಕರ್ನಾಟಕ ಮುಖ್ಯಮಂತ್ರಿಗಳು ಎರಡು ವಾರಗಳಲ್ಲಿ ಔಪಚಾರಿಕವಾಗಿ ರಾಷ್ಟ್ರಕ್ಕೆ ಸಮರ್ಪಿಸುವುದಾಗಿ ಭಾರತ ಸರ್ಕಾರ ಸ್ಪಂದಿಸಿದೆ.

ಬಿಎಂಆರ್ಸಿಎಲ್​ನ ಪೂರ್ವ-ಪಶ್ಚಿಮ ಕಾರಿಡಾರ್ನ ಈ ಎರಡು ಪ್ರಮುಖ ಮಾರ್ಗಗಳು ಪ್ರಯಾಣಿಕರಿಗೆ ತಕ್ಷಣದ ಅನುಕೂಲವನ್ನು ಒದಗಿಸುವ ಸಲುವಾಗಿ, ಮೇಲಿನ ಎರಡು ವಿಭಾಗಗಳನ್ನು 2023 ರ ಅಕ್ಟೋಬರ್ 9 ರಿಂದ ಕಾರ್ಯನಿರ್ವಹಿಸಲು ನಾವು ನಿರ್ಧರಿಸಿದ್ದೇವೆ ಎಂದಿದ್ದಾರೆ.

ಡಿಕೆ ಶಿವಕುಮಾರ್ ಟ್ವೀಟ್

ಬಿಜೆಪಿ ಸಂಸದರಿಂದ ಪ್ರಧಾನಿ ಮೋದಿ ಧನ್ಯವಾದ 

ಕೇಂದ್ರ ಸರ್ಕಾರ ನೇರಳೇ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರಕ್ಕೆ ಗ್ರೀನ್‌ ಸಿಗ್ನಲ್ ಕೊಟ್ಟ ಹಿನ್ನೆಲೆ ಬೆಂಗಳೂರಿನ ಬಿಜೆಪಿ ಸಂಸದರಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಸಂಬಂಧ ಸಂಸದರಾದ ಡಿವಿ ಸದಾನಂದ ಗೌಡ, ಪಿ.ಸಿ ಮೋಹನ್, ತೇಜಸ್ವಿ ಸೂರ್ಯರಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. ಬೆಂಗಳೂರು ಜನತೆ ಪರವಾಗಿ ಪ್ರಧಾನಿಯವರಿಗೆ ಬಿಜೆಪಿ ಸಂಸದರು ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ: ಬೈಯಪ್ಪನಹಳ್ಳಿ- ಕೆಆರ್ ಪುರ ಮೆಟ್ರೋ ಉದ್ಘಾಟನೆ ವಿಳಂಬ: ರಾಹುಲ್ ಗಾಂಧಿ ಸಮಯಕ್ಕಾಗಿ ಬೆಂಗಳೂರು ಜನ ಕಾಯುವ ಅಗತ್ಯವಿಲ್ಲ ಎಂದ ತೇಜಸ್ವಿ ಸೂರ್ಯ

ನಮ್ಮ ಮೆಟ್ರೋದ ನೇರಳೆ ಬಣ್ಣದ ಕೆಆರ್​ಪುರಂ-ಬೈಯಪ್ಪನಹಳ್ಳಿ ಮತ್ತು ಕೆಂಗೇರಿ-ಚಲ್ಲಘಟ್ಟ ಎರಡು ಮಾರ್ಗಗಳು ನಾಳೆಯಿಂದ ಸಂಚಾರ ಹಿನ್ನೆಲೆ ಉದ್ಘಾಟನೆಗೆ ಬಿಜೆಪಿ ನಾಯಕರು ಸಿದ್ದತೆ ಮಾಡುಕೊಳ್ಳುತ್ತಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಟ್ವೀಟ್​

ಕೆಆರ್​ಪುರಂ-ಬೈಯಪ್ಪನಹಳ್ಳಿ ಮತ್ತು ಕೆಂಗೇರಿ-ಚಲ್ಲಘಟ್ಟ ಎರಡು ಮಾರ್ಗಗಳ ಮೆಟ್ರೋ ಆರಂಭದಿಂದ ಬೆಂಗಳೂರು ಪೂರ್ವದ ಜನದಟ್ಟಣೆ ಕಡಿಮೆ ಆಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಅ.6 ರಿಂದ ನಮ್ಮ ಮೆಟ್ರೋ ನೇರಳೆ ಮಾರ್ಗ ಪೂರ್ಣ ಪ್ರಮಾಣದ ಸಂಚಾರ ಸಾಧ್ಯತೆ

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗೆ ಕೆಆರ್​ಪುರಂ-ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗವನ್ನು ಪ್ರಾರಂಭಿಸಲು ನಿರಂತರ ವಿಳಂಬ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಪ್ರತಿದಿನ ಸುಮಾರು 5 ರಿಂದ 6 ಲಕ್ಷ ಜನರು ಬೆಂಗಳೂರು ಮೆಟ್ರೋವನ್ನು ಬಳಸುತ್ತಾರೆ. ಬೈಯಪ್ಪನಹಳ್ಳಿ-ಕೆಆರ್ ಪುರಂ ಮೆಟ್ರೋ ವಿಭಾಗವು ತೆರೆದರೆ, ಸುಮಾರು 50-60 ಪ್ರತಿಶತದಷ್ಟು ಜನರಿಗೆ ಅನುಕೂಲವಾಗಲಿದೆ ಎಂದಿದ್ದರು.

ರಾಜ್ಯ ಸರ್ಕಾರವು ಎಲ್ಲಾ ಅನುಮೋದನೆಗಳು ಮತ್ತು ಹಸಿರು ನಿಶಾನೆಗಳನ್ನು ಪಡೆದಿದ್ದರೂ ಸಹ, ಸಿಎಂಆರ್‌ಎಸ್ ಪರಿಶೀಲನೆಯ ನಂತರವೂ ಈ ಮಾರ್ಗವನ್ನು ತೆರೆಯಲು ವಿಳಂಬ ಮಾಡುತ್ತಿದೆ ಎಂದು ಸೂರ್ಯ ವಾಗ್ದಾಳಿ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:18 pm, Sun, 8 October 23