AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ! ಮದ್ಯ ಸೇವನೆ ಪ್ರಮಾಣ ಮಾತ್ರ ಇಳಿಕೆ

ಕರ್ನಾಟಕದಲ್ಲಿ ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದುಬಂದಿದೆ. 2026ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಅಬಕಾರಿ ಆದಾಯ ಶೇ 13.4ರಷ್ಟು ಏರಿಕೆಯಾಗಿದೆ. ಆದರೆ ವ್ಯಕ್ತಿಯ ಸರಾಸರಿ ಮದ್ಯ ಸೇವನೆ ಪ್ರಮಾಣ ಶೇ2.4ರಷ್ಟು ಇಳಿಕೆಯಾಗಿದೆ. ಹೊಸ ಮದ್ಯ ತೆರಿಗೆ ನೀತಿ, ಬಿಯರ್ ಮತ್ತು ವೈನ್ ಮಾರಾಟದಲ್ಲಿನ ಏರಿಕೆ ಸೇರಿದಂತೆ ಮದ್ಯ ಮಾರುಕಟ್ಟೆಯ ಕುತೂಹಲಕಾರಿ ಅಂಕಿಅಂಶಗಳ ವಿವರ ಇಲ್ಲಿದೆ.

ಕರ್ನಾಟಕದಲ್ಲಿ ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ! ಮದ್ಯ ಸೇವನೆ ಪ್ರಮಾಣ ಮಾತ್ರ ಇಳಿಕೆ
ಸಾಂದರ್ಭಿಕ ಚಿತ್ರ
ಭಾವನಾ ಹೆಗಡೆ
|

Updated on: Nov 13, 2026 | 10:04 AM

Share

ಮುಖ್ಯಾಂಶಗಳು

  • ಕರ್ನಾಟಕದಲ್ಲಿ ವ್ಯಕ್ತಿಯ ಸರಾಸರಿ ಮದ್ಯ ಸೇವನೆ ಪ್ರಮಾಣ ಶೇ 2.4ರಷ್ಟು ಇಳಿಕೆ.
  • ರಾಜ್ಯ ಸರ್ಕಾರದ ಅಬಕಾರಿ ಆದಾಯ ಆರು ತಿಂಗಳಲ್ಲಿ ಶೇ13.4ರಷ್ಟು ಏರಿಕೆ.
  • ಬಿಯರ್, ವೈನ್ ಮಾರಾಟದ ಪಾಲು ಶೇ 36ರಿಂದ ಶೇ 45ಕ್ಕೆ ಹೆಚ್ಚಳ.

ಬೆಂಗಳೂರು, ನವೆಂಬರ್ 13: ಕರ್ನಾಟಕದಲ್ಲಿ ಮದ್ಯ ಮಾರಾಟದಿಂದ ಸರ್ಕಾರದ ಆದಾಯ ಹೆಚ್ಚಾಗುತ್ತಿದ್ದರೂ, ವ್ಯಕ್ತಿಯೊಬ್ಬರ ಸರಾಸರಿ ಮದ್ಯ ಸೇವನೆಯ ಪ್ರಮಾಣ ಇಳಿಕೆಯಾಗಿದೆ. ರಾಜ್ಯದಲ್ಲಿ ಜಾರಿಗೆ ತಂದಿರುವ ಹೊಸ ಮದ್ಯ ತೆರಿಗೆ ನೀತಿ ಗ್ರಾಹಕರ ಕುಡಿಯುವ ಅಭ್ಯಾಸದ ಮೇಲೆ ಪರಿಣಾಮ ಬೀರಿರುವ ಸೂಚನೆಗಳು ಕಂಡುಬಂದಿವೆ. ಮೇ ತಿಂಗಳಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಪ್ರತಿ ವ್ಯಕ್ತಿಯ ಶುದ್ಧ ಆಲ್ಕೋಹಾಲ್ ಸೇವನೆ ಪ್ರಮಾಣ ಶೇ 2.4ರಷ್ಟು ಕಡಿಮೆಯಾಗಿದೆ. ಮತ್ತೊಂದೆಡೆ, ಸರ್ಕಾರದ ಅಬಕಾರಿ ಆದಾಯದಲ್ಲಿ ಶೇ 13.4ರಷ್ಟು ಏರಿಕೆಯಾಗಿದೆ.

ಮದ್ಯ ಸೇವನೆ ಪ್ರಮಾಣದಲ್ಲಿ ಶೇ 2.4ರಷ್ಟು ಇಳಿಕೆ!

ಬ್ರೂವರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (BAI) ನೀಡಿರುವ ಮಾಹಿತಿಯ ಪ್ರಕಾರ, 2026ರ ಮೇಯಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಕರ್ನಾಟಕದಲ್ಲಿ ಪ್ರತಿ ವ್ಯಕ್ತಿಯ ಶುದ್ಧ ಆಲ್ಕೋಹಾಲ್ ಸೇವನೆ 1.59 ಲೀಟರ್‌ಗೆ ಇಳಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಈ ಪ್ರಮಾಣ 1.63 ಲೀಟರ್ ಇತ್ತು. ಅಂದರೆ ಶೇ 2.4ರಷ್ಟು ಇಳಿಕೆ ದಾಖಲಾಗಿದೆ.

ಇದಕ್ಕೆ ಪ್ರಮುಖ ಕಾರಣಗಳಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಆಲ್ಕೋಹಾಲ್ ಇನ್ ಬೆವರೇಜ್ (AIB) ತೆರಿಗೆ ನೀತಿಯೂ ಒಂದಾಗಿದೆ. ಮೇ 11ರಿಂದ ಜಾರಿಗೆ ಬಂದಿರುವ ಈ ನೀತಿಯಡಿ, ಪಾನೀಯದಲ್ಲಿರುವ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ ಗ್ರಾಹಕರು ಕಡಿಮೆ ಆಲ್ಕೋಹಾಲ್ ಅಂಶವಿರುವ ಪಾನೀಯಗಳತ್ತ ಒಲವು ತೋರುತ್ತಿದ್ದಾರೆ ಎಂದು BAI ತಿಳಿಸಿದೆ.

ಸರ್ಕಾರದ ಅಬಕಾರಿ ಆದಾಯದಲ್ಲಿ ಭರ್ಜರಿ ಏರಿಕೆ!

ಮದ್ಯ ಸೇವನೆಯ ಪ್ರಮಾಣ ಕಡಿಮೆಯಾಗಿದ್ದರೂ ರಾಜ್ಯದ ಅಬಕಾರಿ ಆದಾಯ ಮಾತ್ರ ಗಣನೀಯವಾಗಿ ಹೆಚ್ಚಾಗಿದೆ. 2026ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಕರ್ನಾಟಕ ಸರ್ಕಾರದ ಅಬಕಾರಿ ಆದಾಯ 22,191.63 ಕೋಟಿ ರೂಪಾಯಿಗೆ ತಲುಪಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 13.4ರಷ್ಟು ಏರಿಕೆಯಾಗಿದೆ.

ಇನ್ನೊಂದೆಡೆ, ಒಟ್ಟು ಮದ್ಯ ಮಾರಾಟದ ಪ್ರಮಾಣ ಶೇ.16ರಷ್ಟು ಹೆಚ್ಚಾಗಿದೆ. ಬಿಯರ್ ಮತ್ತು ವೈನ್ ಮಾರಾಟದ ಪಾಲು ಶೇ.36ರಿಂದ ಶೇ 45ಕ್ಕೆ ಏರಿಕೆಯಾಗಿದೆ. ಕಡಿಮೆ ದರದ ಭಾರತೀಯ ನಿರ್ಮಿತ ವಿದೇಶಿ ಮದ್ಯದ (IMFL) ಕೆಲವು ತಯಾರಕರು ತಮ್ಮ ಉತ್ಪನ್ನಗಳ ಆಲ್ಕೋಹಾಲ್ ಪ್ರಮಾಣವನ್ನು ಶೇ 42.8ರಿಂದ ಶೇ 40ಕ್ಕೆ ಇಳಿಸಿದ್ದಾರೆ. ಕರ್ನಾಟಕದಲ್ಲಿ ಮಾರಾಟವಾಗುವ IMFLನ ಸರಾಸರಿ ಆಲ್ಕೋಹಾಲ್ ಪ್ರಮಾಣ ಶೇ 40.5ಕ್ಕೆ ಇಳಿದಿದೆ ಎಂದು BAI ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
ಲಾಭ ಪಡೆಯಲು ಕಳ್ಳಾಟ ಆಡಿದ್ರಾ ಆಸಿಯಾ? ಸೌಂದರ್ಯಾ ಛೀಮಾರಿ
ಲಾಭ ಪಡೆಯಲು ಕಳ್ಳಾಟ ಆಡಿದ್ರಾ ಆಸಿಯಾ? ಸೌಂದರ್ಯಾ ಛೀಮಾರಿ
ಇಂದು ಈ ರಾಶಿಯವರು ಅತಿಯಾಗಿ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಅತಿಯಾಗಿ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ
ಡಾ.ರಮ್ಯಾ ಬರೆದಿರುವ ‘ಚಲಿಸುವ ಬಂಡೆ’ ಪುಸ್ತಕದಲ್ಲಿ ಯಾವೆಲ್ಲಾ ವಿಚಾರಗಳಿವೆ?
ಡಾ.ರಮ್ಯಾ ಬರೆದಿರುವ ‘ಚಲಿಸುವ ಬಂಡೆ’ ಪುಸ್ತಕದಲ್ಲಿ ಯಾವೆಲ್ಲಾ ವಿಚಾರಗಳಿವೆ?
ಲೀಲಾವತಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ವಿನೋದ್ ರಾಜ್ ಬೇಸರ
ಲೀಲಾವತಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ವಿನೋದ್ ರಾಜ್ ಬೇಸರ
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಹೊಸ ವಿನ್ಯಾಸದ ಸಮವಸ್ತ್ರ?
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಹೊಸ ವಿನ್ಯಾಸದ ಸಮವಸ್ತ್ರ?
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್
ವಾಯುವ್ಯ ಕರ್ನಾಟಕ ಸಾರಿಗೆ ಹೆಸರು ಬದಲಾವಣೆಗೆ ಸರ್ಕಾರ ಆದೇಶ
ವಾಯುವ್ಯ ಕರ್ನಾಟಕ ಸಾರಿಗೆ ಹೆಸರು ಬದಲಾವಣೆಗೆ ಸರ್ಕಾರ ಆದೇಶ