ಬೆಂಗಳೂರಿನಲ್ಲಿ ನೀರಿನ ದಾಹ ತಣಿಸಲು 128 ವರ್ಷಗಳ ಹಳೆಯದಾದ ಸೋಲದೇವನಹಳ್ಳಿ ಪಂಪ್​ ಸ್ಟೇಷನ್​ಗೆ ಮರು ಜೀವ

|

Updated on: Apr 15, 2024 | 8:45 AM

ಬೆಂಗಳೂರು ನೀರು ಸರಬರಾಜು ಮತ್ತು ಒಳಚಂಡಿ ಮಂಡಳಿ ಸೋಲದೇವನಹಳ್ಳಿಯಲ್ಲಿರುವ 128 ವರ್ಷಗಳ ಹಳೆಯದಾದ ಪಂಪ್​ ಸ್ಟೇಷನ್ ಅನ್ನು ಮರು ಪ್ರಾರಂಭಿಸಲು ನಿರ್ಧರಿಸಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಏಪ್ರಿಲ್​ 20 ರಂದು ಪಂಪ ಸ್ಟೇಷನ್​ ಕಾರ್ಯಾರಂಭ ಮಾಡಲಿದೆ.

ಬೆಂಗಳೂರಿನಲ್ಲಿ ನೀರಿನ ದಾಹ ತಣಿಸಲು 128 ವರ್ಷಗಳ ಹಳೆಯದಾದ ಸೋಲದೇವನಹಳ್ಳಿ ಪಂಪ್​ ಸ್ಟೇಷನ್​ಗೆ ಮರು ಜೀವ
ಸೋಲದೇವನಹಳ್ಳಿ ಪಂಪ್​ ಸ್ಟೇಷನ್
Follow us on

ಬೆಂಗಳೂರು, ಏಪ್ರಿಲ್​ 15: ನೀರಿಗಾಗಿ ಬೆಂಗಳೂರಿನ (Bengaluru) ಜನರು ಪರದಾಡುತ್ತಿದ್ದಾರೆ. ಉದ್ಭವವಾಗಿರುವ ನೀರಿನ ಸಮಸ್ಯೆಯನ್ನು ಬಗೆಹರಲಿಸಲು ಸರ್ಕಾರ ಸಾಕಷ್ಟು ಪ್ರಯತ್ನ ಪಡುತ್ತಿದೆ. ಈ ಪ್ರಯತ್ನದ ಒಂದು ಭಾಗವೆಂಬಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚಂಡಿ ಮಂಡಳಿ (BWSSB) ಸೋಲದೇವನಹಳ್ಳಿಯಲ್ಲಿರುವ 128 ವರ್ಷಗಳ ಹಳೆಯದಾದ ಪಂಪ್​ ಸ್ಟೇಷನ್ (Soladevanahalli Pump Station)​​ ಅನ್ನು ಮರು ಪ್ರಾರಂಭಿಸಲು ನಿರ್ಧರಿಸಿದೆ.

ಅಂದುಕೊಂಡಂತೆ ಎಲ್ಲವು ನಡೆದರೆ ಏಪ್ರಿಲ್​ 20 ರಂದು ಪಂಪ ಸ್ಟೇಷನ್​ ಕಾರ್ಯಾರಂಭ ಮಾಡಲಿದೆ. ಈ ಪಂಪ ಸ್ಟೇಷನ್​ ಮುಖಾಂತರ ಹೇಸರಗಟ್ಟ ಕೆರೆಯಿಂದ 0.3 ಟಿಎಂಸಿ ನೀರನ್ನು ನಗರಕ್ಕೆ ಸರಬರಾಜು ಮಾಡಬಹುದು.

ಬೆಂಗಳೂರು ಸುಸಜ್ಜಿತ ನೀರು ಸರಬರಾಜು ವ್ಯವಸ್ಥೆ ಹೊಂದಿರುವ ದೇಶದ ಎರಡನೇ ನಗರವಾಗಿದೆ. 1873ರಲ್ಲಿ ಬೆಂಗಳೂರಿನಲ್ಲಿ ವಾಟರ್​ ಟ್ಯಾಂಕರ್​ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ 1857-77 ಎರಡೂವರೆ ವರ್ಷಗಳ ಕಾಲ ಆವರಿಸಿದ ಬರಗಾಲದಿಂದ ನೀರಿನ ಮೂಲಗಳು ಬತ್ತಿ ಹೋದವು.

ಇದನ್ನೂ ಓದಿ: ಈ ಸಣ್ಣ ವಿಧಾನ ಅನುಸರಿಸಿ ದಿನಕ್ಕೆ 600 ಲೀಟರ್ ನೀರು ಉಳಿಸಿ: ಬೆಂಗಳೂರು ವೈದ್ಯೆಯ ಸಲಹೆ ಈಗ ವೈರಲ್

ಈ ಸಮಯದಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಕೆ ಶೇಶಾದ್ರಿ ಅಯ್ಯರ ಅವರು ಒಂದು ಒಳ್ಳೆಯ ಯೋಜನೆಯನ್ನು ರೂಪಿಸಿದರು. ಅರ್ಕಾವತಿ ನದಿಯಿಂದ ಹೇಸರಘಟ್ಟ ಕೆರೆಗೆ ನೀರು ಹರಿಸಲು ​ ನಿರ್ಧರಿಸಿದರು. ಈ ಯೋಜನೆಗೆ ಮಹರಾಜ ಚಾಮರಾಜೇಂದ್ರ ಒಡೆಯರ ಅವರ ಹೆಸರು ಇಡಲಾಯಿತು.

ಪ್ರಸ್ತುತ ಹೇಸರಘಟ್ಟ ಕೆರೆಯಲ್ಲಿ 0.3 ಟಿಎಂಸಿ ನೀರು ಲಭ್ಯವಿದೆ. ಹೀಗಾಗಿ ಸೋಲದೇವನಹಳ್ಳಿ ಪಂಪಿಂಗ್​ ಸ್ಟೇಷನ್​ನಲ್ಲಿ ನೀರನ್ನು ಸಂಸ್ಕರಿಸಿ ಎಂಇಐ ಲೇಔಟ್​​ನಲ್ಲಿರುವ ಹೇಸರಘಟ್ಟ ಕೆರೆಯಲ್ಲಿ ಸಂಗ್ರಹಿಸಲಾಗುವುದು. ಬಳಿಕ ಟ್ಯಾಂಕರ್​ಗಳ ಮೂಲಕ ನೀರು ಸರಬರಾಜು ಮಾಡಲಾಗುವುದು. 128 ವರ್ಷಗಳು ಹಳೆಯದಾದ ಪಂಪಿಂಗ್​ ಸ್ಟೇಷನ್​ ಅನ್ನು ಏಪ್ರಿಲ್​ 20 ರಂದು ಮರು ಪ್ರಾರಂಭಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಡಬ್ಲ್ಯೂಎಸ್​ಎಸ್​ಬಿ ಅಧ್ಯಕ್ಷ ವಿ ರಾಮಪ್ರಸಾತ್​ ಮನೋಹರ್​ ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:45 am, Mon, 15 April 24