AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲವೆಡೆ ಸುರಿದ ಮಳೆ ಎಫೆಕ್ಟ್​​: ಕರ್ನಾಟಕದಲ್ಲಿ ವಿದ್ಯುತ್ ಬೇಡಿಕೆ ಶೇ.25ರಷ್ಟು ಕುಸಿತ

ರಾಜ್ಯದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೀರಾವರಿ ಪಂಪ್‌ಸೆಟ್ ಹಾಗೂ ಎಸಿ ಬಳಕೆ ಕಡಿಮೆಯಾಗಿ, ಕರ್ನಾಟಕದಲ್ಲಿ ದೈನಂದಿನ ವಿದ್ಯುತ್ ಬೇಡಿಕೆ ಶೇ.25ರಷ್ಟು ಕುಸಿತ ಕಂಡಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಗರಿಷ್ಠ ಬೇಡಿಕೆ 7,400 ಮೆಗಾವ್ಯಾಟ್‌ಗೆ ಇಳಿಕೆಯಾಗಿದ್ದರೆ, ಸೆಪ್ಟೆಂಬರ್ 30ರ ವೇಳೆಗೆ ಡಿಮ್ಯಾಂಡ್​​ 15,818 ಮೆಗಾವ್ಯಾಟ್‌ಗೆ ಕುಸಿತ ಕಂಡಿದೆ ಎನ್ನಲಾಗಿದೆ.

ಹಲವೆಡೆ ಸುರಿದ ಮಳೆ ಎಫೆಕ್ಟ್​​: ಕರ್ನಾಟಕದಲ್ಲಿ ವಿದ್ಯುತ್ ಬೇಡಿಕೆ ಶೇ.25ರಷ್ಟು ಕುಸಿತ
ಸಾಂದರ್ಭಿಕ ಚಿತ್ರImage Credit source: Getty Images
ಪ್ರಸನ್ನ ಹೆಗಡೆ
|

Updated on: Oct 02, 2026 | 4:30 PM

Share

ಬೆಂಗಳೂರು, ಅಕ್ಟೋಬರ್​​ 02: ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆಯ ಪರಿಣಾಮವಾಗಿ ಕರ್ನಾಟಕದ ದೈನಂದಿನ ವಿದ್ಯುತ್ ಬೇಡಿಕೆ ಗುರುವಾರದ ವೇಳೆಗೆ ಶೇ.25ರಷ್ಟು ಕುಸಿದಿದೆ. ಕೆಲವು ದಿನಗಳ ಹಿಂದೆ ರಾಜ್ಯದಲ್ಲಿ ದಿನಕ್ಕೆ 20,000 ಮೆಗಾವ್ಯಾಟ್‌ಗೂ ಅಧಿಕ ವಿದ್ಯುತ್ ಬೇಡಿಕೆ ದಾಖಲಾಗಿತ್ತು. ಆದರೆ ಅದರ ಬೇಡಿಕೆಯೀಗ ಸುಮಾರು 5,000 ಮೆಗಾವ್ಯಾಟ್‌ನಷ್ಟು ಇಳಿಕೆಯಾಗಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯಲ್ಲೇ ಇದೇ ಅವಧಿಯಲ್ಲಿ ವಿದ್ಯುತ್ ಬೇಡಿಕೆ 700 ಮೆಗಾವ್ಯಾಟ್‌ಗೂ ಅಧಿಕ ಕುಸಿದಿದೆ.

ವಿದ್ಯುತ್​​ ಬೇಡಿಕೆ ಕುಸಿತಕ್ಕೆ ಪ್ರಮುಖ ಕಾರಣಗಳೇನು?

ನೀರಾವರಿ ಪಂಪ್‌ಸೆಟ್‌ಗಳು (ಐಪಿ ಸೆಟ್‌ಗಳು) ಮತ್ತು ಹವಾನಿಯಂತ್ರಣ (ಎಸಿ) ವ್ಯವಸ್ಥೆಗಳ ಬಳಕೆ ಕಡಿಮೆಯಾಗಿರುವುದೇ ವಿದ್ಯುತ್ ಬೇಡಿಕೆ ಕುಸಿತಕ್ಕೆ ಪ್ರಮುಖ ಕಾರಣ ಎಂದು ಮೂಲಗಳು ತಿಳಿಸಿವೆ. ವಿಶೇಷವಾಗಿ ಮಳೆ ಕೊರತೆಯಿದ್ದ ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಹಲವು ರೈತರು ಭಾರಿ ಮಳೆಯಾದ ಹಿನ್ನೆಲೆಯಲ್ಲಿ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಿದ್ದಾರೆ. ಗ್ರಿಡ್ ಮೇಲಿನ ಪ್ರಮುಖ ಹೊರೆ ಐಪಿ ಸೆಟ್‌ಗಳು ಮತ್ತು ಎಸಿ ವ್ಯವಸ್ಥೆಗಳಿಂದ ಬರುತ್ತದೆ. ಮಳೆಯಿಂದ ತಾಪಮಾನ ಕಡಿಮೆಯಾಗಿರುವುದರಿಂದ ಎಸಿ ಬಳಕೆಯೂ ಗಣನೀಯವಾಗಿ ಇಳಿಕೆಯಾಗಿದೆ ಎಂದು ಇಂಧನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

LIVE TV

ಇದನ್ನೂ ಓದಿ: ಪವರ್​​ ಕಟ್​​ ನಡುವೆಯೂ ಕರ್ನಾಟಕದಲ್ಲಿ ವಿದ್ಯುತ್​​ ಬೇಡಿಕೆ ದಿನಕ್ಕೆ 2,000–3,000 ಮೆಗಾವ್ಯಾಟ್‌ಗಳಷ್ಟು ಹೆಚ್ಚಳ

ಕಳೆದ ವಾರದವರೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿದಿನ 148–149 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆಯಾಗುತ್ತಿತ್ತು. ಈ ವೇಳೆ ಗರಿಷ್ಠ ಬೇಡಿಕೆ 8,000–8,300 ಮೆಗಾವ್ಯಾಟ್‌ನಷ್ಟಿತ್ತು. ಆದರೆ ಇದೀಗ ಗರಿಷ್ಠ ಬೇಡಿಕೆ 7,400 ಮೆಗಾವ್ಯಾಟ್‌ಗೆ ಇಳಿಕೆಯಾಗಿದೆ. ಕರ್ನಾಟಕದಲ್ಲಿ ಸೆಪ್ಟೆಂಬರ್ 11ರಂದು 20,094 ಮೆಗಾವ್ಯಾಟ್‌ನಷ್ಟು ಗರಿಷ್ಠ ವಿದ್ಯುತ್ ಬೇಡಿಕೆ ದಾಖಲಾಗಿತ್ತಾದರೂ ಸೆಪ್ಟೆಂಬರ್ 30ರ ವೇಳೆಗೆ ಇದು 15,818 ಮೆಗಾವ್ಯಾಟ್‌ಗೆ ಇಳಿಕೆಯಾಗಿದೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More