Rice Price Hike: ತರಕಾರಿ, ಕರೆಂಟ್, ಮದ್ಯ ಆಯ್ತು ಈಗ ಅಕ್ಕಿ ಬೆಲೆ ಏರಿಕೆಗೆ ಚಿಂತನೆ
ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಜೊತೆಗೆ ಮುಂಗಾರು ಮಳೆ ಕೈಕೊಟ್ಟು ಭತ್ತ ಸಿಗುತ್ತಿಲ್ಲ. ಹೀಗಾಗಿ ಅಕ್ಕಿ ಬೆಲೆ ಏರಿಸಲು ಕರ್ನಾಟಕ ರೈಸ್ ಮಿಲ್ಲರ್ಸ್ ಫೆಡರೇಷನ್ ಚಿಂತನೆ ನಡೆಸಿದೆ.
ಬೆಂಗಳೂರು: ಪಂಚ ಗ್ಯಾರಂಟಿ ನೆಪ ಹೇಳಿ ಕಾಂಗ್ರೆಸ್ ಸರ್ಕಾರ(Congress Government) ಆಡಳಿತಕ್ಕೆ ಬಂತು. ಆದ್ರೆ ಈಗ ಒಂದೊಂದೇ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ತರಕಾರಿ ಬೆಲೆ ಗಗನಕ್ಕೇರಿದೆ(Vegetable Hike Increase). ಕರೆಂಟ್ ಬಿಲ್ ಡಬಲ್ ಆಗಿದೆ(Electricity Price Increased). ಮದ್ಯ ಬೆಲೆಯೂ ಏರಿಕೆಯಾಗಿದೆ(Liquor Price Hike), ಹಾಲಿನ ದರ(Milk) ಏರಿಕೆಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಜೊತೆಗೆ ಇದೀಗ ಅಕ್ಕಿ(Rice) ಬೆಲೆಯನ್ನೂ ಸಹ ಏರಿಕೆ ಮಾಡಲು ಕರ್ನಾಟಕ ರೈಸ್ ಮಿಲ್ಲರ್ಸ್ ಫೆಡರೇಷನ್ ಚಿಂತನೆ ನಡೆಸಿದೆ ಎಂಬ ಮಾಹಿತಿ ಸಿಕ್ಕಿದೆ.
ಗೃಹಜ್ಯೋತಿ ಯೋಜನೆಯಲ್ಲಿ 200 ಯೂನಿಟ್ ಫ್ರೀ ಕರೆಂಟ್ ಸಿಗುತ್ತದೆ ಎಂದು ಖುಷಿಯಲ್ಲಿದ್ದ ಜನರು ದುಪ್ಪಟ್ಟು ವಿದ್ಯುತ್ ದರದ ಬಿಲ್ ನೋಡಿ ಶಾಕ್ ಆಗಿದ್ದಾರೆ. ಕರೆಂಟ್ ಬೆಲೆ ಏರಿಕೆ ಭಾರಿ ಹೊಡೆತ ಕೊಟ್ಟಿದೆ. ಸದ್ಯ ಈಗ ಅಕ್ಕಿ ಬೆಲೆ ಏರಿಸಲು ಕರ್ನಾಟಕ ರೈಸ್ ಮಿಲ್ಲರ್ಸ್ ಫೆಡರೇಷನ್ ಚಿಂತನೆ ನಡೆಸುತ್ತಿದೆ. ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಜೊತೆಗೆ ಮುಂಗಾರು ಮಳೆ ಕೈಕೊಟ್ಟು ಭತ್ತ ಸಿಗುತ್ತಿಲ್ಲ. ಹೀಗಾಗಿ ಅಕ್ಕಿ ಬೆಲೆ ಏರಿಸಲು ಮುಂದಾಗಿದೆ.
ಇದನ್ನೂ ಓದಿ: ಜನರ ಜೇಬು ಸುಡಲಿದೆ ವಿದ್ಯುತ್ ದರ ಏರಿಕೆ, ಹೋಟೆಲ್ನಲ್ಲಿ ಕಾಫಿ-ಟೀ, ತಿಂಡಿ, ಊಟದ ದರ ಹೆಚ್ಚಳ
ಕೆಜಿಗೆ 5 ರಿಂದ 10 ರುಪಾಯಿ ಏರಿಕೆ ಮಾಡಲು ಕರ್ನಾಟಕ ರೈಸ್ ಮಿಲ್ಲರ್ಸ್ ಫೆಡರೇಷನ್ ಚಿಂತನೆ ನಡೆಸಿದೆ. ಕರೆಂಟ್ ಬಿಲ್ ಹೆಚ್ಚಳದಿಂದಾಗಿ ಮಿಲ್ಗಳಿಗೆ ಭಾರಿ ಹೊಡೆತ ಬೀಳುತ್ತಿದೆ. ಜೊತೆಗೆ ಎಪಿಎಂಸಿ ಟ್ಯಾಕ್ಸ್ ಕೂಡ ಹೊರೆಯಾಗುತ್ತಿದೆ. ಮಳೆ ಇಲ್ಲದೇ ಇರುವ ಕಾರಣ ಭತ್ತ ಸಿಗುತ್ತಿಲ್ಲ. ಹೀಗಾಗಿ ಬೆಲೆ ಏರಿಕೆ ಮಾಡಲು ರೈಸ್ ಮಿಲ್ಲರ್ಸ್ ಅಸೋಸಿಯೇಷನ್ ಚಿಂತನೆ ನಡೆಸಿದೆ. ಸಧ್ಯ ಈಗ ಒಂದು ಕೆಜಿ ಅಕ್ಕಿಗೆ 45 ರುಪಾಯಿ ಇದೆ. ಇದ್ರಲ್ಲಿ 5 ರಿಂದ 10 ರುಪಾಯಿ ಹೆಚ್ಚಾಗುವ ಸಾಧ್ಯತೆ ಇದೆ. ಸಧ್ಯ ಟ್ಯಾಕ್ಸ್, ಲೇಬರ್ ಖರ್ಚು, ಕರೆಂಟ್ ಬಿಲ್ ಏರಿಕೆ ಸಾಕಷ್ಡು ಹೊರೆಯಾಗುತ್ತಿದ್ದು, ಇದನ್ನ ಸರಿದೂಗಿಸಲು ಬೆಲೆ ಏರಿಕೆ ಅಸ್ತ್ರದ ಮೊರೆ ಹೋಗಲಿದೆ.
ಹೋಟೆಲ್ನಲ್ಲಿ ಕಾಫಿ-ಟೀ, ತಿಂಡಿ, ಊಟದ ದರ ಹೆಚ್ಚಳ
ಕರ್ನಾಟಕ ಸರ್ಕಾರ ಗೃಹಜ್ಯೋತಿ ಯೋಜನೆ ಜಾರಿಗೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಆದ್ರೆ, ಗೃಹಜ್ಯೋತಿ ಯೋಜನೆ ಜಾರಿಗೂ ಮುನ್ನ, ಇಂಧನ ಇಲಾಖೆ ವ್ಯಾಪಾರಸ್ಥರು ಮತ್ತು ಕೈಗಾರಿಕೋದ್ಯಮಿಗಳಿಗೆ ಬಿಗ್ ಶಾಕ್ ನೀಡಿದೆ. ವಿದ್ಯುತ್ ದರವನ್ನ ಏಕಾಏಕಿ ಹೆಚ್ಚಳ ಮಾಡಿರುವುದರಿಂದ ದುಪ್ಪಟ್ಟು ಬಿಲ್ ಕಟ್ಟಬೇಕಾಗಿದೆ. ವಿದ್ಯುತ್ ದರ ಹೆಚ್ಚಳ ಇದೀಗ ಜನರ ಜೇಬು ಸುಡುತ್ತಿದೆ. ಹೌದು…ಹೋಟೆಲ್ (Hotel) ಮಾಲೀಕರು ಸಹ ದರ ಏರಿಕೆ ಮಾಡಿದ್ದಾರೆ. ಹೀಗಾಗಿ ಹೋಟೆಲ್ಗಳಲ್ಲಿ ಕಾಫಿ, ಟೀ-ತಿಂಡಿ ಹಾಗೂ ಊಟದ ದರ ಹೆಚ್ಚಳವಾಗಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ